Select Your Language

Notifications

webdunia
webdunia
webdunia
webdunia

ಬ್ರಿಟನ್ 'ಹೈ ರಿಸ್ಕ್' ಪ್ರವಾಸಿಗಳಿಂದ 4350 ಡಾಲರ್ ಬಾಂಡ್

ಬ್ರಿಟನ್ 'ಹೈ ರಿಸ್ಕ್' ಪ್ರವಾಸಿಗಳಿಂದ 4350 ಡಾಲರ್ ಬಾಂಡ್
, ಸೋಮವಾರ, 29 ಜುಲೈ 2013 (19:29 IST)
PTI
PTI
ಲಾಗೋಸ್, ನೈಜೀರಿಯಾ: ಆಫ್ರಿಕಾ ಮತ್ತು ಏಷ್ಯಾದ 6 ಮುಂಚಿನ ವಸಾಹತುಗಳ 'ಹೈರಿಸ್ಕ್' ಪ್ರವಾಸಿಗಳು ವೀಸಾ ಪಡೆಯಬೇಕಾದರೆ 3000 ಪೌಂಡ್(4350 ಡಾಲರ್) ಮೊತ್ತದ ಹಿಂತಿರುಗಿಸಲಾಗದ ಬಾಂಡ್ ಸಲ್ಲಿಸುವುದನ್ನು ಬ್ರಿಟಿಷ್ ಹೋಮ್ ಆಫೀಸ್ ಖಚಿತಪಡಿಸಿದೆ. ಈ ಕ್ರಮದಿಂದ ಆಕ್ರೋಶ, ತಾರತಮ್ಯದ ಆರೋಪಗಳು ಕೇಳಿಬಂದಿದ್ದರೂ ಪೈಲಟ್ ಯೋಜನೆಗೆ ಬ್ರಿಟನ್ ಚಾಲನೆ ನೀಡುತ್ತದೆ ಎಂದು ಹೇಳಿಕೆಯೊಂದು ಸೋಮವಾರ ತಿಳಿಸಿದೆ.

ಈ ಬೃಹತ್ ಯೋಜನೆ ಎಂದು ಆರಂಭವಾಗುತ್ತದೆಂದು ಈಮೇಲ್ ಮೂಲಕ ಕಳಿಸಿದ ಹೇಳಿಕೆ ತಿಳಿಸಿಲ್ಲ. ಈ ಯೋಜನೆಯಿಂದ ನೈಜೀರಿಯಾ, ಘಾನಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ನಾಗರಿಕರಿಗೆ ದುಷ್ಪರಿಣಾಮ ಬೀರಲಿದೆ.ಬಾಂಡ್ ಪದ್ಧತಿಯು ವೀಸಾ ಪಡೆದವರು ಅವಧಿ ಮೀರಿ ಉಳಿಯುವುದನ್ನು ಮತ್ತು ಸಾರ್ವಜನಿಕ ಸೇವೆಗೆಳನ್ನು ಬಳಸುವ ವಿದೇಶಿಯರಿಂದ ವೆಚ್ಚಗಳನ್ನು ವಸೂಲಿ ಮಾಡುತ್ತದೆ.

Share this Story:

Follow Webdunia kannada