Select Your Language

Notifications

webdunia
webdunia
webdunia
webdunia

ಪಾಕ್‌ನಲ್ಲಿ ಸೇನಾದಂಗೆ - ಐಎಸ್ಐಗೆ ಮಾಹಿತಿ ಇಲ್ಲ: ಶುಜಾ ಪಾಶಾ

ಪಾಕ್‌ನಲ್ಲಿ ಸೇನಾದಂಗೆ - ಐಎಸ್ಐಗೆ ಮಾಹಿತಿ ಇಲ್ಲ: ಶುಜಾ ಪಾಶಾ
ಇಸ್ಲಾಮಾಬಾದ್ , ಶುಕ್ರವಾರ, 6 ಏಪ್ರಿಲ್ 2012 (16:37 IST)
PR
ಕಳೆದ ವರ್ಷ ಮೇ ತಿಂಗಳಿನಲ್ಲಿ ಅಲ್ ಖಾಯಿದಾ ಮುಖಂಡ ಒಸಾಮಾ ಬಿನ್ ಲಾಡೆನ್‌ನನ್ನು ಅಬೋಟಾಬಾದ್‌ನಲ್ಲಿ ಅಮೆರಿಕ ಸೇನಾ ಪಡೆಗಳು ದಾಳಿ ನಡೆಸಿ ಹತ್ಯೆಗೈದ ನಂತರ ದೇಶದಲ್ಲಿ ಸೇನಾದಂಗೆ ನಡೆಸಲು ಮಿಲಿಟರಿ ಯಾವುದೇ ಸಂಚು ರೂಪಿಸಿಲ್ಲ ಎಂದು ಐಎಸ್ಐ ಮಾಜಿ ಮುಖ್ಯಸ್ಥ ಅಹ್ಮದ್ ಶುಜಾ ಪಾಶಾ ಪಾಕ್ ನ್ಯಾಯಾಂಗ ಆಯೋಗಕ್ಕೆ ತಿಳಿಸಿದ್ದಾರೆ.

'ಒಂದು ವೇಳೆ ಅಂತಹ ಬೆದರಿಕೆ ಇದ್ದಿದ್ರೂ ಸಹ ಆ ಬಗ್ಗೆ ಐಎಸ್ಐಗೆ ಯಾವುದೇ ಮಾಹಿತಿ ಇದ್ದಿರಲಿಲ್ಲ ಎಂದು ಪಾಶಾ ಆಯೋಗದ ಮುಂದೆ ಸಾಕ್ಷ್ಯ ನುಡಿದಿದ್ದಾರೆ.

ಬಿನ್ ಲಾಡೆನ್ ಹತ್ಯೆಯಾದ ನಂತರ ಪಾಕಿಸ್ತಾನದಲ್ಲಿ ಮಿಲಿಟರಿ ಸೇನಾದಂಗೆ ಮೂಲಕ ಅಧಿಕಾರವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲಿದೆ ಎಂಬ ರಹಸ್ಯ ಮೆಮೊ ಬಹಿರಂಗವಾಗಿತ್ತು. ಆ ಹಿನ್ನೆಲೆಯಲ್ಲಿ ಶುಜಾ ಪಾಶಾ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆ ಬಗ್ಗೆ ಆಯೋಗ ತನಿಖೆ ಮುಂದವರಿಸುತ್ತಿದೆ.

ಅಮೆರಿಕದ ಉದ್ಯಮಿ ಮನ್ಸೂರ್ ಇಜಾಜ್ ಮೆಮೋವನ್ನು ಬಹಿರಂಗಪಡಿಸಿದ ನಂತರ ಪ್ರಕರಣದ ತನಿಖೆಗಾಗಿ ಸುಪ್ರೀಂಕೋರ್ಟ್ ಮೂವರು ನ್ಯಾಯಾಧೀಶರನ್ನೊಳಗೊಂಡ ಆಯೋಗವನ್ನು ರಚಿಸಿತ್ತು. ಅಮೆರಿಕದಲ್ಲಿರುವ ಪಾಕಿಸ್ತಾನದ ಮಾಜಿ ರಾಯಭಾರಿ ಹುಸೈನ್ ಹಕ್ಕಾನಿ ನಿರ್ದೇಶನದ ಮೇರೆಗೆ ಅಮೆರಿಕ ಮಿಲಿಟರಿ ಈ ಮೆಮೋ ಡ್ರಾಫ್ಟ್ ಮಾಡುವಂತೆ ಸೂಚಿಸಿತ್ತು ಎಂದು ಇಜಾಜ್ ಆರೋಪಿಸಿದ್ದ.

ಆದರೆ ಇಜಾಜ್ ಆರೋಪವನ್ನು ಪಾಕ್ ಸರ್ಕಾರ ತಳ್ಳಿಹಾಕಿತ್ತು. ಅಷ್ಟೇ ಅಲ್ಲ ಒಸಾಮಾ ಬಿನ್ ಲಾಡೆನ್ ಹತ್ಯೆಯಾದ ನಂತರ ಪಾಕ್ ಮಿಲಿಟರಿ ಸೇನಾ ಕ್ರಾಂತಿ ನಡೆಸಲು ಮುಂದಾಗಿತ್ತು ಎಂಬುದಾಗಿಯೂ ಇಜಾಜ್ ಗಂಭೀರವಾಗಿ ಆಱೋಪಿಸಿದ್ದ.

Share this Story:

Follow Webdunia kannada