Select Your Language

Notifications

webdunia
webdunia
webdunia
webdunia

ರನ್‌ವೇ ದಾಟಿ ಹೋದ ವಿಮಾನ: ಪ್ರಯಾಣಿಕರು ಸುರಕ್ಷಿತ

ರನ್‌ವೇ ದಾಟಿ ಹೋದ ವಿಮಾನ: ಪ್ರಯಾಣಿಕರು ಸುರಕ್ಷಿತ
ಮನಿಲಾ , ಮಂಗಳವಾರ, 4 ಜೂನ್ 2013 (09:58 IST)
PR
PR
ಫಿಲಿಪ್ಪೀನ್ಸ್‌ನ ವಿಮಾನ ನಿಲ್ದಾಣವೊಂದರಲ್ಲಿ ಭಾನುವಾರ ರಾತ್ರಿ ಮಳೆ, ಗಾಳಿಯ ನಡುವೆ ಇಳಿಯುತ್ತಿದ್ದ ಪ್ರಯಾಣಿಕ ವಿಮಾನವೊಂದು ರನ್‌ವೇ ದಾಟಿ ಹೋದ ಘಟನೆ ನಡೆದಿದೆ.ಬಳಿಕ ಸಿವಿಲ್ ಏವಿಯೇಶನ್ ಅಥಾರಿಟಿ ಆಫ್ ದಿ ಫಿಲಿಪ್ಪೀನ್ಸ್ ದೇಶದ ದಕ್ಷಿಣ ಭಾಗದಲ್ಲಿರುವ ದಾವೌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಿದೆ.

ಈ ಅವಧಿಯಲ್ಲಿ ಅಧಿಕಾರಿಗಳು ಸೆಬು ಪೆಸಿಫಿಕ್ ಏರ್ ಬಸ್ ಎ320 ವಿಮಾನವನ್ನು ಹೊರತೆಗೆದರು. ಇದು ದೇಶದ ಅತ್ಯಂತ ನಿಬಿಡ ವಿಮಾನ ನಿಲ್ದಾಣಗಳ ಪೈಕಿ ಒಂದಾಗಿದೆ. 165 ಪ್ರಯಾಣಿಕರನ್ನು ಹೊತ್ತು ಮನಿಲಾದಿಂದ ಬಂದ ವಿಮಾನ ಭೂ ಸ್ಪರ್ಶ ನಡೆಸಿದ ಕೂಡಲೇ ರನ್‌ವೇಯ ಬಲಬದಿಗೆ ಚಲಿಸಿತು ಎಂದು ಕಂಪೆನಿ ಹೇಳಿದೆ.

ಎಲ್ಲ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ಏರ್‌ಲೈನ್ ವಕ್ತಾರೆ ಕ್ಯಾಂಡಿಸ್ ಲ್ಯಾಗ್ ತಿಳಿಸಿದರು. ವಿಮಾನ ಬದಿಗೆ ಸರಿಯಲು ಕಾರಣವೇನು ಎಂಬುದು ನಮಗೆ ತಿಳಿದಿಲ್ಲ. ಆದರೆ, ನಾವು ಅಪಘಾತ ತನಿಖಾದಾರರಿಗೆ ಸಹಕಾರ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

Share this Story:

Follow Webdunia kannada