Select Your Language

Notifications

webdunia
webdunia
webdunia
webdunia

ಬೀಜಿಂಗ್: ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡ ಪಾಕ್ ರಾಯಭಾರಿ

ಬೀಜಿಂಗ್: ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡ ಪಾಕ್ ರಾಯಭಾರಿ
ಬೀಜಿಂಗ್‌ , ಸೋಮವಾರ, 31 ಅಕ್ಟೋಬರ್ 2011 (18:41 IST)
ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ನಡೆದ ದೀಪಾವಳಿ ಆಚರಣೆಯಲ್ಲಿ ಪಾಕ್‌ ರಾಯಭಾರಿ ಮಸೂದ್‌ ಖಾನ್‌ ಅವರು ಪತ್ನಿ ಝೋಹ್ರಾ ಅವರೊಂದಿಗೆ ಪಾಲ್ಗೊಂಡಿದ್ದರು. ದೀಪಾವಳಿ ಅಂಗವಾಗಿ ಕಲಾವಿದರು ನಡೆಸಿಕೊಟ್ಟ ಕಾರ್ಯಕ್ರಮವನ್ನೂ ವೀಕ್ಷಿಸಿದರು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪಾಕಿಸ್ತಾನದ ಮಾಜಿ ಪ್ರಧಾನಿ ಝುಲ್ಫಿಕರ್‌ ಆಲಿ ಭುಟ್ಟೋ ಅವರ ಪತ್ನಿ ನಸ್ರತ್‌ ಭೂಟ್ಟೋ ಅವರು ನಿಧನರಾಗಿದ್ದ ಸಂದರ್ಭದಲ್ಲಿ ಚೀನಾದಲ್ಲಿರುವ ಪಾಕ್‌ ರಾಯಭಾರ ಕಚೇರಿಗೆ ತೆರಳಿದ್ದ ಭಾರತದ ರಾಯಭಾರಿ ಎಸ್‌. ಜೈಶಂಕರ್‌ ಅವರು ಸಂತಾಪ ಸೂಚಿಸಿದ್ದರು. ಇದಾದ ನಂತರ ಭಾರತೀಯ ರಾಯಭಾರ ಕಚೇರಿಯಲ್ಲಿ ನಡೆಸಲಾಗುವ ದೀಪಾವಳಿ ಆಚರಣೆಗೆ ನೀಡಿದ್ದ ಆಹ್ವಾನದ ಮೇರೆಗೆ ಪಾಕ್‌ ರಾಯಭಾರಿ ಆಗಮಿಸಿದ್ದರು.

ಭಾರತೀಯ ರಾಯಭಾರ ಕಚೇರಿಯಲ್ಲಿ ಎರಡು ಗಂಟೆಗಳಿಗೂ ಹೆಚ್ಚುಕಾಲ ಹಾಜರಿದ್ದ ಪಾಕ್‌ ರಾಯಭಾರಿ ಮಸೂದ್‌ ಖಾನ್‌ ಅವರು ಭೋಜನವನ್ನೂ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅಫ್ಘಾನಿಸ್ತಾನದ ರಾಯಭಾರಿ ಸುಲ್ತಾನ್‌ ಅಹಮದ್‌ ಬಾಹ್ರಿ, ಚೀನಾ ವಿದೇಶಾಂಗ ಸಚಿವ ಸನ್‌ ವೈಡಾಂಗ್‌ ಅವರೂ ಹಾಜರಿದ್ದರು. ಪಾಕಿಸ್ತಾನದ ರಾಯಭಾರಿಯೊಬ್ಬರು ಭಾರತೀಯ ರಾಯಭಾರಿ ಕಚೇರಿಯಲ್ಲಿ ನಡೆದ ಹಬ್ಬದ ಆಚರಣೆಯಲ್ಲಿ ಹಲವಾರು ವರ್ಷಗಳ ನಂತರ ಪಾಲ್ಗೊಂಡಿದ್ದಾರೆ.

ಭಾರತೀಯ ರಾಯಭಾರ ಕಚೇರಿಯಲ್ಲಿ ನಡೆದ ದೀಪಾವಳಿ ಆಚರಣೆಯಲ್ಲಿ ಬೀಜಿಂಗ್‌ನಲ್ಲಿ ನೆಲೆಸಿರುವ ಭಾರತೀಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಚೀನಾದ ಜಿನ್‌ ಶನ್‌ಶಾನ್‌ ಅವರು ಭರತನಾಟ್ಯ ಪ್ರದರ್ಶಿಸಿದರು. ಇದಾದ ನಂತರ ಪಟಾಕಿ ಹಚ್ಚಿ ಸಂಭ್ರಮಿಸಲಾಯಿತು.

Share this Story:

Follow Webdunia kannada