Select Your Language

Notifications

webdunia
webdunia
webdunia
webdunia

ನಾಪತ್ತೆಯಾದ ಮಲೇಷ್ಯಾ ವಿಮಾನವನ್ನು ತಾಲಿಬಾನ್‌ಗೆ ಒಯ್ಯಲಾಗಿದೆಯೇ?

ನಾಪತ್ತೆಯಾದ ಮಲೇಷ್ಯಾ ವಿಮಾನವನ್ನು ತಾಲಿಬಾನ್‌ಗೆ ಒಯ್ಯಲಾಗಿದೆಯೇ?
, ಮಂಗಳವಾರ, 18 ಮಾರ್ಚ್ 2014 (16:59 IST)
ಕೌಲಾಲಂಪುರ: ವಿಮಾನಯಾನ ಇತಿಹಾಸದಲ್ಲಿ ಅತ್ಯಂತ ಕಗ್ಗಂಟಿನ ನಿಗೂಢತೆ ಮುಂದುವರಿದಿದ್ದು, ನಾಪತ್ತೆಯಾದ ಮಲೇಷ್ಯಾ ವಿಮಾನದ ಶೋಧ 11ನೇ ದಿನಕ್ಕೆ ಕಾಲಿಟ್ಟಿದೆ. ಈಗ ಇಂಡಿಪೆಂಡೆಂಡ್ ಪತ್ರಿಕೆಯಲ್ಲಿ ವರದಿಯೊಂದು ಪ್ರಕಟವಾಗಿದ್ದು, ವಿಮಾನವನ್ನು ತಾಲಿಬಾನ್ ನಿಯಂತ್ರಣದ ಪ್ರದೇಶಕ್ಕೆ ಉದ್ದೇಶಪೂರ್ವಕವಾಗಿ ಒಯ್ಯಲಾಗಿದೆ ಎಂಬ ವರದಿ ತಲ್ಲಣಗೊಳಿಸಿದೆ.ವಿಮಾನವನ್ನು ರೆಡಾರ್ ಕಣ್ಣಿನಿಂದ ತಪ್ಪಿಸಲು 5000 ಅಡಿಗಿಂತ ಕೆಳಗೆ ಇಳಿಸಲಾಗಿದ್ದು, ಅನುಮಾನ ಬಾರದಂತೆ ವಾಣಿಜ್ಯ ಮಾರ್ಗಗಳಲ್ಲಿ ಹಾರಿಸಲಾಗಿದೆ. ವಿಮಾನವನ್ನು ಮೂರು ರಾಷ್ಟ್ರಗಳಲ್ಲಿ ಹಾರಿಸಿರಬಹುದು ಎಂದು ತನಿಖೆದಾರರ ಹೇಳಿಕೆಯನ್ನು ಉಲ್ಲೇಖಿಸಿ ಮಲೇಷ್ಯಾ ಪತ್ರಿಕೆ ತಿಳಿಸಿತ್ತು.ನಾಪತ್ತೆಯಾದ ಮಲೇಷ್ಯಾ ಏರ್‌ಲೈನ್ಸ್ ಜೆಟ್ ವಿಮಾನದ ಅಭೂತಪೂರ್ವ ಶೋಧ ವಾಯವ್ಯದ ಕಜಕಸ್ತಾನ ಮತ್ತು ದಕ್ಷಿಣಕ್ಕೆ ಹಿಂದು ಮಹಾಸಾಗರಕ್ಕೂ ಮುಟ್ಟಿದೆ.

PR
PR
ಆದರೆ ರಾಯ್ಟರ್ಸ್ ವರದಿಗಳ ಪ್ರಕಾರ, ಪಾಕಿಸ್ತಾನ, ಭಾರತ ಮಧ್ಯ ಏಷ್ಯಾ ಮತ್ತು ತಾಲಿಬಾನ್ ಭಯೋತ್ಪಾದಕರು ಮಲೇಷ್ಯಾ ವಿಮಾನದ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಹೇಳಿವೆ. ಮಲೇಷ್ಯಾ ಏರ್‌ಲೈನ್ಸ್ ವಿಮಾನ ಮಾರ್ಚ್ 8ರಂದು ಕೌಲಾಲಂಪುರದಿಂದ ಬೀಜಿಂಗ್‌ಗೆ ಹಾರಿದ ಒಂದು ಗಂಟೆಯಲ್ಲೇ ನಾಪತ್ತೆಯಾಗಿತ್ತು. ಈ ವಿಮಾನದಲ್ಲಿ 239 ಜನರಿದ್ದರು. ಈ ವಿಮಾನವನ್ನು ಮಾರ್ಗ ಬದಲಿಸಿ ಸಾವಿರಾರು ಮೈಲುಗಳು ದೂರ ಒಯ್ದಿರುವುದು ತನಿಖೆದಾರರಿಗೆ ಮನದಟ್ಟಾಗಿದೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada