Select Your Language

Notifications

webdunia
webdunia
webdunia
webdunia

ನಡುಗಿದ ಹೈದರಾಬಾದ್: 42 ಬಲಿ

ನಡುಗಿದ ಹೈದರಾಬಾದ್: 42 ಬಲಿ
ಹೈದರಾಬಾದ್ , ಭಾನುವಾರ, 26 ಆಗಸ್ಟ್ 2007 (13:04 IST)
PTI PhotographerPTI
ಮೂರು ತಿಂಗಳ ಅಂತರದಲ್ಲಿ ಹೈದರಾಬಾದ್ ನಡುಗಿದೆ. ಆತಂಕವಾದಿಗಳು ನಡೆಸಿದ ಎರಡು ಬಾಂಬ್ ಸ್ಫೋಟಗಳಿಗೆ 42 ಅಮಾಯಕರು ಸತ್ತು ಐವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆಂಧ್ರದ ರಾಜಧಾನಿಯ ಜನನಿಭಿಡ ಉದ್ಯಾನವನ ಮತ್ತು ಕೋಟಿ ಪ್ರದೇಶಗಳಲ್ಲಿ ಎಕಕಾಲಕ್ಕೆ ಸುಮಾರು ರಾತ್ರಿ ಎಂಟು ಗಂಟೆಗೆ ಬಾಂಬ್ ಸ್ಫೋಟಗೊಂಡಿವೆ.

ವಾರದ ಕೊನೆಯ ದಿನವಾಗಿದ್ದರಿಂದ ಕೋಟಿ ಪ್ರದೇಶದ ಗೋಕುಲ್ ಚಾಟ್ ಶಾಪ್ ಮತ್ತು ಸೆಕ್ರೆಟರಿಯೆಟ್ ಮತ್ತು ಹುಸೆನ್ ಸಾಗರ್ ಬಳಿ ಇರುವ ಲುಂಬಿನಿ ಉದ್ಯಾನವನದಲ್ಲಿ ನಡೆಯುತ್ತಿದ್ದ ಲೇಸರ್ ಪ್ರದರ್ಶನ ವಿಕ್ಷೀಸಲು ನೂರಾರು ಜನರು ಸೇರಿದ್ದರು. ಗೋಕುಲ್ ಚಾಟ್ ಬಳಿ ಸಂಭವಿಸಿದ ಸ್ಪೋಟಕ್ಕೆ 32 ಜನರು ಬಲಿಯಾಗಿ 21 ನಾಗರಿಕರು ಗಾಯಗೊಂಡರು.

ಅದೇ ರೀತಿ 500 ಜನರು ಕುಳಿತು ಲೇಸರ್ ಪ್ರದರ್ಶನವನ್ನು ನೋಡುತ್ತಿದ್ದ ಅಡಿಟೊರಿಯಂನಲ್ಲಿ ಉಂಟಾದ ಭಾರಿ ಸ್ಫೋಟ ಹತ್ತು ಜನರು ಅದರಲ್ಲಿ ಬಹುತೇಕ ಹೊರರಾಜ್ಯದವರು ಸಾವಿಗೀಡಾಗಿದ್ದು, ಹತ್ತು ಮಂದಿ ಗಾಯಗೋಂಡಿದ್ದಾದ್ದು, ಸತ್ತವರಲ್ಲಿ ಇಬ್ಬರು ಅಹ್ಮದಾಬಾದ್‌ ಮೂಲದ ಇಬ್ಬರು ವಿಧ್ಯಾರ್ಥಿ ಮತ್ತು ನಾಲ್ವರು ರೈಲ್ವೆಯಲ್ಲಿ ಕೆಲಸ ಮಾಡುತ್ತಿರುವವರು ಎಂದು ವರದಿಯಾಗಿದೆ.

ಗಾಯಗೊಂಡವರಲ್ಲಿ ಕೆಲವರ ಪರಿಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share this Story:

Follow Webdunia kannada