Select Your Language

Notifications

webdunia
webdunia
webdunia
webdunia

ಬಾಲಕಿಯನ್ನು ರಕ್ಷಿಸಿದ ಫಿಲಿಪ್ಪೀನ್ಸ್ ನಾಯಿಗೆ ಭವ್ಯ ಸ್ವಾಗತ

ಬಾಲಕಿಯನ್ನು ರಕ್ಷಿಸಿದ ಫಿಲಿಪ್ಪೀನ್ಸ್ ನಾಯಿಗೆ ಭವ್ಯ ಸ್ವಾಗತ
ಫಿಲಿಪ್ಪೀನ್ಸ್ , ಮಂಗಳವಾರ, 11 ಜೂನ್ 2013 (11:22 IST)
PR
PR
ಇದೊಂದು ಸಾಹಸಿ ನಾಯಿ. ಅಮೆರಿಕದಿಂದ ಫಿಲಿಪ್ಪೀನ್ಸ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಇದಕ್ಕೆ ನೂರಾರು ಮಂದಿಯಿಂದ ಆತ್ಮೀಯ ಸ್ವಾಗತ ವ್ಯಕ್ತವಾಗಿದೆ. ಇದರ ಗೌರವಾರ್ಥವಾಗಿ ಪೆರೇಡ್ ಅನ್ನೂ ನಡೆಸಲಾಗಿದೆ.

ನಾಯಿಗೆ ಇಂಥ ಅದ್ಧೂರಿ ಸ್ವಾಗತ ಏಕೆ ಎಂದು ಭಾವಿಸುತ್ತಿದ್ದೀರಾ? ಅದಕ್ಕೆ ಉತ್ತರ ಇಲ್ಲಿದೆ. ಇದು ಅಂತಿಂಥ ನಾಯಿಯಲ್ಲ. ಇದರ ಹೆಸರು ಕಬಾಂಗ್. 8 ತಿಂಗಳ ಹಿಂದೆ ಇಬ್ಬರು ಬಾಲಕಿಯರ ಪ್ರಾಣ ರಕ್ಷಿಸಿದ ಕೀರ್ತಿ ಇದರದ್ದು. ನಾಯಿಯ ಮಾಲೀಕನ ಮಗಳು ಮತ್ತು ಸೋದರಸೊಸೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅಷ್ಟರಲ್ಲೇ ವೇಗವಾಗಿ ಬಂದ ಬೈಕೊಂದು ಇನ್ನೇನು ಅವರಿಗೆ ಡಿಕ್ಕಿ ಹೊಡೆಯುತ್ತಿತ್ತು ಎನ್ನುವಾಗ ಕಬಾಂಗ್ ಎಲ್ಲಿತ್ತೋ ಗೊತ್ತಿಲ್ಲ, ಸೂಪರ್‌ಮ್ಯಾನ್‌ನಂತೆ ಬಂದು ಬೈಕ್‌ಗೆ ಅಡ್ಡ ನಿಲ್ಲುವ ಮೂಲಕ ಹುಡುಗಿಯರ ಪ್ರಾಣ ರಕ್ಷಿಸಿತ್ತು.

ಬೈಕ್ ಗುದ್ದಿದ ಪರಿಣಾಮ ಕಬಾಂಗ್‌ಗೆ ಗಂಭೀರ ಗಾಯಗಳಾಗಿತ್ತು. ನಂತರ ವೈದ್ಯರೊಬ್ಬರು ಅದನ್ನು ಅಮೆರಿಕಕ್ಕೆ ಕರೆದೊಯ್ಯು 8 ತಿಂಗಳು ಚಿಕಿತ್ಸೆ ಕೊಡಿಸಿದರು. ಈಗ ಕಬಾಂಗ್ ಮತ್ತೆ ತನ್ನ ಮಾಲೀಕನನ್ನು ಸೇರಿದೆ.

Share this Story:

Follow Webdunia kannada