Select Your Language

Notifications

webdunia
webdunia
webdunia
webdunia

ಪಾಕ್ : ಹೆಣ್ಣು ಮಗು ಹೆತ್ತ 56 ಮಹಿಳೆಯರನ್ನು ಹತ್ಯೆ ಮಾಡಿದ ಪುರುಷ ಸಮುದಾಯ

ಪಾಕ್ : ಹೆಣ್ಣು ಮಗು ಹೆತ್ತ 56 ಮಹಿಳೆಯರನ್ನು ಹತ್ಯೆ ಮಾಡಿದ ಪುರುಷ ಸಮುದಾಯ
ಲಾಹೋರ್ , ಗುರುವಾರ, 28 ನವೆಂಬರ್ 2013 (17:11 IST)
PTI
ಪ್ರಸಕ್ತ ವರ್ಷದ ಅವಧಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕಾಗಿ 56 ಮಹಿಳೆಯರನ್ನು ದಾರುಣವಾಗಿ ಹತ್ಯೆ ಮಾಡಿದ ಘಟನೆ ನೆರೆಯ ಪಾಕಿಸ್ತಾನದಿಂದ ವರದಿಯಾಗಿದೆ.

ಹೆಣ್ಣು ಮಗವಿಗೆ ಹೆತ್ತ ತಾಯಂದಿರನ್ನು ಹತ್ಯೆಗೈಯುವ ರಾಷ್ಟ್ರದಲ್ಲಿ ನೈತಿಕ ಸಮಾಜ ನಿರ್ನಾಮವಾಗಿದೆ ಎಂದು ಮಾನವ ಹಕ್ಕುಗಳ ಆಯೋಗದ ಸದಸ್ಯ ಎ.ರೆಹಮಾನ್ ಟೀಕಿಸಿದ್ದಾರೆ.

ಅಂಕಿ ಅಂಶಗಳ ಪ್ರಕಾರ, ಕಳೆದ ಜನೆವರಿ 2012 ರಿಂದ ಸೆಪ್ಟೆಂಬರ್ 2013 ರವರೆಗೆ ಮಹಿಳೆಯರ ಮೇಲೆ 90 ಆಸಿಡ್ ದಾಳಿಗಳು ನಡೆದಿವೆ. 72 ಮಹಿಳೆಯರನ್ನು ಬೆಂಕಿ ಹಚ್ಚಿ ಹತ್ಯೆಗೈಯಲಾಗಿದೆ. 491 ಗೃಹ ಕಲಹ ಮತ್ತು 344 ಗ್ಯಾಂಗ್‌ರೇಪ್ ಹಾಗೂ 835 ಮಹಿಳೆಯರಿಗೆ ಹಿಂಸೆ ನೀಡಿದ ಪ್ರಕರಣಗಳು ವರದಿಯಾಗಿವೆ.

ಹೆಣ್ಣು ಮಗುವನ್ನು ಹೆತ್ತ 56 ಮಹಿಳೆಯರನ್ನು ನಿರ್ದಯಿಯಾಗಿ ಹತ್ಯೆ ಮಾಡಲಾಗಿದೆ. ಯುವತಿಯರ ಮೇಲೆ ನಿರಂತರ ಅತ್ಯಾಚಾರವಾಗುತ್ತಿದ್ದರೂ ಪ್ರತಿಭಟಿಸುವ ಬದಲು ಮೌನವಾಗಿ ಮೂಕ ಪ್ರೇಕ್ಷಕರಾಗಿ ಸರಕಾರ ನೋಡುತ್ತಿದೆ ಎಂದು ಕಿಡಿಕಾರಿದರು.

ಬಾಲಕ ಬಾಲಕಿಯರಿಗೆ ಶಿಕ್ಷಣದಲ್ಲಿ ಸಮಾನತೆ ನೀಡಿ ಯುನಿಫಾರ್ಮ್ ಡ್ರೆಸ್‌ಕೋಡ್ ಜಾರಿಗೆ ತಂದಲ್ಲಿ ಶ್ರೀಮಂತ ಮತ್ತು ಬಡವರ ಮಧ್ಯದ ಅಂತರ ಹೊಗಲಾಡಿಸಿ ದೇಶದಲ್ಲಿ ಹೊಸ ಬದಲಾವಣೆ ತರಬಹುದು ಎಂದು ಹೇಳಿದ್ದಾರೆ.

ಶಿಕ್ಷಣ ನಮ್ಮ ಮೂಲ ಹಕ್ಕು ಎಂದು ಹೋರಾಟ ನಡೆಸಲು 62 ವರ್ಷಗಳು ತೆಗೆದುಕೊಂಡಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ ಎ.ರೆಹ್ಮಾನ್ ಅಸಮಾಧಾನ ವ್ಯಕ್ತಪಡಿಸಿದರು.

Share this Story:

Follow Webdunia kannada