Select Your Language

Notifications

webdunia
webdunia
webdunia
webdunia

ಬ್ರೆಜಿಲ್ ಜೈಲಿಗೆ ಬೆಂಕಿ: 25 ಕೈದಿಗಳ ಸಾವು

ಬ್ರೆಜಿಲ್ ಜೈಲಿಗೆ ಬೆಂಕಿ: 25 ಕೈದಿಗಳ ಸಾವು
ಸಾವೊ ಪಾಲೊ , ಶುಕ್ರವಾರ, 24 ಆಗಸ್ಟ್ 2007 (16:06 IST)
ಬ್ರೆಜಿಲ್‌ನ ಜೈಲು ಕೋಣೆಯೊಂದರಲ್ಲಿ ವಿರೋಧಿ ಬಣವನ್ನು ಸುತ್ತುವರಿದ ಕೈದಿಗಳು ಜೈಲು ಕೋಣೆಗೆ ಬೆಂಕಿ ಹಚ್ಚಿ 25 ಮಂದಿ ಸಹಕೈದಿಗಳನ್ನು ಜೀವಂತ ದಹಿಸಿದ ಘಟನೆ ನಡೆದಿದೆ.

ಮಿನಾಸ್ ಗೆರೈಸ್‌ನಲ್ಲಿ ಗುರುವಾರ ಬೆಳಕು ಹರಿಯುವ ಮುಂಚೆ ಜೈಲನ್ನು ತಮ್ಮ ವಶಕ್ಕೆ ತೆಗೆದುಕೊಂಡ ಕೈದಿಗಳು ವಿರೋಧಿ ಬಣಕ್ಕೆ ಸೇರಿದ ಕೈದಿಗಳನ್ನು ಜೈಲುಕೋಣೆಯಲ್ಲಿ ಕೂಡಿಹಾಕಿ ಚಾಪೆಗಳಿಗೆ ಬೆಂಕಿ ಹಚ್ಚಿದರೆಂದು ಪೊಲೀಸರು ತಿಳಿಸಿದ್ದಾರೆ.

ಜೈಲಿನಲ್ಲಿ ಉಂಟಾದ ದಂಗೆಯನ್ನು ಹತ್ತಿಕ್ಕುವ ಸಲುವಾಗ ಸಂಧಾನಕ್ಕೆ ಯತ್ನಿಸುತ್ತಿದ್ದ ಅಧಿಕಾರಿಗಳು, ಬೆಂಕಿಯನ್ನು ನಂದಿಸಲು ನೀರನ್ನು ಎರಚಿದರು. ಸ್ವಲ್ಪ ಹೊತ್ತಿನ ಬಳಿಕ ಹೊಗೆಯಾಡುತ್ತಿದ್ದ ಜೈಲುಕೋಣೆಯಲ್ಲಿ ಸುಟ್ಟ ದೇಹಗಳು ಪತ್ತೆಯಾದವು.
ಬ್ರೆಜಿಲ್‌ನ ಕಿಕ್ಕಿರಿದ ಜೈಲುಗಳಲ್ಲಿ ಕಾರಾಗೃಹ ಹಿಂಸಾಚಾರ ಮತ್ತು ದಂಗೆಗಳು ಸಾಮಾನ್ಯ ಸಂಗತಿಯಾಗಿ ಪರಿಣಮಿಸಿದೆ. ಅಲ್ಲಿನ ಜೈಲುಗಳನ್ನು ಕೆಲವು ಗ್ಯಾಂಗ್‌ಗಳು ಹೇಗೆ ನಿಯಂತ್ರಿಸುತ್ತದೆ ಎನ್ನುವುದಕ್ಕೆ ಇದು ನಿದರ್ಶನವಾಗಿದೆ.

Share this Story:

Follow Webdunia kannada