Select Your Language

Notifications

webdunia
webdunia
webdunia
webdunia

ಪಾಕ್: ನೌಕಾನೆಲೆ ದಾಳಿ-ಮಾಹಿತಿ ಕೊಟ್ರೆ 50 ಲಕ್ಷ ಇನಾಮು

ಪಾಕ್: ನೌಕಾನೆಲೆ ದಾಳಿ-ಮಾಹಿತಿ ಕೊಟ್ರೆ 50 ಲಕ್ಷ ಇನಾಮು
ಇಸ್ಲಾಮಾಬಾದ್ , ಮಂಗಳವಾರ, 31 ಮೇ 2011 (17:39 IST)
ಕರಾಚಿಯಲ್ಲಿನ ನೌಕಾ ನೆಲೆ ಮೇಲೆ ದಾಳಿ ನಡೆಸಿದವರ ಬಗ್ಗೆ ಮಾಹಿತಿ ನೀಡಿದವರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಪಾಕಿಸ್ತಾನ ಘೋಷಿಸಿದೆ.

ಪಾಕಿಸ್ತಾನ ನೌಕಾನೆಲೆ ಮೆಹ್ರಾನ್ ಮೇಲೆ ದಾಳಿ ನಡೆಸಿದವರ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡಿದವರಿಗೆ 50 ಲಕ್ಷ ರೂಪಾಯಿ ನೀಡುವುದಾಗಿ ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ಘೋಷಿಸಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ಮಂಗಳವಾರ ವರದಿ ಮಾಡಿದೆ.

ಮೇ 22ರಂದು ಲಾಡೆನ್ ಹತ್ಯೆಯ ಪ್ರತೀಕಾರ ಎಂಬಂತೆ ಪಾಕ್ ನೌಕಾ ನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಭದ್ರತಾ ಪಡೆಗಳು ಸುಮಾರು 16 ಗಂಟೆಗಳ ಕಾಲ ಹೋರಾಟ ನಡೆಸಿ ಉಗ್ರರ ದಾಳಿಗೆ ಅಂತ್ಯಹಾಡಿದ್ದರು. ಘಟನೆಯಲ್ಲಿ 14 ಮಂದಿ ಸಾವನ್ನಪ್ಪಿದ್ದರು.

Share this Story:

Follow Webdunia kannada