Select Your Language

Notifications

webdunia
webdunia
webdunia
webdunia

ಮಹಿಳಾ ಕೈದಿಗೆಮಾರಕ ಚುಚ್ಚುಮದ್ದಿನಿಂದ ಮರಣದಂಡನೆ

ಮಹಿಳಾ ಕೈದಿಗೆಮಾರಕ ಚುಚ್ಚುಮದ್ದಿನಿಂದ ಮರಣದಂಡನೆ
, ಗುರುವಾರ, 6 ಫೆಬ್ರವರಿ 2014 (14:02 IST)
PR
PR
ಹಂಟ್ಸ್‌ವಿಲ್ಲೆ: ಮಹಿಳಾ ಕೈದಿಗೆ ಬುಧವಾರ ಸಂಜೆ ಮರಣದಂಡನೆ ಜಾರಿ ಮಾಡಿದ ಅಪರೂಪದ ವಿದ್ಯಮಾನ ಟೆಕ್ಸಾಸ್‌ನಲ್ಲಿ ನಡೆದಿದೆ. ಮದುವೆಯಾಗುವ ಭರವಸೆಯೊಂದಿಗೆ ಬುದ್ಧಿಮಾಂದ್ಯ ಪುರುಷನನ್ನು ಟೆಕ್ಸಾಸ್‌ಗೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಆರೋಪದ ಮೇಲೆ ಮಹಿಳೆಗೆ ಮರಣದಂಡನೆ ವಿಧಿಸಲಾಯಿತು.59 ವರ್ಷ ವಯಸ್ಸಿನ ಆರೋಪಿ ಮಹಿಲೆ ಸುಸೇನ್ ಬಾಸೊಗೆ ಮಾರಕ ಚುಚ್ಚುಮದ್ದನ್ನು ನೀಡಿ ಮರಣದಂಡನೆಗೆ ಗುರಿಪಡಿಸಲಾಯಿತು. 1976ರಲ್ಲಿ ಸುಪ್ರೀಂಕೋರ್ಟ್ ಅಮೆರಿಕದಲ್ಲಿ ಮರಣದಂಡನೆ ಶಿಕ್ಷೆ ಆರಂಭಿಸಿದ ನಂತರ ಅಮೆರಿಕದಲ್ಲಿ ಮರಣದಂಡನೆಗೆ ಗುರಿಯಾದ 14ನೇ ಮಹಿಳೆ ಸುಸೇನ್.

ಈ ಸಂದರ್ಭದಲ್ಲಿ ಸುಮಾರು 1400 ಜನರನ್ನು ಮರಣದಂಡನೆಗೆ ಗುರಿಪಡಿಸಲಾಯಿತು.ಸಾವಿಗೆ ಮುನ್ನ ಅಂತಿಮ ಹೇಳಿಕೆಯನ್ನು ನೀಡುವಂತೆ ಕೇಳಿದಾಗ ಅವಳು ಏನೂ ಇಲ್ಲವೆಂದು ತಿಳಿಸಿದಳು.ಅವಳು ಒತ್ತರಿಸಿ ಬರುವ ಕಣ್ಣೀರನ್ನು ತಡೆದುಕೊಳ್ಳುವಂತೆ ಕಂಡುಬಂತು.

webdunia
PR
PR
ಪೆಂಟೋಬಾರ್ಬಿಟನ್ ಮಾರಕ ಡೋಸ್ ಪರಿಣಾಮ ಉಂಟುಮಾಡುತ್ತಿದ್ದಂತೆ, ಬಿಳಿಯ ಕೈದಿ ಸಮವಸ್ತ್ರ ಧರಿಸಿದ್ದ ಬಾಸೋ ಪ್ರಜ್ಞಾಹೀನಳಾಗಿ ಬಾಯಿಂದ ಗೊರಕೆಯ ಸದ್ದು ಬರಲಾಂಭಿಸಿತು. ಕ್ರಮೇಣ ಸದ್ದು ನಿಂತು ಕೊನೆಯುಸಿರೆಳೆದಳು.6.26 ಸಿಎಸ್‌ಟಿಯಲ್ಲಿ ಅವಳು ಸತ್ತಿದ್ದಾಳೆಂದು ಘೋಷಿಸಲಾಯಿತು. ಮಾರಕ ಚುಚ್ಚುಮದ್ದು ನೀಡಿ 11 ನಿಮಿಷಗಳಲ್ಲಿ ಅವಳ ಪ್ರಾಣಪಕ್ಷಿ ಹಾರಿಹೋಗಿತ್ತು.1998ರಲ್ಲಿ ಬಾಸೋ ಬುದ್ದಿಮಾಂದ್ಯ ವ್ಯಕ್ತಿ ಮೂಸೋನನ್ನು ಹತ್ಯೆ ಮಾಡಿದ್ದಳು.

ಲೂವಿಸ್ ನಜ್ಜುಗುಜ್ಜಾದ,ಸಿಗಿದ ದೇಹ ಹೌಸ್ಟನ್ ಬಳಿಯ ಕಂದಕವೊಂದರಲ್ಲಿ ಪತ್ತೆಯಾಗಿತ್ತು. ಮೂಸೋನ ವಿಮೆ ಪಾಲಿಸಿಗಳ ಹಣವನ್ನು ಮತ್ತು ಸಾಮಾಜಿಕ ಭದ್ರತೆ ಸೌಲಭ್ಯಗಳನ್ನು ಕಬಳಿಸುವ ಸಂಚು ಮಾಡಿದ್ದ ಬಾಸೋ ನ್ಯೂಜೆರ್ಸಿಯಿಂದ ಕರೆತಂದಿದ್ದಳು.

Share this Story:

Follow Webdunia kannada