Webdunia - Bharat's app for daily news and videos

Install App

ಭಾರತದ ಜಲಾಂತರ್ಗಾಮಿ ಪ್ರಾಯೋಗಿಕ ಪರೀಕ್ಷೆ ಆರಂಭ

Webdunia
ಶುಕ್ರವಾರ, 20 ಆಗಸ್ಟ್ 2010 (16:44 IST)
ಭಾರತಕ್ಕೆ ಹತ್ತು ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗುತ್ತಿರುವ ಅಣ್ವಸ್ತ್ರ ಚಾಲಿತ ಜಲಾಂತರ್ಗಾಮಿ ನೌಕೆಯ ಪ್ರಾಯೋಗಿಕ ಪರೀಕ್ಷೆ ಮತ್ತು ಅದಕ್ಕಾಗಿನ ಭಾರತೀಯ ಸಿಬ್ಬಂದಿಗಳ ತಂಡಕ್ಕೆ ತರಬೇತಿಯನ್ನು ಸಾಗರದಾಳದಲ್ಲಿ ನೀಡುವ ಕಾರ್ಯವನ್ನು ಆರಂಭಿಸಲಾಗಿದೆ ಎಂದು ರಷ್ಯಾ ತಿಳಿಸಿದೆ.

ಅಕುಲಾ- II ಸಾಲಿನ ನೌಕೆ ಈಗಾಗಲೇ ಭಾರತದತ್ತ ಪ್ರಯಾಣ ಆರಂಭಿಸಿದೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ರಷ್ಯಾ, ಈ ನೌಕೆಯನ್ನು ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ ಎಂದಿದ್ದಾರೆ.

ಐಎನ್ಎಸ್ ಚಕ್ರ ಎಂದು ಹೆಸರಿಸಲಾಗುವ ಜಲಾಂತರ್ಗಾಮಿ ನೌಕೆಯನ್ನು ರಷ್ಯಾವು ಭಾರತಕ್ಕೆ 10 ವರ್ಷಗಳ ಗುತ್ತಿಗೆ ಆಧಾರದಲ್ಲಿ ಇದೇ ವರ್ಷ ಹಸ್ತಾಂತರಿಸಲಿದೆ ಎಂದು ಜೂನ್ ತಿಂಗಳಲ್ಲಿ ರಷ್ಯಾದ ಮಿಲಿಟರಿ-ತಾಂತ್ರಿಕ ಸಹಕಾರ ಫೆಡರಲ್ ಸರ್ವಿಸ್ ಮುಖ್ಯಸ್ಥ ಮೈಕೆಲ್ ಡಿಮಿಟ್ರಿವ್ ಖಚಿತಪಡಿಸಿದ್ದರು.

2004 ರ ಜನವರಿಯಲ್ಲಿ ನವದೆಹಲಿ ಮತ್ತು ಮಾಸ್ಕೋ ಈ ಸಂಬಂಧ ಒಪ್ಪಂದವೊಂದಕ್ಕೆ ಸಹಿ ಹಾಕಿದ ನಂತರ ಭಾರತವೂ ಆರ್ಥಿಕ ಸಹಕಾರ ನೀಡಿದ ನಂತರ ರಷ್ಯಾ ಈ ಅಣ್ವಸ್ತ್ರಚಾಲಿತ ಜಲಾಂತರ್ಗಾಮಿ ನೌಕೆಯನ್ನು ನಿರ್ಮಿಸಲು ತೊಡಗಿತ್ತು.

ಆರಂಭಿಕ ಒಪ್ಪಂದಗಳ ಪ್ರಕಾರ 2008ರ ಮಧ್ಯದಲ್ಲೇ ಭಾರತೀಯ ನೌಕಾ ಪಡೆಗೆ ಈ ಜಲಾಂತರ್ಗಾಮಿಯನ್ನು ಒಪ್ಪಿಸಬೇಕಿತ್ತು. ಆದರೆ ತಾಂತ್ರಿಕ ದೋಷಗಳ ಹಿನ್ನೆಲೆಯಲ್ಲಿ ಹಸ್ತಾಂತರ ವಿಳಂಬವಾಗಿತ್ತು.

2008 ರ ನವೆಂಬರ್ ತಿಂಗಳಲ್ಲಿ ಸಾಗರದಾಳದಲ್ಲಿ ಈ ನೌಕೆಯನ್ನು ಪರಿಶೀಲನೆಗೊಳಪಡಿಸಿದಾಗ ತಾಂತ್ರಿಕ ದೋಷದಿಂದ ವಿಷಾನಿಲ ಸೋರಿಕೆಗೊಂಡು 20 ನಾವಿಕರು ಮತ್ತು ತಾಂತ್ರಿಕ ತಜ್ಞರು ಕೊಲ್ಲಲ್ಪಟ್ಟಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments