Select Your Language

Notifications

webdunia
webdunia
webdunia
webdunia

ಹತ್ಯೆ ಯತ್ನದಿಂದ ಕೂದಲೆಳೆಯ ಅಂತರದಿಂದ ಪಾರಾದ ಮುಷರಫ್

ಹತ್ಯೆ ಯತ್ನದಿಂದ ಕೂದಲೆಳೆಯ ಅಂತರದಿಂದ ಪಾರಾದ ಮುಷರಫ್
, ಗುರುವಾರ, 3 ಏಪ್ರಿಲ್ 2014 (12:14 IST)
PR
PR
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಗಾರ ಮತ್ತು ಅಧ್ಯಕ್ಷರಾಗಿದ್ದ ಪರ್ವೇಜ್ ಮುಷರಫ್ ಅವರು ಗುರುವಾರ ಹತ್ಯೆ ಯತ್ನದಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ನಡೆದಿದೆ. ಮುಷರಫ್ ತಮ್ಮ ಬೆಂಗಾವಲು ವಾಹನಗಳೊಂದಿಗೆ ಹಾದುಹೋಗಬೇಕಿದ್ದ ಮಾರ್ಗದಲ್ಲಿ ಸ್ವಲ್ಪ ಮುಂಚೆ ಬಾಂಬ್ ಸ್ಫೋಟಿಸಿದೆ. ಮುಷರಫ್ ಸೇನಾ ಆಸ್ಪತ್ರೆಯಿಂದ ಇಸ್ಲಾಮಾಬಾದ್ ಹೊರವಲಯದ ತಮ್ಮ ನಿವಾಸಕ್ಕೆ ಬರುವ ಮಾರ್ಗದಲ್ಲಿ ಬಾಂಬ್ ಹುದುಗಿಸಿಡಲಾಗಿತ್ತು.ಸುಮಾರು 20 ಕೆಜಿ ಸ್ಫೋಟಕ ಉಪಕರಣವನ್ನು ಸೇತುವೆ ಕೆಳಗಿನ ಪೈಪ್‌ಲೈನ್‌ನಲ್ಲಿ ಅಡಗಿಸಿಡಲಾಗಿತ್ತು.

ಮಾಜಿ ಅಧ್ಯಕ್ಷ ಮುಷರಫ್ ಆ ಮಾರ್ಗದಲ್ಲಿ ಹಾದುಹೋಗುವುದಕ್ಕೆ 20 ನಿಮಿಷಗಳಿಗೆ ಮುಂಚಿತವಾಗಿ ಬಾಂಬ್ ಸ್ಫೋಟಿಸಿದ್ದರಿಂದ ಮುಷರಫ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಮುಷರಫ್ ವಿರುದ್ಧ ಪಾಕಿಸ್ತಾನ ಕೋರ್ಟ್‌ನಲ್ಲಿ ದೇಶದ್ರೋಹದ ಆರೋಪವನ್ನು ಹೊರಿಸಲಾಗಿದೆ.

Share this Story:

Follow Webdunia kannada