Select Your Language

Notifications

webdunia
webdunia
webdunia
webdunia

ಪತ್ರಕರ್ತನನ್ನು ಅಪಹರಿಸಿ ಚಿತ್ರಹಿಂಸೆ ಕೊಟ್ಟು ಕೊಂದರು.

ಪತ್ರಕರ್ತನನ್ನು ಅಪಹರಿಸಿ ಚಿತ್ರಹಿಂಸೆ ಕೊಟ್ಟು ಕೊಂದರು.
ಕರಾಚಿ , ಸೋಮವಾರ, 31 ಮಾರ್ಚ್ 2014 (15:23 IST)
ಕಳೆದ ಐದು ತಿಂಗಳಿನಿಂದ ಕಣ್ಮರೆಯಾಗಿದ್ದ ಪಾಕಿಸ್ತಾನದ ಪತ್ರಕರ್ತ ಇಂದು ಹೆಣವಾಗಿ ಪತ್ತೆಯಾಗಿದ್ದಾನೆ. ಹಾಜಿ ಅಬ್ದುಲ್ ರಜಾಕ್ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾದ ಪತ್ರಕರ್ತ ಎಂದು ಪೋಲೀಸ್‌ ಮೂಲಗಳು ಅಧಿಕೃತವಾಗಿ ತಿಳಿಸಿವೆ.

ಕರಾಚಿಯ ಹೊರವಲಯದಲ್ಲಿ ರಜಾಕ್‌ ಮೃತದೇಹ ಪತ್ತೆಯಾಗಿದೆ. ದುಷ್ಕರ್ಮಿಗಳು ಪತ್ರಕರ್ತನನ್ನು ಅಪಹರಿಸಿ ಚಿತ್ರಹಿಂಸೆ ಕೊಟ್ಟು ಕೊಂದಿದ್ದಾರೆ ಎಂದು ಪೋಲೀಸರು ಹೇಳಿದ್ದಾರೆ. ಚಿತ್ರಹಿಂಸೆ ಕೊಟ್ಟಿರುವ ಗುರುತುಗಳು ಮೃತ ದೇಹದ ತುಂಬ ಎದ್ದು ಕಾಣುತ್ತಿವೆ ಎಂದು ಪೋಲೀಸರು ಹೇಳಿದ್ದಾರೆ.

ದುಷ್ಕರ್ಮಿಗಳು ಮುಖ ಮತ್ತು ದೇಹವನ್ನು ಗುರುತು ಸಿಗದಂತೆ ಜಜ್ಜಿ ಹಾಕಿದ್ದಾರೆ. ಅವರ ಕಾಲು ಮತ್ತು ಕೈಗಳ ಮೂಲಕ ಪತ್ತೆ ಮಾಡಿದ್ದೇವೆ" ಎಂದು ಮೃತ ಪತ್ರಕರ್ತನ ತಂಗಿ ಕಣ್ಣೀರಿಟ್ಟಿದ್ದಾಳೆ.

ರಜಾಕ್‌ ಪಾಕಿಸ್ತಾನದ ಉರ್ದು ಪತ್ರಿಕೆಯೊಂದರಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡ್ತಿದ್ದ. ದುಷ್ಕರ್ಮಿಗಳು ಮಾರ್ಚ್ ತಿಂಗಳಲ್ಲಿ ಈತನನ್ನು ಅಪಹರಿಸಿದ್ದರು. ಆದರೆ ಅಪಹೃತ ಪತ್ರಕರ್ತ ಇಂದು ಶವವಾಗಿ ಪತ್ತೆಯಾಗಿದ್ದಾನೆ.

Share this Story:

Follow Webdunia kannada