Select Your Language

Notifications

webdunia
webdunia
webdunia
webdunia

ಲೈಂಗಿಕ ಜೀವನಕ್ಕೆ ಮದುವೆ ಒಳ್ಳೆಯದಲ್ಲ: ಬ್ರಿಟನ್ ಸಮೀಕ್ಷೆ

ಲೈಂಗಿಕ ಜೀವನಕ್ಕೆ ಮದುವೆ ಒಳ್ಳೆಯದಲ್ಲ: ಬ್ರಿಟನ್ ಸಮೀಕ್ಷೆ
ಲಂಡನ್ , ಸೋಮವಾರ, 30 ಆಗಸ್ಟ್ 2010 (11:06 IST)
ಸಹಬಾಳ್ವೆ ನಡೆಸುವುದಕ್ಕೆ ಮದುವೆಯಾಗುವ ಅಗತ್ಯವೇನಿದೆ ಎಂದು ಪ್ರಶ್ನಿಸುವ ಕಾಲವಿದು. ಇದಕ್ಕೆ ಪೂರಕವಾಗಿ ನಡೆದಿರುವ ಸಂಶೋಧನೆಯೊಂದು ಕೂಡ ಅದನ್ನೇ ಒತ್ತಿ ಹೇಳಿದೆ. ಲೈಂಗಿಕ ಜೀವನಕ್ಕೆ ಮದುವೆ ಉತ್ತಮವಲ್ಲ ಎನ್ನುವುದೇ ಅದರ ಸಾರಾಂಶ.

ಈ ಸಮೀಕ್ಷೆ ನಡೆಸಲಾಗಿರುವುದು ದಾಂಪತ್ಯ ಜೀವನದ ಮಹತ್ವ ಕಡಿಮೆಯಾಗುತ್ತಿರುವ ಬ್ರಿಟನ್‌ನಲ್ಲಿ. ಮದುವೆಗೆ ಮುಂದೆ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಸಲ ಮೈಥುನದಲ್ಲಿ ಪಾಲ್ಗೊಳ್ಳುತ್ತಿದ್ದ ಜೋಡಿ, ಮದುವೆಯ ಮೂರು ವರ್ಷಗಳ ನಂತರ ಏಳು ದಿನಕ್ಕೊಮ್ಮೆ ಸೇರುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಲೈಂಗಿಕ ಜೀವನದ ಸರಾಸರಿಯಲ್ಲಿ ಆ ಮೂಲಕ ಭಾರೀ ಕುಸಿತ ಕಂಡಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಸುಮಾರು 3,000 ವಿವಾಹಿತ ಜೋಡಿಯನ್ನು ಸಮೀಕ್ಷೆಗಾಗಿ ಸಂದರ್ಶಿಸಲಾಗಿದೆ. ವರದಿಯ ಪ್ರಕಾರ ವಿವಾಹವು ತಮ್ಮ ಲೈಂಗಿಕ ಜೀವನದ ಭಾವೋದ್ವೇಗವನ್ನು ನಾಶಪಡಿಸಿದೆ ಎಂದು 10ರಲ್ಲಿ ಆರು ಮಂದಿ ಹೇಳಿಕೊಂಡಿದ್ದಾರೆ.

ಇದಕ್ಕಿಂತಲೂ ಅಚ್ಚರಿಯ ಫಲಿತಾಂಶವೆಂದರೆ ಮದುವೆಯಾದ ನಂತರ ನಮ್ಮ ನಡುವಿನ ಸಂಬಂಧವು ಪ್ರೇಮಿಗಳಿಗಿಂತ ಹೆಚ್ಚಾಗಿ ಗೆಳೆಯರಂತಾಗಿದೆ ಎಂದು ಅರ್ಧದಷ್ಟು ವಿವಾಹಿತ ಜೋಡಿ ಹೇಳಿಕೊಂಡಿರುವುದು.

ನೀವು ಯಾರ ಜತೆಗಾದರೂ ಗಾಢವಾದ ಪ್ರೀತಿ ಹೊಂದಿದ್ದರೆ ಮತ್ತು ಅವರ ಜತೆಗೆ ನಿಮ್ಮ ಉಳಿದ ಜೀವನವನ್ನು ಕಳೆಯಲು ಬಯಸಿದ್ದರೆ ಆಗ ಆ ಸಂಬಂಧದಿಂದ ಹೆಚ್ಚಿನದ್ದನ್ನು ಬಯಸುವುದು ಸಾಧ್ಯವಾಗುತ್ತದೆ. ಆಗ ತನ್ನ ಜತೆಗಾರ/ಗಾರ್ತಿಯು ಸಹಕಾರ ಮನೋಭಾವ, ಚೆಲ್ಲಾಟ, ಜಾಣತನ ಮತ್ತು ಸ್ನೇಹಮಯತೆಯನ್ನು ಹೊಂದಿರುವುದು ಅಗತ್ಯ. ಒಂದು ವೇಳೆ ಮಂಚದಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸದಿದ್ದರೆ, ನಿರೀಕ್ಷೆಯನ್ನು ತಲುಪಲು ಸಾಧ್ಯವಾಗದೇ ಇದ್ದರೆ ಆಗ ಲೈಂಗಿಕ ಜೀವನ ಯಾತನಾಮಯವಾಗುತ್ತದೆ ಎಂದು ವಿವಾಹೇತರ ಸಂಬಂಧಗಳ ಸೇವೆಯ ವಕ್ತಾರರೊಬ್ಬರು ಈ ಕುರಿತು ವಿವರಣೆ ನೀಡಿದ್ದಾರೆ.

ಬ್ರಿಟನ್‌ನ ಈ ಸಮೀಕ್ಷೆಯ ಪ್ರಕಾರ ಶೇ.59ರಷ್ಟು ಮಂದಿ ಮದುವೆಯ ನಂತರ ತಮ್ಮ ಲೈಂಗಿಕ ಜೀವನವು ಹದಗೆಟ್ಟು ಹೋಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅದರಲ್ಲೂ ಶೇ.80 ಜೋಡಿಗಳು ತಮ್ಮ ಕಾಮದಾಟದಲ್ಲಿ ಒಂದೇ ಜಾಗ, ಅದೇ ಭಂಗಿಗಳು ಮತ್ತು ಒಂದೇ ಸಮಯವನ್ನು ಪ್ರತೀ ಬಾರಿಯೂ ತಾವು ಜತೆಯಾಗಿ ಮಲಗಿದ ಸಂದರ್ಭದಲ್ಲಿ ಅನುಸರಿಸುತ್ತಿರುವುದು ಕಂಡು ಬಂದಿದೆ.

ಶೇ.79ರಷ್ಟು ಜೋಡಿಗಳು ತಾವು ಮಲಗುವ ಹೊತ್ತಿನಲ್ಲೇ ಸುರತ ಕ್ರಿಯೆಗೆ ಹೆಚ್ಚು ಒತ್ತು ನೀಡುತ್ತಾರೆ. ಮಧ್ಯರಾತ್ರಿ ಅಥವಾ ಹೊತ್ತಲ್ಲದ ಹೊತ್ತಿನಲ್ಲಿ ಎದ್ದು ಮೈಥುನ ನಡೆಸುವ ಕಷ್ಟ ಬೇಡ ಎಂದು ಅವರು ಉತ್ತರಿಸಿದ್ದಾರೆ.

Share this Story:

Follow Webdunia kannada