Select Your Language

Notifications

webdunia
webdunia
webdunia
webdunia

ಮುಷರಫ್ ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರ

ಮುಷರಫ್ ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರ
ಇಸ್ಲಾಮಾಬಾದ್ , ಗುರುವಾರ, 29 ನವೆಂಬರ್ 2007 (10:53 IST)
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರಂತರವಾಗಿ ಹೆಚ್ಚಿದ ಒತ್ತಡವನ್ನು ತಾಳಲಾರದ ಪರ್ವೇಜ್ ಮುಷರಫ್ ಅವರು ಬುಧವಾರ ಸೇನಾ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿದು, ಇಂದು ಸಾಮಾನ್ಯ ನಾಗರಿಕನಂತೆ ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.

ಅಮೆರಿಕದ ಮತ್ತು ವಿರೋಧ ಪಕ್ಷಗಳ ಒತ್ತಡ ನಿರಂತರವಾಗಿ ಹೆಚ್ಚಿದ್ದರಿಂದ 1999ರಲ್ಲಿ ರಕ್ತರಹಿತ ಸೇನಾ ಕ್ರಾಂತಿಯ ಮೂಲಕ ಅಧಿಕಾರಕ್ಕೆ ಬಂದಿದ್ದ ಮುಷರಫ್ ಅವರು ಸೇನಾ ಸಮವಸ್ತ್ರವನ್ನು ತ್ಯಜಿಸಿದ್ದಾರೆ. ಸೇನಾ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿಯುವ ಮೂಲಕ ದೇಶದಲ್ಲಿ ಜಾರಿಯಲ್ಲಿರುವ ತುರ್ತುಪರಿಸ್ಥಿತಿಯ ತೆರವು ಮತ್ತು ಜನೆವರಿ8 ರಂದು ನ್ಯಾಯ ಸಮ್ಮತ ರೀತಿಯಲ್ಲಿ ಚುನಾವಣೆ ನಡೆಸುವುದಕ್ಕೆ ದಾರಿಯಾಗಲಿದೆ.

ಕಳೆದ ಎಂಟು ವರ್ಷಗಳಿಂದ ಸೇನಾ ಮುಖ್ಯಸ್ಥನ ಹುದ್ದೆಯಲ್ಲಿ ಹಾಗೂ ಸಮವಸ್ತ್ರದಲ್ಲಿರುತ್ತಿದ್ದ ಮುಷರಫ್ ಅವರು ಮೊದಲ ಬಾರಿಗೆ ಸಾಮಾನ್ಯ ವೇಷದಲ್ಲಿ ಪ್ರಮಾಣವಚನ ಸ್ವೀಕರಿಸಲು ಮುಂದಾಗುತ್ತಿದ್ದಾರೆ. ರಾಷ್ಟ್ರಾಧ್ಯಕ್ಷರ ಅರಮನೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ಹಮೀದ್ ಡೊಗರ್ ಪ್ರಮಾಣವಚನವನ್ನು ಭೋದಿಸಲಿದ್ದಾರೆ.

ನವೆಂಬರ್ ಮೂರರಂದು ತುರ್ತು ಪರಿಸ್ಥಿತಿ ಘೋಷಿಸಿ, ಪ್ರಮುಖ ನ್ಯಾಯಾಧೀಶರನ್ನು ಪದಚ್ಯುತಗೊಳಿಸಿ, ಸಂವಿಧಾನವನ್ನು ರದ್ದಗೊಳಿಸಿದ್ದರು.

Share this Story:

Follow Webdunia kannada