Select Your Language

Notifications

webdunia
webdunia
webdunia
webdunia

ಸುಮಾತ್ರದಲ್ಲಿ 6.4 ತೀವ್ರತೆಯ ಭೂಕಂಪ

ಸುಮಾತ್ರದಲ್ಲಿ 6.4 ತೀವ್ರತೆಯ ಭೂಕಂಪ
, ಶನಿವಾರ, 6 ಜುಲೈ 2013 (15:56 IST)
ಜಕಾರ್ತ: ಇಂಡೋನೇಶಿಯಾ ದ್ವೀಪದ ಸುಮಾತ್ರದಲ್ಲಿ ಪ್ರಬಲವಾದ 6.4 ತೀವ್ರತೆಯ ಭೂಕಂಪ ಶನಿವಾರ ಅಪ್ಪಳಿಸಿದೆ ಎಂದು ಅಮೆರಿಕ ಬೌಗೋಳಿಕ ಸಮೀಕ್ಷೆ ಇಲಾಖೆ ತಿಳಿಸಿದ್ದು, ಯಾವುದೇ ಸುನಾಮಿ ಮುನ್ನೆಚ್ಚರಿಕೆಯನ್ನು ನೀಡಲಾಗಿಲ್ಲ ಎಂದು ಹೇಳಿದೆ. ಕೇವಲ 23 ಕಿಮೀ(14 ಮೈಲು) ಆಳದಲ್ಲಿ ಈ ಭೂಕಂಪ ಅಪ್ಪಳಿಸಿದ್ದು, ಸುಂಗೈಪೆನುವಿನ ಆಗ್ನೇಯಕ್ಕೆ 154 ಕಿಮೀ ದೂರದಲ್ಲಿ ಅಪ್ಪಳಿಸಿದೆ. ಯಾವುದೇ ಸುನಾಮಿಯ ಭೀತಿ ಎದುರಾಗಿಲ್ಲ ಎಂದು ಸ್ಥಳೀಯ ಪವನಶಾಸ್ತ್ರ,ವಾಯುಗುಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸುಮಾತ್ರದ ಉತ್ತರತುದಿಯ ಅಸೇಹ್ ಪ್ರಾಂತ್ಯದಲ್ಲಿ ಪ್ರಬಲ ಒಳನಾಡಿನ ಕಂಪನದ ಕೆಲವು ದಿನಗಳ ನಂತರ ಭೂಕಂಪ ಅಪ್ಪಳಿಸಿದೆ. ಈ ಕಂಪನದಲ್ಲಿ ಹತ್ತಾರು ಜನರು ಸಾವನ್ನಪ್ಪಿದ್ದರು ಮತ್ತು ಸಾವಿರಾರು ಜನರು ನಿರಾಶ್ರಿತರಾಗಿದ್ದರು. ಇಂಡೋನೇಶಿಯಾ ಪೆಸಿಫಿಕ್‌ನ 'ಬೆಂಕಿಯುಂಗುರ'ದ ಮೇಲೆ ಕುಳಿತುಕೊಂಡಿದ್ದು, ಅಲ್ಲಿ ಭೂತಟ್ಟೆಗಳು ಪರಸ್ಪರ ಘರ್ಷಿಸಿ ಭೂಕಂಪನ ಮತ್ತು ಜ್ವಾಲಾಮುಖಿಯ ಚಟುವಟಿಕೆಗಳು ಉಂಟಾಗುತ್ತಿವೆ.

Share this Story:

Follow Webdunia kannada