Webdunia - Bharat's app for daily news and videos

Install App

ಲಾಡೆನ್ ಸ್ಥಾನಕ್ಕೆ ಅಲ್ -ಜವಾಹರಿ

Webdunia
ಭಾನುವಾರ, 16 ಸೆಪ್ಟಂಬರ್ 2007 (20:34 IST)
ಒಸಾಮ ಬಿನ್ ಲಾಡೆನ್‌ನನ್ನು ಆತನ ಅನುಯಾಯಿಗಳು ಮೂಲೆಗುಂಪು ಮಾಡಿದ್ದು, ಅಲ್-ಖೈದ ಭಯೋತ್ಪಾದಕ ಜಾಲದ ಮೇಲೆ ಆತನಿಗೆ ಯಾವುದೇ ನಿಯಂತ್ರಣವಿಲ್ಲ ಎಂದು ಬ್ರಿಟನ್ ಮತ್ತು ಅಮೆರಿಕದ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ.

ಬದಲಾಗಿ, ಆತನ ಸಹಾಯಕ ನಿಯಂತ್ರಣವನ್ನು ತನ್ನದಾಗಿಸಿಕೊಂಡಿದ್ದು, ಬ್ರಿಟನ್ ಮತ್ತು ಅಮೆರಿಕಗಳಲ್ಲಿ ಸಂಕೀರ್ಣವಾದ ದಾಳಿಗಳನ್ನು ನಡೆಸಲು ಸಮರ್ಥವಾದ ಸಂಸ್ಥೆಯನ್ನಾಗಿಸುವ ಸಲುವಾಗಿ ಭಯೋತ್ಪಾದನಾ ಸಂಘಟನೆಯ ಮರುನಿರ್ಮಾಣ ಮಾಡುತ್ತಿದ್ದಾನೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಗಳು ಹೇಳಿದ್ದಾರೆ.

ಅವರ ಪ್ರಕಾರ, ಬಿನ್ ಲಾಡೆನ್ ಎರಡು ವರ್ಷಗಳಿಗೂ ಹೆಚ್ಚಿನ ಕಾಲದಿಂದೀಚೆಗೆ ಅಲ್ ಖೈದಾದ ಆಡಳಿತ ಶುರಾ ಅಥವಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿಲ್ಲ, ಬಿನ್ ಲಾಡೆನ್ ನಂತರದ ಸ್ಥಾನದಲ್ಲಿರುವ ಏಮನ್ ಅಲ್-ಜವಾಹಿರಿ 2001ರ ಅಪ್ಘನ್ ಯುದ್ಧದ ನಂತರ ಭಯೋತ್ಪಾದಕ ಸಂಘಟನೆಯನ್ನು ನಿರ್ಮಿಸಿದ್ದಾನೆ ಎಂದು ಹೇಳಲಾಗಿದೆ.

ಪಾಕಿಸ್ತಾನದ ಕಾನೂನುವ್ಯಾಪ್ತಿಯಲ್ಲಿರದ ಬುಡಕಟ್ಟು ಪ್ರದೇಶಗಳಲ್ಲಿ ನೆಲೆಸಿರುವ ಅಲ್ ಖೈದಾದ ಕೇಂದ್ರ ನಿಯಂತ್ರಣದಲ್ಲಿರುವ ಭಯೋತ್ಪಾದಕ ಗುಂಪಿನ ಜಾಲವು ಮತ್ತೆ ತನ್ನ ಚಟುವಟಿಕೆಯನ್ನು ಆರಂಭಿಸಿರುವುದಾಗಿ ಬ್ರಿಟಿಶ್ ಮತ್ತು ಅಮೆರಿಕದ ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ.

2006 ರ ಮಾರ್ಚ್‌ನಿಂದೀಚೆಗೆ 18 ತಿಂಗಳಿನಿಂದ ಯಾವುದೇ ಒಬ್ಬ ಪ್ರಮುಖ ಅಲ್ ಖೈದಾ ನಾಯಕನನ್ನು ಬಂಧಿಸಿಲ್ಲವಾದ್ದರಿಂದ ಅಲ್ ಜವಾಹಿರಿಯ ಕಾರ್ಯ ಸುಗಮವಾಗಿದೆ ಎಂದು ಅವರು ಹೇಳಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments