Select Your Language

Notifications

webdunia
webdunia
webdunia
webdunia

ಬಟ್ಟೆಗಳನ್ನು ಬಿಚ್ಚಿ ಬೆತ್ತಲೆಯಾಗಿ ಮದುವೆಯಾದ ಗಿಪ್ಸಿ ಟಾಬ್ , ಸ್ಮಿತ್

ಬಟ್ಟೆಗಳನ್ನು ಬಿಚ್ಚಿ ಬೆತ್ತಲೆಯಾಗಿ ಮದುವೆಯಾದ ಗಿಪ್ಸಿ ಟಾಬ್ , ಸ್ಮಿತ್
, ಸೋಮವಾರ, 31 ಮಾರ್ಚ್ 2014 (19:52 IST)
ಸ್ಯಾನ್‌ಫ್ರಾನ್ಸಿಸ್ಕೊ: ಇಬ್ಬರು ಬೆತ್ತಲೆ ಕಾರ್ಯಕರ್ತರಾದ ಗಿಪ್ಸಿ ಟಾಪ್ ಮತ್ತು ಜೈಮ್ ಸ್ಮಿತ್ ಸ್ಯಾನ್‌ಫ್ರಾನ್ಸಿಸ್ಕೊ ಸಿಟಿ ಹಾಲ್‌ನಲ್ಲಿ ಬೆತ್ತಲೆ ಮದುವೆಯಾಗಿರುವ ವಿಚಿತ್ರ ಪ್ರಸಂಗ ವರದಿಯಾಗಿದೆ. ವಧು ಟಾಬ್ ಮತ್ತು ವರ ಗ್ರೂಮ್ ನಗ್ನ ಮದುವೆಯಲ್ಲಿ ಪಾಲ್ಗೊಳ್ಳುವುದಕ್ಕೆ ತಮ್ಮ ಬಟ್ಟೆಗಳನ್ನು ಬಿಚ್ಚಿ ಬೆತ್ತಲೆಯಾದರು. ಟಾಬ್ ನಗ್ನ ಚಟುವಟಿಕೆಗಳಿಗೆ ಹೆಸರಾಗಿದ್ದು, ಸಾರ್ವಜನಿಕ ನಗ್ನತೆ ವಿರುದ್ಧ ನಗರ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಅನೇಕ ಬಾರಿ ಬಂಧಿತರಾಗಿದ್ದರು. ತಾನು ಬೆತ್ತಲೆಯಾದಾಗ ಯಾರಿಗೂ ನೋವನ್ನುಂಟು ಮಾಡುವುದಿಲ್ಲ ಎಂದು ಟಾಬ್ ಹೇಳಿದ್ದಾಳೆ.

ಆದರೆ ಅವಳ ಮದುವೆ ದಿನದಂದು ಮಾತ್ರ 24 ಪೊಲೀಸ್ ಅಧಿಕಾರಿಗಳು ಅಲ್ಲಿಗೆ ಆಗಮಿಸಿ ಅವಳು ಯಾವುದೋ ಕೊಲೆ ಮಾಡಿರುವಂತೆ ವರ್ತಸಿದರು. ಆಗ ಉಡುಪಿನಲ್ಲಿ ಅವಳು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡರೂ, ನಂತರ ಸಮಾರಂಭದ ಕೊನೆಯಲ್ಲಿ ಮುಖವಸ್ತ್ರದಿಂದ ಮಾತ್ರ ಅವಳು ಮೈಮುಚ್ಚಿಕೊಂಡಿದ್ದಳು. ಸಾರ್ವಜನಿಕ ನಗ್ನತೆ ನಿಷೇಧ ಕಾನೂನು ಉಲ್ಲಂಘಿಸಿದ ಟಾಬ್ ಮತ್ತು ಸ್ಮಿತ್ ಅವರನ್ನು ಮದುವೆ ನಂತರ ಬಂಧಿಸಲಾಯಿತು.

Share this Story:

Follow Webdunia kannada