Select Your Language

Notifications

webdunia
webdunia
webdunia
webdunia

ವಾಹನೋದ್ಯಮದ ತೊಟ್ಟಿಲು ಡೆಟ್ರಾಯಿಟ್‌ನಿಂದ ದಿವಾಳಿ ಅರ್ಜಿ

ವಾಹನೋದ್ಯಮದ ತೊಟ್ಟಿಲು ಡೆಟ್ರಾಯಿಟ್‌ನಿಂದ ದಿವಾಳಿ ಅರ್ಜಿ
, ಶುಕ್ರವಾರ, 19 ಜುಲೈ 2013 (11:22 IST)
PR
PR
ಡೆಟ್ರಾಯಿಟ್: ಅಮೆರಿಕದ ವಾಹನೋದ್ಯಮದ ತೊಟ್ಟಿಲು, ಒಂದೊಮ್ಮೆ ರಾಷ್ಟ್ರದ ನಾಲ್ಕನೇ ಅತ್ಯಧಿಕ ಜನಸಂಖ್ಯೆಯ ನಗರ ಡೆಟ್ರಾಯಿಟ್ ಗುರುವಾರ ದಿವಾಳಿತನದ ಅರ್ಜಿಯನ್ನು ಸಲ್ಲಿಸಿದೆ. ತಡ ಮಧ್ಯಾಹ್ನದ ವರದಿಗಳು ನಿಧಾನವಾಗಿ ಪ್ರಕಟವಾದ ನಂತರ, ಈ ನಿರ್ಧಾರವನ್ನು ಅಧಿಕಾರಿಗಳು ಖಚಿತಪಡಿಸಿದರು. ಇದು ಸಾಲಕ್ಕೆ ಸಂಬಂಧಿಸಿದಂತೆ ಅಮೆರಿಕ ಇತಿಹಾಸದಲ್ಲಿ ಅತಿ ದೊಡ್ಡ ದಿವಾಳಿತನ ಅರ್ಜಿಯಾಗಿದೆ.

'ಇದೊಂದು ಕಠಿಣ ಹೆಜ್ಜೆಯಾಗಿದೆ. ಆದರೆ ಸಮಸ್ಯೆ ನಿಭಾಯಿಸಲು ಏಕಮಾತ್ರ ಕಾರ್ಯಸಾಧ್ಯ ಆಯ್ಕೆಯಾಗಿದೆ 'ಎಂದು ಈ ಕ್ರಮಕ್ಕೆ ಅಧಿಕಾರ ನೀಡಿದ ಗವರ್ನರ್ ರಿಕ್ ಸ್ನೈಡರ್ ತಿಳಿಸಿದ್ದಾರೆ. ಡೆಟ್ರಾಯಿಟ್‌ನ ತೀವ್ರ ಹಣಕಾಸು ಬಿಕ್ಕಟ್ಟಿನ ಪರಿಹಾರಕ್ಕೆ ತುರ್ತು ಹಣಕಾಸು ಮ್ಯಾನೇಜರ್ ಶಿಫಾರಸ್ಸನ್ನು ಆಧರಿಸಿ ದಿವಾಳಿ ಅರ್ಜಿಯನ್ನು ಅವರು ಸಲ್ಲಿಸಿದ್ದಾರೆ. 20ನೇ ಶತಮಾನದ ಪ್ರಥಮಾರ್ಧದಲ್ಲಿ ಡೆಟ್ರಾಯಿಟ್ ವಾಹನೋದ್ಯಮದ ಆಗಮನದಿಂದ ಅಚ್ಚರಿಗೊಳಿಸುವ ರೀತಿಯಲ್ಲಿ ವಿಸ್ತರಣೆಯಾಯಿತು.

ಆದರೆ ಇತ್ತೀಚಿನ ದಶಕಗಳಲ್ಲಿ ಇದೇ ಗತಿಯಲ್ಲಿ ಕುಸಿಯಲಾರಂಭಿಸಿತು. 1950ರಲ್ಲಿ 1.8 ದಶಲಕ್ಷ ಜನಸಂಖ್ಯೆಯಿಂದ ನಗರವು ಈಗ 7 ಲಕ್ಷ ಜನರಿಗೆ ಕುಸಿದಿದೆ. ಇದರ ಜತೆ ಹತ್ತಾರು ಸಾವಿರ ತೊರೆದುಹೋದ ಕಟ್ಟಡಗಳು, ಉರಿಯದ ಬೀದಿ ದೀಪಗಳು, ಹೀಗೆ ಡೆಟ್ರಾಯಿಟ್ ಅವನತಿಯ ಅಂಚಿಗೆ ಬಂದು ನಿಂತಿದೆ.

Share this Story:

Follow Webdunia kannada