Select Your Language

Notifications

webdunia
webdunia
webdunia
webdunia

ಲಿಬಿಯಾ:ರಹಸ್ಯ ಸ್ಥಳದಲ್ಲಿ ಮುಅಮ್ಮರ್ ಗಡಾಫಿ ಅಂತ್ಯ ಸಂಸ್ಕಾರ

ಲಿಬಿಯಾ:ರಹಸ್ಯ ಸ್ಥಳದಲ್ಲಿ ಮುಅಮ್ಮರ್ ಗಡಾಫಿ ಅಂತ್ಯ ಸಂಸ್ಕಾರ
ಟ್ರಿಪೋಲಿ , ಮಂಗಳವಾರ, 25 ಅಕ್ಟೋಬರ್ 2011 (18:08 IST)
ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್‌ ಗಡಾಫಿಯ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರವನ್ನು ಮಂಗಳವಾರ ಗುಪ್ತ ಸ್ಥಳವೊಂದರಲ್ಲಿ ನಡೆಸಲಾಗಿದೆ ಎಂದು ಆಡಳಿತಾರೂಢ ಮಧ್ಯಂತರ ಸರಕಾರದ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಅಲ್‌ ಜಜೀರಾ ಟಿವಿ ಚಾನಲ್‌ ವರದಿ ಮಾಡಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಗಡಾಫಿ ಅವರೊಂದಿಗೆ ಅವರ ಪುತ್ರ ಮೋಟಾಸಿಂ ಅವರ ಮೃತದೇಹವನ್ನೂ ಅಂತ್ಯ ಸಂಸ್ಕಾರ ಮಾಡಲಾಗಿದೆಯೇ ಎಂಬುದರ ಕುರಿತು ತಿಳಿದು ಬಂದಿಲ್ಲ ಎಂದು ಕ್ಸಿನ್‌ ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನ್ಯಾಟೋ ಪಡೆಗಳ ಸಹಕಾರದಿಂದ ಲಿಬಿಯಾವನ್ನು ಬಂಡುಕೋರರು ಸಂಪೂರ್ಣವಾಗಿ ವಶಪಡಿಸಿಕೊಂಡ ನಂತರ ತಲೆ ಮರೆಸಿಕೊಂಡಿದ್ದ ಸರ್ವಾಧಿಕಾರಿ ಮುಅಮ್ಮರ್‌ ಗಡಾಫಿಯನ್ನು ಎನ್‌ಟಿಸಿ ಪಡೆ ಯೋಧರು ಸಿರ್ಟೆಯಲ್ಲಿ ಅಕ್ಟೋಬರ್‌ 20ರಂದು ಪತ್ತೆ ಹಚ್ಚಿ ಕೊಂದಿದ್ದರು. ಈ ಸಂದರ್ಭದಲ್ಲಿ ಜೊತೆಗಿದ್ದ ಆತನ ಪುತ್ರ ಮೋಟಾಸಿಂ ಕೂಡಾ ಹತ್ಯೆಗೀಡಾಗಿದ್ದ. ನಂತರ ಗಡಾಫಿ ಹಾಗೂ ಆತನ ಪುತ್ರನ ಶವವನ್ನು ಮಿಸ್ರಾತಾದಲ್ಲಿರುವ ಶೈತ್ಯಾಗಾರದಲ್ಲಿ ಇಡಲಾಗಿತ್ತು.

Share this Story:

Follow Webdunia kannada