Select Your Language

Notifications

webdunia
webdunia
webdunia
webdunia

ಭಾರತ ಮಾತುಕತೆಗೆ ಒಪ್ಪದಿದ್ದರೆ, ಪಾಕ್ ಯುದ್ಧಕ್ಕೆ ಸಿದ್ಧ: ಜಮಾತ್ ದವಾಹ್!

ಭಾರತ ಮಾತುಕತೆಗೆ ಒಪ್ಪದಿದ್ದರೆ, ಪಾಕ್ ಯುದ್ಧಕ್ಕೆ ಸಿದ್ಧ: ಜಮಾತ್ ದವಾಹ್!
ಇಸ್ಲಾಮಾಬಾದ್ , ಭಾನುವಾರ, 28 ಫೆಬ್ರವರಿ 2010 (17:25 IST)
ಭಾರತ ಪಾಕಿಸ್ತಾನದ ಜೊತೆಗೆ ಮಾತುಕತೆಗೆ ಸಿದ್ಧವಾಗಿಲ್ಲವಾದರೆ, ಪಾಕಿಸ್ತಾನ ಯುದ್ಧಕ್ಕೆ ಸಿದ್ಧವಾಗಬೇಕಾದ ಅಗತ್ಯವಿದೆ ಎಂದು ಜಮಾತ್ ಉದ್ ದವಾಹ್ ಸಂಘಟನೆಯ ಮುಖ್ಯಸ್ಥ ಹಫೀಸ್ ಮಹಮ್ಮದ್ ಸಯೀದ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಯುದ್ಧವನ್ನೇ ಬಯಸಿದೆ. ಒಂದು ವೇಳೆ ಭಾರತ ಮಾತುಕತೆಗೆ ಸಿದ್ಧವಿಲ್ಲವೆಂದಾದರೆ ಪಾಕಿಸ್ತಾನ ಖಂಡಿತವಾಗಿಯೂ ಯುದ್ಧಕ್ಕೆ ತಯಾರಿದೆ ಎಂದು ಹಫೀಸ್ ಮಹಮ್ಮದ್ ಸಯೀದ್ ಹೇಳಿದರು.

ಮುಂಬೈ ದಾಳಿಯಲ್ಲಿ ನಿಮ್ಮ ಸಂಘಟನೆಯ ಕೈವಾಡವಿದೆಯೆಂದು ಭಾರತ ಹೇಳಿದ್ದಕ್ಕೆ ನೀವೇನು ಪ್ರತಿಕ್ರಿಯಿಸುತ್ತೇನೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಭಾರತ ಇದನ್ನು ಕೋರ್ಟಿನಲ್ಲಿ ಸಾಬೀತು ಪಡಿಸಿದರೆ, ಅದು ಮಾಡಿದ ಆರೋಪವನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದರು.

ಫೆ.25ರಂದು ಭಾರತ ಹಾಗೂ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಗಳ ನಡುವೆ ನವದೆಹಲಿಯಲ್ಲಿ ಮಾತುಕತೆ ನಡೆದ ನಂತರ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಸಯೀದ್ ಈಗಾಗಲೇ ನಿಷೇಧಿಸಲ್ಪಟ್ಟಿರುವ ಲಷ್ಟರ್ ಇ ತೊಯ್ಬಾದ ಸ್ಥಾಪಕನಾಗಿದ್ದು, 2008ರಲ್ಲಿ ಮುಂಬೈ ದಾಳಿಯ ನಂತರ ಜಮಾತ್ ದ್ ದವಾಹ್ ಕೂಡಾ ಒಂದು ಉಗ್ರಗಾಮಿ ಸಂಘಟನೆಯೆಂದು ವಿಶ್ವಸಂಸ್ಥೆಯ ರಕ್ಷಣಾ ಮಂಡಳಿ ಪ್ರಕಟಿಸಿದ ನಂತರ, ಲಾಹೋರ್‌ನಲ್ಲಿ ಗೃಹಬಂಧನದಲ್ಲಿದ್ದರು. ಲಾಹೋರ್ ಹೈಕೋರ್ಟ್ ಆದೇಶದ ನಂತರ ಆರು ತಿಂಗಳ ನಂತರ ಬಿಡುಗಡೆ ಕಂಡಿದ್ದರು.

Share this Story:

Follow Webdunia kannada