Select Your Language

Notifications

webdunia
webdunia
webdunia
webdunia

ಶಿವ ಶಿವಾ..ಕಲಿಗಾಲ ಕಣ್ರೀ,,10 ವರ್ಷದ ಬಾಲಕಿಯಿಂದ 4 ವರ್ಷದ ಬಾಲಕನ ಮೇಲೆ ರೇಪ್

ಶಿವ ಶಿವಾ..ಕಲಿಗಾಲ ಕಣ್ರೀ,,10 ವರ್ಷದ ಬಾಲಕಿಯಿಂದ 4 ವರ್ಷದ ಬಾಲಕನ ಮೇಲೆ ರೇಪ್
ಹೌಸ್ಟೊನ್ , ಸೋಮವಾರ, 31 ಮಾರ್ಚ್ 2014 (15:30 IST)
ದೇಶ ವಿದೇಶಗಳಲ್ಲಿ ಅತ್ಯಾಚಾರ ಪ್ರಕರಣಗಳು ಮಿತಿ ಮೀರುತ್ತಿವೆ. ಇದೀಗ 10 ವರ್ಷ ವಯಸ್ಸಿನ ಬಾಲಕಿಯೊಬ್ಬಳು 4 ವರ್ಷದ ಬಾಲಕನ ಮೇಲೆ ಅತ್ಯಾಚಾರವೆಸಗಿದ ವಿಚಿತ್ರ ಘಟನೆ ವರದಿಯಾಗಿದೆ.

ಅಮೆರಿಕದ ಟೆಕ್ಸಾಸ್ ನಗರದಲ್ಲಿ ವಾಸವಾಗಿರುವ ಬಾಲಕ ಬಾಲಕಿಯರ ಗುಂಪು ಆಟವಾಡುವುದರಲ್ಲಿ ಮಗ್ನವಾಗಿತ್ತು. 10 ವರ್ಷದ ಬಾಲಕಿಯಾದ ಆಶ್ಲೆ 4 ವರ್ಷದ ಪೋರನೊಂದಿಗೆ ವೈದ್ಯೆ ಪಾತ್ರದಲ್ಲಿ ಪಂದ್ಯವಾಡುತ್ತಿದ್ದರು.ಆಟದ ನೆಪದಲ್ಲಿ ಬಾಲಕಿ ಬಾಲಕನೊಂದಿಗೆ ಸಂಭೋಗಕ್ಕೆ ಇಳಿದಿದ್ದಾಳೆ. ನೋವಿನಿಂದ ಕಿರುಚುತ್ತಿದ್ದ ಬಾಲಕನನ್ನು ಕಂಡು ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹೆರಾಲ್ಡ್ ಸನ್ ವರದಿಯ ಪ್ರಕಾರ ಬಾಲಕನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಾಲಕಿ ಆಶ್ಲೆಯನ್ನು ರಿಮ್ಯಾಂಡ್‌ ಹೋಮ್‌ಗೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹೌಸ್ಟೋನ್ ಪೊಲೀಸರ ಪ್ರಕಾರ, ಆರೋಪಿ ಬಾಲಕಿಯು ಸುಮಾರು 45 ನಿಮಿಷಗಳ ಕಾಲ ಬಾಲಕನ ಮರ್ಮಾಂಗಕ್ಕೆ ಘರ್ಷಿಸಿದ್ದರಿಂದ, ಬಾಲಕನ ಸ್ಥಿತಿ ಗಂಭೀರವಾಗಿದೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಆರೋಪಿ ಬಾಲಕಿ ಆಶ್ಲೆ ಅಪ್ರಾಪ್ತಳಾಗಿದ್ದರೂ ಆಕ್ಟೋಬರ್ ತಿಂಗಳಲ್ಲಿ ಲೈಂಗಿಕ ಕಿರುಕುಳ ಆರೋಪದ ಪ್ರಕರಣ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada