Webdunia - Bharat's app for daily news and videos

Install App

ವಾಹನೋದ್ಯಮದ ತೊಟ್ಟಿಲು ಡೆಟ್ರಾಯಿಟ್‌ನಿಂದ ದಿವಾಳಿ ಅರ್ಜಿ

Webdunia
ಶುಕ್ರವಾರ, 19 ಜುಲೈ 2013 (11:22 IST)
PR
PR
ಡೆಟ್ರಾಯಿಟ್: ಅಮೆರಿಕದ ವಾಹನೋದ್ಯಮದ ತೊಟ್ಟಿಲು, ಒಂದೊಮ್ಮೆ ರಾಷ್ಟ್ರದ ನಾಲ್ಕನೇ ಅತ್ಯಧಿಕ ಜನಸಂಖ್ಯೆಯ ನಗರ ಡೆಟ್ರಾಯಿಟ್ ಗುರುವಾರ ದಿವಾಳಿತನದ ಅರ್ಜಿಯನ್ನು ಸಲ್ಲಿಸಿದೆ. ತಡ ಮಧ್ಯಾಹ್ನದ ವರದಿಗಳು ನಿಧಾನವಾಗಿ ಪ್ರಕಟವಾದ ನಂತರ, ಈ ನಿರ್ಧಾರವನ್ನು ಅಧಿಕಾರಿಗಳು ಖಚಿತಪಡಿಸಿದರು. ಇದು ಸಾಲಕ್ಕೆ ಸಂಬಂಧಿಸಿದಂತೆ ಅಮೆರಿಕ ಇತಿಹಾಸದಲ್ಲಿ ಅತಿ ದೊಡ್ಡ ದಿವಾಳಿತನ ಅರ್ಜಿಯಾಗಿದೆ.

' ಇದೊಂದು ಕಠಿಣ ಹೆಜ್ಜೆಯಾಗಿದೆ. ಆದರೆ ಸಮಸ್ಯೆ ನಿಭಾಯಿಸಲು ಏಕಮಾತ್ರ ಕಾರ್ಯಸಾಧ್ಯ ಆಯ್ಕೆಯಾಗಿದೆ 'ಎಂದು ಈ ಕ್ರಮಕ್ಕೆ ಅಧಿಕಾರ ನೀಡಿದ ಗವರ್ನರ್ ರಿಕ್ ಸ್ನೈಡರ್ ತಿಳಿಸಿದ್ದಾರೆ. ಡೆಟ್ರಾಯಿಟ್‌ನ ತೀವ್ರ ಹಣಕಾಸು ಬಿಕ್ಕಟ್ಟಿನ ಪರಿಹಾರಕ್ಕೆ ತುರ್ತು ಹಣಕಾಸು ಮ್ಯಾನೇಜರ್ ಶಿಫಾರಸ್ಸನ್ನು ಆಧರಿಸಿ ದಿವಾಳಿ ಅರ್ಜಿಯನ್ನು ಅವರು ಸಲ್ಲಿಸಿದ್ದಾರೆ. 20ನೇ ಶತಮಾನದ ಪ್ರಥಮಾರ್ಧದಲ್ಲಿ ಡೆಟ್ರಾಯಿಟ್ ವಾಹನೋದ್ಯಮದ ಆಗಮನದಿಂದ ಅಚ್ಚರಿಗೊಳಿಸುವ ರೀತಿಯಲ್ಲಿ ವಿಸ್ತರಣೆಯಾಯಿತು.

ಆದರೆ ಇತ್ತೀಚಿನ ದಶಕಗಳಲ್ಲಿ ಇದೇ ಗತಿಯಲ್ಲಿ ಕುಸಿಯಲಾರಂಭಿಸಿತು. 1950ರಲ್ಲಿ 1.8 ದಶಲಕ್ಷ ಜನಸಂಖ್ಯೆಯಿಂದ ನಗರವು ಈಗ 7 ಲಕ್ಷ ಜನರಿಗೆ ಕುಸಿದಿದೆ. ಇದರ ಜತೆ ಹತ್ತಾರು ಸಾವಿರ ತೊರೆದುಹೋದ ಕಟ್ಟಡಗಳು, ಉರಿಯದ ಬೀದಿ ದೀಪಗಳು, ಹೀಗೆ ಡೆಟ್ರಾಯಿಟ್ ಅವನತಿಯ ಅಂಚಿಗೆ ಬಂದು ನಿಂತಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments