Webdunia - Bharat's app for daily news and videos

Install App

ಶ್ರೀಲಂಕಾದಲ್ಲಿ ಮಹಾತ್ಮ ಗಾಂಧಿ ಸೇರಿ ನಾಲ್ಕು ಪ್ರತಿಮೆಗಳ ಧ್ವಂಸ

Webdunia
ಶುಕ್ರವಾರ, 6 ಏಪ್ರಿಲ್ 2012 (17:50 IST)
PR
ಮಹಾತ್ಮಗಾಂಧಿ ಸೇರಿದಂತೆ ಹಲವು ಪ್ರಮುಖ ಗಣ್ಯರ ಮೂರ್ತಿಗಳನ್ನು ಒಡೆದು ಹಾಕಿರುವ ಘಟನೆ ಶ್ರೀಲಂಕಾ ದಕ್ಷಿಣ ನಗರವಾದ ಬಾಟ್ಟಿಕಾಲೋವಾದಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾತ್ಮ ಗಾಂಧಿ, ಲಾರ್ಡ್ ಬಾಡೆನ್ ಪೋವೆಲ್ ಹಾಗೂ ತಮಿಳು ಸ್ಕಾಲರ್ಸ್‌ ಮೂರ್ತಿಗಳನ್ನು ಒಡೆದು ಹಾಕಿರುವುದಾಗಿ ಪತ್ತೆಯಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂಬುದಾಗಿ ಲಂಕಾ ಸರ್ಕಾರ ಹೇಳಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ತಂಡವನ್ನು ಕಳುಹಿಸಲಾಗಿದ್ದು, ತನಿಖೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ರೋಹಾನಾ ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಗುರುವಾರವಷ್ಟೇ ಯುಎನ್‌ಎಚ್‌ಆರ್‌ಸಿಯಲ್ಲಿ ಅಮೆರಿಕ ಮಂಡಿಸಲಿರುವ ಶ್ರೀಲಂಕಾ ವಿರುದ್ಧದ ನಿರ್ಣಯಕ್ಕೆ ಭಾರತ ಬೆಂಬಲ ವ್ಯಕ್ತಪಡಿಸಲು ನಿರ್ಧರಿಸಿದ್ದರೂ ಇದರಿಂದ ಭಾರತ ಮತ್ತು ಶ್ರೀಲಂಕಾ ನಡುವಿನ ಬಾಂಧವ್ಯಕ್ಕೆ ಯಾವುದೇ ಧಕ್ಕೆಯಾಗದು ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಜಿ.ಎಲ್‌.ಪೆರಿಸ್‌ ವಿಶ್ವಾಸವ್ಯಕ್ತಪಡಿಸಿದ್ದರು.

ಆ ಬಗ್ಗೆ ನಮಗೆ ಭಾರತದ ಮೇಲೆ ಸಿಟ್ಟಾಗಲಿ, ಸಿಡುಕಾಗಲಿ ಇಲ್ಲ ಎಂದರು. ಉಭಯ ರಾಷ್ಟ್ರಗಳ ಸಂಬಂಧವನ್ನು ನಾವು ಈ ಹಿನ್ನೆಲೆಯಲ್ಲಿ ನೋಡಬಾರದು ಎಂದೂ ಅವರು ಸ್ಪಷ್ಟಪಡಿಸಿದ್ದರು.

English summary

Several statues of eminent personalities, including that of Mahatma Gandhi, were vandalised in the eastern town of Batticaloa, prompting the Sri Lankan police to launch a probe into the incident.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments