Select Your Language

Notifications

webdunia
webdunia
webdunia
webdunia

ಹಿಂದೂ ವಿವಾಹ ಕಾಯ್ದೆ: ಭಾರತದ ತಜ್ಞರ ಸಂಪರ್ಕಕ್ಕೆ ಪಾಕ್‌ ನಿರ್ಧಾರ

ಹಿಂದೂ ವಿವಾಹ ಕಾಯ್ದೆ: ಭಾರತದ ತಜ್ಞರ ಸಂಪರ್ಕಕ್ಕೆ ಪಾಕ್‌ ನಿರ್ಧಾರ
ಇಸ್ಲಾಮಾಬಾದ್‌ , ಬುಧವಾರ, 12 ಅಕ್ಟೋಬರ್ 2011 (18:42 IST)
ಹಿಂದೂ ವಿವಾಹ ಕಾಯ್ದೆಯ ಕುರಿತು ಪಾಕಿಸ್ತಾನ ಸರಕಾರ ರಚಿಸಿರುವ ಕರಡು ಮಸೂದೆಯಲ್ಲಿ ವಿಚ್ಛೇದನ ಸೇರಿದಂತೆ ಇರುವ ಹಲವಾರು ವಿಷಯಗಳ ಕುರಿತು ಹಿಂದೂ ಸಮುದಾಯದವರು ಒಮ್ಮತ ವ್ಯಕ್ತಪಡಿಸದೇ ಇರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಅಧಿಕಾರಿಗಳು ಭಾರತದ ತಜ್ಞರನ್ನು ಸಂಪರ್ಕಿಸುವ ಸಾಧ್ಯತೆಗಳಿವೆ ಎಂದು ಸಚಿವರೊಬ್ಬರು ತಿಳಿಸಿದ್ದಾರೆ.

ಸರಕಾರ ರಚಿಸಿರುವ ಹಿಂದೂ ಸಮುದಾಯದವರ ವಿವಾಹ ನೋಂದಣಿ ಕಾಯ್ದೆ ಕರಡಿನಲ್ಲಿರುವ ವಿಚ್ಚೇದನ ಕುರಿತು ಅಲ್ಪ ಸಂಖ್ಯಾತರಾಗಿರುವ ಹಿಂದೂ ಸಮುದಾಯ ಹಾಗೂ ಸರಕಾರದ ನಡುವೆ ಭಿನ್ನಾಭಿಪ್ರಾಯಗಳಿರುವುದರಿಂದ ಈ ಕಾಯ್ದೆಯ ಕರಡು ಮಸೂದೆ ಜಾರಿಗೆ ಹಿನ್ನಡೆಯಾಗಿದೆ.

ರಾಷ್ಟ್ರೀಯ ಸೌಹಾರ್ದತಾ ಸಚಿವ ಅಕ್ರಂ ಮಾಶಿಶ್‌ ಗಿಲ್‌ ಅವರು 1956ರ ಹಿಂದೂ ವಿವಾಹ ಕಾಯ್ದೆಯನ್ನಾಧರಿಸಿಯೇ ಕರಡಿನಲ್ಲಿ ವಿಚ್ಚೇದನ ಕುರಿತ ಅಂಶಗಳನ್ನು ಪ್ರಸ್ತಾಪಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಈ ಕರಡಿನ ಕುರಿತು ಹಿಂದೂ ಸಮುದಾಯದ ನಾಯಕರು ಮತ್ತು ತಮ್ಮ ಸಚಿವಾಲಯದ ನಡುವೆ ಒಮ್ಮತ ಮೂಡದೇ ಇದ್ದರೆ ಈ ಕುರಿತು ಭಾರತದ ತಜ್ಞರನ್ನು ಸಂಪರ್ಕಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಪರಿಷ್ಕೃತ ಕರಡು ಮಸೂದೆಯು ಅಂತಿಮ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.

ವಿಚ್ಚೇದನವು ಹಿಂದೂ ವಿವಾಹ ಕಾಯ್ದೆಯ ಒಂದು ಭಾಗವಾಗಿದೆ ಎಂದು ಅಕ್ರಂ ಮಾಶಿಹ್‌ ಗಿಲ್‌ ಅವರು ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ಗೆ ತಿಳಿಸಿದ್ದಾರೆ.

ಪಾಕಿಸ್ತಾನ ಸರಕಾರವು 2008ರಲ್ಲೇ ಹಿಂದೂ ವಿವಾಹ ಕಾಯ್ದೆಯ ಕರಡು ರಚಿಸಿತ್ತಾದರೂ ಹಿಂದೂ ಸಮುದಾಯದ ನಾಯಕರು ತಮ್ಮ ಧರ್ಮದಲ್ಲಿ ವಿಚ್ಚೇ‌ದನಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದರಿಂದ ಉಂಟಾಗಿದ್ದ ಭಿನ್ನಾಭಿಪ್ರಾಯದ ಪರಿಣಾಮವಾಗಿ ಮಸೂದೆ ಜಾರಿಯಾಗಿರಲಿಲ್ಲ.

ಹಿಂದೂ ಧರ್ಮದಲ್ಲಿ ವಿಚ್ಚೇದನದ ಪರಿಕಲ್ಪನೆ ಇಲ್ಲ, ಆದ್ದರಿಂದ ನಾವು ಈ ಕಾಯ್ದೆಗೆ ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನ ಹಿಂದೂ ಒಕ್ಕೂಟದ ಮುಖ್ಯಸ್ಥ ರಮೇಶ್‌ ಕುಮಾರ್ ಹೇಳಿದ್ದಾರೆ.

ಕುಮಾರ್‌ ಅವರು ಪಾಕಿಸ್ತಾನ ಸಂಸತ್‌ನ ಮುಸ್ಲಿಮೇತರ ಸದಸ್ಯರಾಗಿದ್ದು, ವಿವಾಹ ವಿಚ್ಚೇದನದ ವಿರುದ್ಧ ಹಲವಾರು ವರ್ಷಗಳಿಂದ ಪ್ರಚಾರ ಮಾಡುತ್ತಿದ್ದಾರೆ.

Share this Story:

Follow Webdunia kannada