Select Your Language

Notifications

webdunia
webdunia
webdunia
webdunia

ರಹಸ್ಯ ಮಾಹಿತಿಯನ್ನ ತಾಲಿಬಾನ್ ಉಗ್ರರಿಗೆ ಕೊಟ್ಟ ಐಎಸ್ಐ!

ರಹಸ್ಯ ಮಾಹಿತಿಯನ್ನ ತಾಲಿಬಾನ್ ಉಗ್ರರಿಗೆ ಕೊಟ್ಟ ಐಎಸ್ಐ!
ಬರ್ಲಿನ್‌ , ಸೋಮವಾರ, 31 ಅಕ್ಟೋಬರ್ 2011 (11:36 IST)
ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜರ್ಮನಿ ಯೋಧರ ಇ- ಮೇಲ್‌ ಐಡಿಗಳನ್ನು ಹ್ಯಾಕ್‌ ಮಾಡಿರುವ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ದೂರವಾಣಿ ಕರೆಗಳನ್ನು ಕದ್ದಾಲಿಸಿ ಗುಪ್ತ ಮಾಹಿತಿಗಳನ್ನು ತಾಲಿಬಾನ್‌ ಉಗ್ರಗಾಮಿ ಸಂಘಟನೆಗೆ ನೀಡುತ್ತಿದೆ ಎಂಬ ಆಘಾತಕಾರಿ ವಿಷಯ ಮಾಧ್ಯಮ ವರದಿಯಿಂದ ಬಹಿರಂಗವಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಜರ್ಮನಿಯ ಅಧ್ಯಕ್ಷ ಕ್ರಿಶ್ಚಿಯನ್‌ ಊಲ್ಫ್‌ ಅವರು ಅಫ್ಘಾನಿಸ್ತಾನಕ್ಕೆ ಬರುವ ವಿಷಯವನ್ನು ರಹಸ್ಯವಾಗಿಡಲಾಗಿತ್ತು. ಆದರೆ ಫೋನ್‌ ಕದ್ದಾಲಿಕೆ ಮಾಡಿದ ಐಎಸ್‌ಐ ಈ ವಿಷಯವನ್ನು ಎರಡು ವಾರ ಮೊದಲೇ ತಾಲಿಬಾನ್‌ಗೆ ಮಾಹಿತಿ ನೀಡಿತ್ತು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಅಫ್ಘಾನಿಸ್ತಾನದಲ್ಲಿರುವ ಜರ್ಮನಿ ಸೇನಾ ಪಡೆಗಳ ಸಂಭಾಷಣೆಯನ್ನು ಐಎಸ್‌ಐ ಕದ್ದಾಲಿಸುತ್ತಿರುವ ಕುರಿತು ಜರ್ಮನಿಯ ಗುಪ್ತಚರ ಸಂಸ್ಥೆ ಬಿಎನ್‌ಡಿ ತಮ್ಮ ದೇಶದ ಆಂತರಿಕ ಸಚಿವಾಲಯಕ್ಕೆ ಅಧ್ಯಕ್ಷ ಊಲ್ಫ್‌ ಅವರು ಅಫ್ಘಾನಿಸ್ತಾನಕ್ಕೆ ಭೇಟಿಗೆ ಮುನ್ನವೇ ಮಾಹಿತಿ ನೀಡಿತ್ತು.

ಅಫ್ಘಾನಿಸ್ತಾನ ಪೊಲೀಸ್‌ ಪಡೆಗೆ ತರಬೇತಿ ನೀಡುತ್ತಿರುವ ಜರ್ಮನ್‌ ಪೊಲೀಸ್‌ ಪ್ರಾಜೆಕ್ಟ್‌ ಟೀಮ್‌ (ಜಿಪಿಪಿಟಿ)ನ ದೂರವಾಣಿ ಸಂಭಾಷಣೆ ಯನ್ನು ಕದ್ದಾಲಿಸಿ ಅತ್ಯಂತ ಗೌಪ್ಯವಾದ ಮಾಹಿತಿಗಳನ್ನು ಐಎಸ್‌ಐ ಕದ್ದಾಲಿಸುತ್ತಿದೆ ಎಂದು ಬಿಎನ್‌ಡಿ ಆಪಾದಿಸಿದೆ. ಅಫ್ಘಾನಿಸ್ತಾನದಲ್ಲಿರುವ ಅಂತಾರಾಷ್ಟ್ರೀಯ ಭದ್ರತಾ ನೆರವು ಪಡೆ (ಐಎಎಸ್‌ಎಫ್‌)ಯಲ್ಲಿರುವ ಜಿಪಿಪಿಟಿ 2002ರಿಂದಲೂ ಅಫ್ಘಾನ್‌ ಪೊಲೀಸ್‌ ಪಡೆಗೆ ತರಬೇತಿ ನೀಡುತ್ತಿದೆ.

ದೂರವಾಣಿ ಕರೆಗಳನ್ನು ಐಎಸ್‌ಐ ಕದ್ದಾಲಿಸುತ್ತಿರುವ ಕುರಿತು ಜರ್ಮನಿಯ ಅಧ್ಯಕ್ಷ ಊಲ್ಫ್ಸ್‌ ಅವರು ಭೇಟಿ ನೀಡುವ ಮುನ್ನ ಅಂದರೆ ಅಕ್ಟೋಬರ್ 11ರಂದು ಬಿಎನ್‌ಡಿ ತಮಗೆ ಎಚ್ಚರಿಕೆ ನೀಡಿತ್ತು ಎಂದು ಜರ್ಮನಿಯ ಆಂತರಿಕ ಸಚಿವಾಲಯದ ವಕ್ತಾರರೊಬ್ಬರು ದೃಢಪಡಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿರುವ ಜರ್ಮನಿ ಪೊಲೀಸರು ಬರ್ಲಿನೊಂದಿಗೆ ನಡೆಸಿದ ಇ- ಮೇಲ್‌ಗಳನ್ನು ಐಎಸ್‌ಐ ಹ್ಯಾಕ್‌ ಮಾಡಿ ಮಾಹಿತಿ ಸಂಗ್ರಹಿಸಿದೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada