Webdunia - Bharat's app for daily news and videos

Install App

ಸ್ನೇಹಿತರಿಲ್ಲದ ತನ್ನ ಮಗನಿಗಾಗಿ ಫೇಸ್ಬುಕ್ ನಲ್ಲಿ ಮನವಿ ಸಲ್ಲಿಸಿ 1.6 ಮಿಲಿಯನ್ ಸಂದೇಶಗಳನ್ನು ಪಡೆದ ತಾಯಿ

Webdunia
ಗುರುವಾರ, 13 ಫೆಬ್ರವರಿ 2014 (19:34 IST)
PR
PTI
ಏಕಾಂಗಿತನವನ್ನು ಫೀಲ್ ಮಾಡುತ್ತಿದ್ದ ತನ್ನ ಮಗನ ಮುಂಬರುವ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕಳುಹಿಸಿ ಎಂದು ತಾಯಿಯೊಬ್ಬಳು ಫೇಸ್ಬುಕ್ ನಲ್ಲಿ ಮನವಿ ಮಾಡಿದ್ದಕ್ಕೆ ಪ್ರತಿಯಾಗಿ 1.6 ಮಿಲಿಯನ್ ಸಂದೇಶಗಳು ಹರಿದು ಬಂದಿವೆ . ಅಮೇರಿಕಾದ ಮಿಚಿಗನ್ ರಾಜ್ಯದ ಸಣ್ಣ ಪಟ್ಟಣ ರಿಚ್ಲ್ಯಾಂಡ್ ನಲ್ಲಿ ವಾಸಿಸುತ್ತಿರುವ ಕಾಲಿನ್ ಕನ್ನಿಂಗ್ಹ್ಯಾಮ್ ನ ತಾಯಿ ಜೆನ್ನಿಫರ್ ಮಾರ್ಚ್ 9 ರಂದು ನಡೆಯಲಿರುವ ತಮ್ಮ ಮಗನ ಹುಟ್ಟುಹಬ್ಬದ ತನಕ ಹುಟ್ಟುಹಬ್ಬದ ಶುಭಾಶಯಗಳಿಂದ ತುಂಬಿದ್ದ ಪುಟವನ್ನು ರಹಸ್ಯವಾಗಿ ಇರಿಸಿಕೊಳ್ಳಲು ಬಯಸಿದ್ದಳು. ಜಾಗತಿಕ ಮಾಧ್ಯಮದಿಂದಾಗಿ ಈ ವಿಷಯ ಗುರುವಾರ ಬೆಳಕಿಗೆ ಬಂತು.

ಕಾಲಿನ್ ಆಟೀಸಮ್ ಗೆ ಹೋಲುವ ಒಂದು ಕಾಯಿಲೆಯಿಂದ ಬಳಲುತ್ತಿದ್ದು. ಈ ಕಾರಣ ಶಾಲೆಯಲ್ಲಿ ಹೆಚ್ಚಿನ ಸ್ನೇಹಿತರನ್ನು ಹೊಂದಿಲ್ಲ. ತನ್ನ ತಾಯಿ ಒಂದು ಹುಟ್ಟುಹಬ್ಬದ ಸಂತೋಷಕೂಟ ನಡೆಸುವ ಬಗ್ಗೆ ಕೇಳಿದಾಗ, ಅವನು ತನಗೆ ಗೆಳೆಯರೇ ಇಲ್ಲ, ಇನ್ನು ಪಾರ್ಟಿಗೆ ಯಾರು ಬರುತ್ತಾರೆ ಎಂದು ತಾಯಿಗೆ ಉತ್ತರಿಸಿದ್ದಾನೆ. ಹಾಗಾಗಿ " ಪಾರ್ಟಿಗಿಂತ ಉತ್ತಮವಾದ ಪದಗಳಿಂದ ಪ್ರೋತ್ಸಾಹಿಸಿ ಎಂದು ಜೆನ್ನಿಫರ್ ಫೇಸ್ಬುಕ್ ಲ್ಲಿ ಮನವಿಯನ್ನು ಪೋಸ್ಟ್ ಮಾಡಿದ್ದರು.

" ತನ್ನ ವೈಕಲ್ಯಗಳಿಂದಾಗಿ ಕಾಲಿನ್ ಸಾಮಾಜಿಕ ಕೌಶಲ್ಯಗಳನ್ನು ಸುಲಭವಾಗಿ ಮಾಡಲಾರ ಹಾಗಾಗಿ ಇತರ ಮಕ್ಕಳು ಅವರನ್ನು ಇಷ್ಟಪಡುವುದಿಲ್ಲ " ಎಂದು ಜೆನ್ನಿಫರ್ ಫೆಬ್ರವರಿ 2 ರಂದು ಫೇಸ್ಬುಕ್ ನಲ್ಲಿ ಬರೆದಿದ್ದಾರೆ.

ಕಾಲಿನ್ ತಾಯಿ ಫೇಸ್ಬುಕ್ ಪುಟ ಹೀಗಿದೆ:" ಈಗ ಅವನು 5 ನೇ ಗ್ರೇಡ್ ನಲ್ಲಿದ್ದಾನೆ. ಪಾದ್ರಿ, ಹಾಸ್ಯನಟ ಅಥವಾ ಮಿಷನರಿ ಆಗಬೇಕು ಎಂಬುದು ಅವನ ಜೀವನಾಕಾಂಕ್ಷೆ. ಗುಂಪುಗಳಲ್ಲಿ ಅಥವಾ ಚಟುವಟಿಕೆಗಳಲ್ಲಿ ಆತ ಸಂತೋಷವಾಗಿರಲಾರ. ಆದರೆ ಚರ್ಚ್ ನಲ್ಲಿ ಆತ ಅವರು ಅತ್ಯಂತ ಕ್ರಿಯಾಶೀಲನಾಗುರುತ್ತಾನೆ.ಚರ್ಚ್ ಗೆ ಬರುವ ಪ್ರತಿಯೊಬ್ಬರನ್ನು ತೆರೆದ ಹೃದಯದಿಂದ ಸ್ವಾಗತಿಸುತ್ತಾನೆ. ಕಾಲಿನ್ ತನ್ನ ನಿಂಟೆಂಡೊ 3DS ಮತ್ತು ಪೋಕ್ಮನ್ ನ್ನು ತುಂಬ ಇಷ್ಟ ಪಡುತ್ತಾನೆ ".

1 ದಿನದಲ್ಲಿ ಬಂದ ಪ್ರತಿಕ್ರಿಯೆಯಿಂದ ಆಕೆ ಮೂಕವಿಸ್ಮಿತಳಾದಳು. ಫೆಬ್ರವರಿ 9 ರಂದು ಹುಟ್ಟುಹಬ್ಬದ ಶುಭಾಶಯಗಳು 10,000 ದಾಟಿದ್ದವು. " ನಾವು 10,000 ಇಷ್ಟಗಳನ್ನು ಪಡೆದಿದ್ದೇವೆ, ನನಗೆ ನಂಬಲಾಗುತ್ತಿಲ್ಲ. ನಿಮಗೆಲ್ಲ ಧನ್ಯವಾದಗಳು. ನಾವು ನಿಮ್ಮೆಲರನ್ನು ಪ್ರೀತಿಸುತ್ತೇವೆ" ಎಂದು ಜೆನ್ನಿಫರ್ ಬರೆದಿದ್ದಾಳೆ.

ಫೇಸ್ಬುಕ್ ಪುಟದಲ್ಲಿ "ಜನ್ಮದಿನದ ಶುಭಾಶಯಗಳು ಕಾಲಿನ್ "ಎಂಬ ಸಂದೇಶ ಭಾವನಾತ್ಮಕ ಪೋಷಕರು ಮತ್ತು ಮಕ್ಕಳಿಂದಷ್ಟೇ ಅಲ್ಲದೇ ಅಮೇರಿಕಾದ ವಿವಿಧ ಸೇವಾ ಶಾಖೆಗಳಿಂದ ಹರಿದು ಬಂದಿವೆ( ನೌಕಾಪಡೆಯ ನಾವಿಕರು, ಸೈನಿಕರು, ವಿಮಾನ ಯೋಧರು,ಮತ್ತು ಸಿಐಡಿ ಘಟಕದವರು).

ಆತನ ಜನ್ಮದಿನದವರೆಗೆ ಇದನ್ನು ರಹಸ್ಯವಾಗಿಡ ಬೇಕೆಂದು ಬಯಸಿದ್ದ ಆತನ ತಾಯಿಗೆ ಶಾಲೆಯ ಕೆಲವು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಗುಟ್ಟು ಬಯಲಾಗುವ ಚಿಂತೆ ಕಾಡುತ್ತಿದೆ.ಆತನ ಪೋಷಕರು ಪತ್ರಿಕೆಗಳು ಮತ್ತು ಟಿವಿ ಕೇಂದ್ರಗಳಿಗೆ ಇಂಟರ್ವ್ಯೂ ನೀಡುವುದನ್ನು ನಿಲ್ಲಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments