Select Your Language

Notifications

webdunia
webdunia
webdunia
webdunia

ಮಕ್ಕಳ ಬಗ್ಗೆ ಪ್ರೀತಿಯಿಲ್ಲದ ಬ್ರಿಟ್ನಿ

ಮಕ್ಕಳ ಬಗ್ಗೆ ಪ್ರೀತಿಯಿಲ್ಲದ ಬ್ರಿಟ್ನಿ
ನ್ಯೂಯಾರ್ಕ್ , ಬುಧವಾರ, 10 ಅಕ್ಟೋಬರ್ 2007 (19:29 IST)
ಅಮೆರಿಕದ ಪಾಪ್ ಸಿಂಗರ್ ಬ್ರಿಟ್ನಿ ತನ್ನ ಇಬ್ಬರು ಗಂಡುಮಕ್ಕಳ ಕಸ್ಟಡಿ ಕಳೆದುಕೊಂಡ ಬಳಿಕ "ಅವರ ಮೇಲೆ ನನಗೆ ಆಸಕ್ತಿಯೇ ಇಲ್ಲ: ಎಂದು ಹೇಳಿರುವುದು ಪಾಶ್ಚಾತ್ಯ ಜೀವನ ಶೈಲಿಯಲ್ಲಿ ಸ್ವಂತ ಮಕ್ಕಳ ಮೇಲಿನ ಮಮಕಾರ, ಪ್ರೀತಿ ನಶಿಸುತ್ತಿರುವುದಕ್ಕೆ ದ್ಯೋತಕವಾಗಿದೆ.

ಬ್ರಿಟ್ನಿ ತನ್ನ ಮಕ್ಕಳನ್ನು ಸಾಕುವ ಹಕ್ಕು ಕಳೆದುಕೊಂಡ ಬಳಿಕ ಆಕೆಯ ಸ್ನೇಹಿತೆ ಅವಳಿಗೆ ಸಮಾಧಾನ ಮಾಡುತ್ತಾ ನೀನು ಖಂಡಿತವಾಗಿ ನಿನ್ನ ಮಕ್ಕಳನ್ನು ಹಿಂತಿರುಗಿ ಪಡೆಯುತ್ತೀಯ ಎಂದು ಹೇಳಿದಳು. ಅವಳ ಮಾತಿಗೆ ಆಘಾತಕಾರಿ ಉತ್ತರ ನೀಡಿದ ಬ್ರಿಟ್ನಿ ಸ್ಪೀಯರ್ಸ್ ನನಗೆ ಮಕ್ಕಳ ಬಗ್ಗೆ ಚಿಂತೆಯೇ ಇಲ್ಲ ಎಂದು ಹೇಳಿದ್ದಾಳೆ.

25 ವರ್ಷದ ಬ್ರಿಟ್ನಿ ಕೋರ್ಟ್ ತೀರ್ಪಿನ ಬಳಿಕ ತನ್ನ ಇಬ್ಬರು ಮಕ್ಕಳನ್ನು ಕೆವಿನ್ ಫೆಡರಲೈನ್ ವಶಕ್ಕೆ ನೀಡಬೇಕಾಯಿತು. ಆಕೆ ತನ್ನ ಗಂಡುಮಕ್ಕಳನ್ನು ಕೆ.ಫೆಡ್‌ಗೆ ಹಸ್ತಾಂತರಿಸಿದ ಬಳಿಕ ಯಾವ ಚಿಂತೆಯೂ ಇಲ್ಲದೇ ಪೆನಿನ್ಸುಲಾ ಹೊಟೆಲ್‌ನಲ್ಲಿ ಆಯೋಜಿಸಿದ್ದ ಮೋಜಿನ ಕೂಟದಲ್ಲಿ ಪಾಲ್ಗೊಂಡಳೆಂದು ವರದಿಯಾಗಿದೆ.

ಸ್ಪೀಯರ್ಸ್ ನಿಯಮಿತವಾಗಿ ಹೊಟೆಲ್‌ಗಳಿಗೆ ಭೇಟಿಯಾಗುತ್ತಿದ್ದು, ಅಲ್ಲಿ ಆಕೆ ಮಾದಕವಸ್ತು ಮಾರಾಟಗಾರನನ್ನು ಬೇಟಿಯಾಗುತ್ತಿದ್ದಾಳೆಂದು ಸ್ಟಾರ್ ನಿಯತಕಾಲಿಕ ವರದಿ ಮಾಡಿದೆ.

Share this Story:

Follow Webdunia kannada