Select Your Language

Notifications

webdunia
webdunia
webdunia
webdunia

ಮೋದಿಗೆ ವೀಸಾ ನಿರಾಕರಿಸಿದ ಎಂಪಿಗಳ ಪತ್ರ ನಕಲಿಯಲ್ಲ, ಅಸಲಿ!

ಮೋದಿಗೆ ವೀಸಾ ನಿರಾಕರಿಸಿದ ಎಂಪಿಗಳ ಪತ್ರ ನಕಲಿಯಲ್ಲ, ಅಸಲಿ!
, ಭಾನುವಾರ, 28 ಜುಲೈ 2013 (16:13 IST)
PTI
PTI
ವಾಷಿಂಗ್ಟನ್: ನರೇಂದ್ರ ಮೋದಿ ಅವರಿಗೆ ವೀಸಾ ನಿರಾಕರಿಸುವಂತೆ ಕೋರಿ ಭಾರತೀಯ ಸಂಸತ್ ಸದಸ್ಯರು ಬರೆದಿರುವ ಪತ್ರದ ಸಹಿಗಳು ಅಸಲಿ ಮತ್ತು ವಿಶ್ವಾಸಾರ್ಹವಾಗಿದೆ. ಇವು ಕಟ್ ಅಂಡ್ ಪೇಸ್ಟ್ ಕೆಲಸವಲ್ಲ ಎಂದು ಕ್ಯಾಲಿಫೋರ್ನಿಯಾ ಮೂಲದ ವಿಧಿವಿಜ್ಞಾನ ದಾಖಲೆ ತಜ್ಞರು ಪ್ರಮಾಣೀಕರಿಸುವ ಮೂಲಕ ಈ ವಿವಾದವು ಹೊಸ ತಿರುವು ಪಡೆದುಕೊಂಡಿದೆ.ವಿಧಿವಿಜ್ಞಾನ ಪರೀಕ್ಷೆಯ ವಿಧಾನಗಳಿಂದ ಕ್ಯು1-ಕ್ಯು3(ರಾಜ್ಯಸಭೆ ಸಂಸದರ ಪತ್ರದ ಮೂರು ಪುಟಗಳು) ಒಂದೇ ಬಾರಿಗೆ ಸಿದ್ಧವಾಗಿದ್ದು, ಅದರಲ್ಲಿರುವ ಸಹಿಗಳು ಅಸಲಿ ಮತ್ತು ವಿಶ್ವಾಸಾರ್ಹವಾಗಿವೆ ಎಂದು ವರದಿಯೊಂದು ತಿಳಿಸಿದೆ.

ಲೋಕಸಭೆ ಸದಸ್ಯರ ಪತ್ರಕ್ಕೆ ಸಂಬಂಧಿಸಿದಂತೆ ಕೂಡ ಸಹಿಗಳು ಅಸಲಿ ಎನ್ನುವುದು ಪತ್ತೆಯಾಗಿದೆ. ರಾಜ್ಯಸಭೆ ಮತ್ತು ಲೋಕಸಭೆ ಸದಸ್ಯರು ನವೆಂಬರ್ 26 ಮತ್ತು ಡಿಸೆಂಬರ್ 5ರಂದು ಬರೆದಿರುವ ಎರಡು ಪತ್ರಗಳ ಕೈಬರೆಹಗಳ ವಿಧಿವಿಜ್ಞಾನ ಪರೀಕ್ಷೆಯನ್ನು ಜುಲೈ 21ರಂದು ಶ್ವೇತಭವನಕ್ಕೆ ರಿಫ್ಯಾಕ್ಸ್ ಮಾಡಲಾಗಿತ್ತು. ಈ ಪರೀಕ್ಷೆಯನ್ನು ವಿಧಿವಿಜ್ಞಾನ ದಾಖಲೆ ಪರೀಕ್ಷಕ ನಾನೆಟೆ ಎಂ. ಬಾರ್ಟೋ ಕ್ಯಾಲಿಫೋರ್ನಿಯಾದಲ್ಲಿ ಮಾಡಿದ್ದರು.

Share this Story:

Follow Webdunia kannada