Select Your Language

Notifications

webdunia
webdunia
webdunia
webdunia

ಮೆಕ್ಸಿಕೊ ಜೈಲಿನಲ್ಲಿ ಕೈದಿಗಳ ಮಾರಾಮಾರಿ: 13 ಸಾವು

ಮೆಕ್ಸಿಕೊ ಜೈಲಿನಲ್ಲಿ ಕೈದಿಗಳ ಮಾರಾಮಾರಿ: 13 ಸಾವು
ಮೆಕ್ಸಿಕೊ ಸಿಟಿ , ಸೋಮವಾರ, 29 ಏಪ್ರಿಲ್ 2013 (09:25 IST)
PR
PR
ಮೆಕ್ಸಿಕೊದ ಸ್ಯಾನ್ ಲೂಯಿಸ್ ಪೊಟೊಸಿ ಪ್ರಾಂತ್ಯದಲ್ಲಿರುವ ಕಾರಾಗೃಹವೊಂದರಲ್ಲಿ ಶನಿವಾರ ಸಂಭವಿಸಿದ ಸಂಘರ್ಷಕ್ಕೆ ಕನಿಷ್ಠ 13 ಮಂದಿ ಕೈದಿಗಳು ಬಲಿಯಾಗಿದ್ದು, ಇತರ 65 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತರ ಕೆಲವು ಕೈದಿಗಳಿಂದ ಉಂಟಾಗುತ್ತಿದ್ದ ಕಿರುಕುಳದಿಂದ ಬೇಸತ್ತಿದ್ದ ಕೈದಿಗಳ ಇನ್ನೊಂದು ಗುಂಪು ಸಂಘರ್ಷಕ್ಕಿಳಿದಾಗಿ ಈ ದುರಂತ ಸಂಭವಿಸಿದೆ ಎಂದು ಇಲ್ಲಿನ ಅಟಾರ್ನಿ ಜನರಲ್‌ರ ಕಚೇರಿಯ ಮೂಲಗಳು ತಿಳಿಸಿವೆ. ಜೈಲಿನಲ್ಲಿ ನಡೆದ ಗಲಭೆಯಲ್ಲಿ ಕನಿಷ್ಠ 100 ಮಂದಿ ಕೈದಿಗಳು ಒಳಗೊಂಡಿದ್ದರು ಎಂದು ವರದಿ ತಿಳಿಸಿದೆ.

ಗಲಭೆಯ ಪರಿಣಾಮ ಕನಿಷ್ಠ 13 ಮಂದಿ ಕೈದಿಗಳು ಸಾವನ್ನಪ್ಪಿದ್ದು, ಗಾಯಗೊಂಡಿರುವ 65 ಕೈದಿಗಳಲ್ಲಿ 22 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಪ್ರಾಂತೀಯ ಗವರ್ನರ್ ಫೆರ್ನಾಂಡೊ ತೊರಾಂರೊ ತಿಳಿಸಿದ್ದಾರೆ.

Share this Story:

Follow Webdunia kannada