Select Your Language

Notifications

webdunia
webdunia
webdunia
webdunia

ಭಯೋತ್ಪಾದನೆ ಹೋರಾಟಕ್ಕೆ ಅಮೆರಿಕದ ಫಂಡ್ ಪಾಕ್‌ನಿಂದ ಗುಳುಂ

ಭಯೋತ್ಪಾದನೆ ಹೋರಾಟಕ್ಕೆ ಅಮೆರಿಕದ ಫಂಡ್ ಪಾಕ್‌ನಿಂದ ಗುಳುಂ
ಇಸ್ಲಾಮಾಬಾದ್ , ಗುರುವಾರ, 30 ಜನವರಿ 2014 (16:05 IST)
PR
PR
ತಾಲಿಬಾನ್ ವಿರುದ್ಧ ಭಯೋತ್ಪಾದನೆ ನಿಗ್ರಹ ಹೋರಾಟಕ್ಕೆ ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಕೋಟ್ಯಂತರ ಡಾಲರ್‌ಗಳ ನೆರವನ್ನು ಪಾಕಿಸ್ತಾನಕ್ಕೆ ನೀಡುತ್ತಿವೆ. ಆದರೆ ಈ ಹಣವನ್ನು ಪಾಕಿಸ್ತಾನ ಅಧಿಕಾರಿಗಳು ಸಚಿವರ ಸಂಬಂಧಿಗಳಿಗೆ ಮತ್ತು ಭೇಟಿ ನೀಡುವ ಗಣ್ಯರಿಗೆ ವಿವಾಹದ ಉಡುಗೊರೆಗಳು, ಐಷಾರಾಮಿ ಕಾರ್ಪೆಟ್‌ಗಳು ಮತ್ತು ಚಿನ್ನಾಭರಣ ಖರೀದಿಗೆ ಬಳಸುತ್ತಿರುವ ಆಘಾತಕಾರಿ ಸಂಗತಿ ವರದಿಯಾಗಿದೆ. ಪಾಕಿಸ್ತಾನದಲ್ಲಿ ಉನ್ನತ ಮಟ್ಟದ ಭ್ರಷ್ಟಾಚಾರದ ಮೇಲೆ ಇದು ಬೆಳಕು ಚೆಲ್ಲಿದೆ. ಬಡತನದಿಂದ ಬೇಯುತ್ತಿರುವ ಅಣ್ವಸ್ತ್ರ ಸಜ್ಜಿತ ದೇಶ ತಾಲಿಬಾನ್ ಹಿಂಸಾಚಾರದಿಂದ ತತ್ತರಿಸಿದೆ.

ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು 2001ರ ಭಯೋತ್ಪಾದನೆ ದಾಳಿ ನಡೆದಾಗಿನಿಂದ ತಾಲಿಬಾನ್ ಮತ್ತು ಅಲ್ ಖಾಯಿದಾ ಸಂಪರ್ಕದ ಉಗ್ರಗಾಮಿಗಳ ವಿರುದ್ಧ ಹೋರಾಟಕ್ಕೆ ಕೋಟ್ಯಂತರ ಡಾಲರ್‌ಗಳನ್ನು ಸುರಿಯುತ್ತಿದೆ. ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣೆ ವಿಭಾಗ(ಎನ್‌ಸಿಎಂಸಿ) ಪಾಕಿಸ್ತಾನ ಸರ್ಕಾರದ ಖಜಾನೆಯಿಂದ 2009-2013ರ ಅವಧಿಯಲ್ಲಿ 425 ದಶಲಕ್ಷ ರೂಪಾಯಿ ಸ್ವೀಕರಿಸಿದೆ. ಆ ಸಂದರ್ಭದಲ್ಲಿ ಒಳಾಡಳಿತ ಸಚಿವಾಲಯಕ್ಕೆ ರೆಹಮಾನ್ ಮಲ್ಲಿಕ್ ಮುಖ್ಯಸ್ಥರಾಗಿದ್ದರು. ಅವರು 2012ರಲ್ಲಿ ಇಂಟರ್‍ಪೋಲ್ ಸಮಾವೇಶಕ್ಕಾಗಿ ರೋಮ್‌ಗೆ ಹೋದ ಸಂದರ್ಭದಲ್ಲಿ ನೆಕ್ಲೇಸ್, ಮರದ ಮೇಜುಗಳು ಮತ್ತು ಟಚ್‌ಮೇಟ್ ಟ್ಯಾಬ್ಲೆಂಡ್ ಕಂಪ್ಯೂಟರ್‌ಗಳನ್ನು ಉಡುಗೊರೆಯಾಗಿ ತೆಗೆದುಕೊಂಡು ಹೋಗಿದ್ದನ್ನು ತೋರಿಸಿದೆ.

Share this Story:

Follow Webdunia kannada