Select Your Language

Notifications

webdunia
webdunia
webdunia
webdunia

ಶರಣಾಗುವಂತೆ ಉಗ್ರರಿಗೆ ಜರ್ದಾರಿ ಎಚ್ಚರಿಕೆ

ಶರಣಾಗುವಂತೆ ಉಗ್ರರಿಗೆ ಜರ್ದಾರಿ ಎಚ್ಚರಿಕೆ
ಇಸ್ಲಾಮಾಬಾದ್: , ಮಂಗಳವಾರ, 30 ಜೂನ್ 2009 (11:31 IST)
ಉಗ್ರಗಾಮಿಗಳು ಮತ್ತು ತೀವ್ರವಾದಿಗಳು ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗಿ ಪಾಕಿಸ್ತಾನ ಸರ್ಕಾರದ ಅಧಿಕಾರವನ್ನು ಒಪ್ಪದಿದ್ದರೆ ಅವರನ್ನು ಮ‌ೂಲೋತ್ಪಾಟನೆ ಮಾಡುವುದಾಗಿ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಸೋಮವಾರ ಎಚ್ಚರಿಸಿದ್ದಾರೆ. ಸೋಮವಾರ ಸಂಜೆ ಪಾಕಿಸ್ತಾನ ಪೀಪಲ್ಸ್ ಪಕ್ಷದ ಸಂಸದರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಸಂಪೂರ್ಣವಾಗಿ ಬಂಡುಕೋರರನ್ನು ನಿರ್ಮ‌ೂಲನೆ ಮಾಡುವ ತನಕ ಅವರ ವಿರುದ್ಧ ಕಾರ್ಯಾಚರಣೆಯಿಂದ ಹಿಮ್ಮೆಟ್ಟುವುದಿಲ್ಲ ಎಂದು ಅವರು ನುಡಿದರು.

ಸೇನಾಪಡೆಯ ಶೌರ್ಯದಿಂದ ಮತ್ತು ಸಂಸತ್ತಿನ ಮತ್ತು ಎಲ್ಲ ರಾಜಕೀಯ ಪಕ್ಷಗಳ ವಿವೇಕದಿಂದ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಯಶಸ್ವಿಯಾಗುವುದಾಗಿ ಅವರು ತಿಳಿಸಿದ್ದಾರೆ. ಸರ್ವಾಧಿಕಾರಿ ಆಡಳಿತಗಳು ಸಂವಿಧಾನದಲ್ಲಿ ತುರುಕಿದ ಪ್ರಜಾಪ್ರಭುತ್ವ ವಿರೋಧಿ ನಿಯಮಗಳನ್ನು ತೆಗೆದು ಸಂವಿಧಾನವನ್ನು ಪ್ರಜಾತಂತ್ರಗೊಳಿಸುವುದಾಗಿ ಜರ್ದಾರಿ ತಿಳಿಸಿದ್ದಾರೆ.

ಸಂವಿಧಾನದಲ್ಲಿ ಸಂಸದೀಯ ಸ್ವರೂಪವನ್ನು ಸೂರೆ ಮಾಡಿದ ವಿಧಿಗಳಲ್ಲಿ ತಿದ್ದುಪಡಿಗಳನ್ನು ಮಾಡುವುದಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ 27 ಸದಸ್ಯರ ಸಮಿತಿಯನ್ನು ಸ್ಥಾಪಿಸಿದ್ದಾಗಿ ಅವರು ಹೇಳಿದ್ದಾರೆ. ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ಮತ್ತು ಕೆಲವು ಫೆಡರಲ್ ಸಚಿವರು ಈ ಸಭೆಯಲ್ಲಿ ಭಾಗವಹಿಸಿದ್ದರು.

Share this Story:

Follow Webdunia kannada