Select Your Language

Notifications

webdunia
webdunia
webdunia
webdunia

ಮಗುವನ್ನು ಗಗನಚುಂಬಿ ಕಟ್ಟಡದಿಂದ ಕೆಳೆಕ್ಕೆಸೆದು ತಂದೆ ಆತ್ಮಹತ್ಯೆ

ಮಗುವನ್ನು ಗಗನಚುಂಬಿ ಕಟ್ಟಡದಿಂದ ಕೆಳೆಕ್ಕೆಸೆದು ತಂದೆ ಆತ್ಮಹತ್ಯೆ
ನ್ಯೂಯಾರ್ಕ್ , ಮಂಗಳವಾರ, 24 ಡಿಸೆಂಬರ್ 2013 (19:29 IST)
PR
PR
ತೀವ್ರ ಹತಾಶಮನಸ್ಥಿತಿಯಲ್ಲಿದ್ದ 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ತಮ್ಮ 3 ವರ್ಷ ವಯಸ್ಸಿನ ಗಂಡುಮಗುವನ್ನು 52 ಮಹಡಿಗಳ ಗಗನಚುಂಬಿ ಕಟ್ಟಡದ ಮೇಲಿಂದ ಕೆಳೆಕ್ಕೆಸೆದು ತಾವೂ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಸಂಭವಿಸಿದೆ. ಡಿಮಿಟ್ರಿ ಕನಾರಿಕೋವ್ ಲಿಂಕನ್ ಸ್ಕ್ವೇರ್ ಟವರ್‌ನಿಂದ ಮಗುವನ್ನು ಕೆಳಕ್ಕೆಸೆದು ತಾವೂ ಕೆಳಕ್ಕೆ ಹಾರಿ ಆತ್ಮಹತ್ಯೆಮಾಡಿಕೊಂಡರು. ಕೆಂಪು ಕೂದಲಿನ ಮಗು ಕಿರಿಲ್ ಕೆಲವೇ ಕ್ಷಣಗಳಲ್ಲಿ ಸೇಂಟ್ ಲ್ಯೂಕ್ ರೂಸ್‌ವೆಲ್ಟ್ ಆಸ್ಪತ್ರೆಯಲ್ಲಿ ಮೃತಪಟ್ಟಿತು.

ಉಕ್ರೇನ್‌ನ ವಲಸೆಗಾರರಾಗಿದ್ದ ಕನಾರಿಕೋವ್ ತಮ್ಮ ಫೇಸ್‌ಬುಕ್ ಪುಟದಲ್ಲಿ ತಾನು ಒಳ್ಳೆಯ ತಂದೆ ಮತ್ತು ಪತಿಯಾಗುವ ಆಕಾಂಕ್ಷೆ ಹೊಂದಿರುವುದಾಗಿ ತಿಳಿಸಿದ್ದರು.ಅದಕ್ಕಿಂತ ಮುಖ್ಯವಾದುದು ನನಗೆ ಬೇರಾವುದೂ ಇಲ್ಲವೆಂದು ಹೇಳಿದ್ದರು.ಅವರಿಂದ ಬೇರೆಯಾಗಿದ್ದ ಪತ್ನಿ ಸ್ವೆಟ್ಲಾನಾ ಬುಕಾರಿನಾ ಕೂಡ ಫೇಸ್‌ಬುಕ್ ಪುಟದಲ್ಲಿ ನನಗೆ ನೆಚ್ಚಿನ ಪತಿ ಮತ್ತು ಪುತ್ರರಿದ್ದಾರೆ ಎಂದು ಜಂಬಕೊಚ್ಚಿಕೊಂಡಿದ್ದರು.
ಮುಂದಿನ ಪುಟದಲ್ಲಿ ಹೆಚ್ಚಿನ ಮಾಹಿತಿ

webdunia
PR
PR
ಆದರೆ ಇತ್ತೀಚಿನ ತಿಂಗಳುಗಳಲ್ಲಿ ಅವರ ಜೀವನ ಏರುಪೇರಾಗಿತ್ತು. ಕನಾರಿಕೋವ್ ಮತ್ತು ಬುಕಾರಿನಾ ಪ್ರತ್ಯೇಕಗೊಂಡು, ಮಗುವನ್ನು ತಮ್ಮ ಕಸ್ಟಡಿಗೆ ನೀಡಬೇಕೆಂದು ಪರಸ್ಪರರ ಹೋರಾಟದಿಂದ ಕನಾರಿಕೋವ್‌ಗೆ ಕಿರಿಲ್ ಜತೆ ಕಳೆಯುವ ಆನಂದದ ಕ್ಷಣಗಳು ಕಾಣೆಯಾಗಿತ್ತು.
ಸಾರ್ವಜನಿಕ ಸ್ಥಳವೊಂದರಲ್ಲಿ ಅವರು ಭೇಟಿ ಮಾಡಿ ತಮ್ಮ ಮಗುವನ್ನು ಡ್ರಾಪ್ ಮತ್ತು ಪಿಕ್ ಅಪ್ ಮಾಡುತ್ತಿದ್ದರು. ಕನಾರಿಕೋವ್ ಕಿರಿಲ್‌ನನ್ನು ಬೆಳಿಗ್ಗೆ 10 ಗಂಟೆಗೆ ವಶಕ್ಕೆ ಪಡೆದು, ಮಧ್ಯಾಹ್ನ 1 ಗಂಟೆಗೆ ವಾಪಸ್ ಕಳಿಸಬೇಕಾಗಿತ್ತು.ಆದರೆ ಕನಾರಿಕೋವ್ ತನ್ನ ಮಗು ಕಿರಿಲ್ ಜತೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ದುರಂತ ಅಂತ್ಯವನ್ನು ಕಂಡಿದೆ.

ಕನಾರಿಕೋವ್ ಮತ್ತು ಅವನ ಮಗುವಿನ ದೇಹಗಳು ಎರಡು ಭಿನ್ನ ಕಟ್ಟಡಗಳ ಮೇಲೆ ಬಿದ್ದಿತ್ತು. ಕನಾರಿಕೋವ್ ತನ್ನ ಮಗುವನ್ನು ಎಸೆದು ನಂತರ ಕಟ್ಟಡದಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ.ಇಂತಹ ದಾರುಣ ಘಟನೆಗೆ ಕಾರಣವೇನು ಎನ್ನುವುದು ಅಸ್ಪಷ್ಟವಾಗಿದ್ದು, ಕನಾರಿಕೋವ್ ಮತ್ತು ಬುಕಾರಿನಾ ನಡುವೆ ಕಿರಿಲ್‌ನನ್ನು ಕಸ್ಟಡಿಗೆ ತೆಗೆದುಕೊಳ್ಳುವ ವಿಷಯವಾಗಿ ಜಗಳವಾಗಿತ್ತು. ನಿಗದಿತ ಕಾಲಾವಧಿಯಲ್ಲಿ ಪುತ್ರನನ್ನು ವಾಪಸ್ ನೀಡುವುದಕ್ಕೆ ವಿಫಲನಾಗಿದ್ದಾನೆ ಎಂದು ಬುಖಾರಿನಾ ಕಾನಾರಿಕೋವ್ ವಿರುದ್ದ ದೂರು ನೀಡಿದ್ದರು.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada