Select Your Language

Notifications

webdunia
webdunia
webdunia
webdunia

ನಂಬಿದ್ರೆ ನಂಬಿ,ಒಂದು ವರ್ಷದೊಳಗೆ ಪೋಪ್ ಮರ್ಡರ್ ಆಗ್ತದೆಯಂತೆ!

ನಂಬಿದ್ರೆ ನಂಬಿ,ಒಂದು ವರ್ಷದೊಳಗೆ ಪೋಪ್ ಮರ್ಡರ್ ಆಗ್ತದೆಯಂತೆ!
ವ್ಯಾಟಿಕನ್ ಸಿಟಿ , ಶನಿವಾರ, 11 ಫೆಬ್ರವರಿ 2012 (16:15 IST)
PR
ಪೋಪ್ ಬೆನೆಡಿಕ್ಟ್ XVI ಅವರು ಈ ವರ್ಷದೊಳಗೆ ಕೊಲೆಯಾಗುವ ಸಾಧ್ಯತೆ ಇದೆ...ಹೀಗಂತ ವ್ಯಾಟಿಕನ್ ನಗರದ ಹಿರಿಯ ವ್ಯಕ್ತಿಯೊಬ್ಬರು ತಿಳಿಸುವ ಮೂಲಕ ಆತಂಕ ಸೃಷ್ಟಿಸಿದ್ದಾರೆ.

ಪೋಪ್ ಹತ್ಯೆಯಾಗಲಿದ್ದಾರೆ ಎಂದು Il ಫಾಟ್ಟೂ ಖ್ವೋಟಿಡಿಯಾನೋ ಡೈಲಿ ಶುಕ್ರವಾರ ಪ್ರಕಟಿಸಿರುವ ದಾಖಲೆಯನ್ನು ವ್ಯಾಟಿಕನ್ ಸಾರಸಗಟಾಗಿ ತಳ್ಳಿಹಾಕಿದ್ದು, ಇದೊಂದು ವಿಕಲ್ಪವಾದ ಎಂದು ಕಿಡಿಕಾರಿದೆ.

ಡಿಸೆಂಬರ್ 30, 2011ರಂದು ಹತ್ಯೆಯಾಗಲಿದ್ದಾರೆಂಬ ಈ ಗೌಪ್ಯ ದಾಖಲೆಯನ್ನು ವ್ಯಾಟಿಕನ್‌ನಲ್ಲಿರುವ ನಿವೃತ್ತ ಕೊಲಂಬಿಯನ್ ಕಾರ್ಡಿನಲ್ ಡಾರಿಯೋ ಕಾಸ್ಟ್ರಿಲ್ಲಿಯನ್ ಹೋಯೊಸ್ ಅವರಿಗೆ ಕಳುಹಿಸಿದ್ದು, ಈ ವಿಷಯವನ್ನು ಇದೀಗ ಬಹಿರಂಗಪಡಿಸಿದ್ದಾರೆ.

ಈ ಬೆದರಿಕೆಯ ದಾಖಲೆ ಕುರಿತು ಹೋಯೊಸ್ ಅವರು ಜನವರಿ ತಿಂಗಳಿನಲ್ಲಿ ಪೋಪ್ ಜತೆ ಮಾತುಕತೆ ನಡೆಸಿರುವುದಾಗಿಯೂ ವರದಿ ವಿವರಿಸಿದೆ. ಪೋಪ್ ಅವರು ನವೆಂಬರ್ ತಿಂಗಳಲ್ಲಿ ಚೀನಾಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಹತ್ಯೆಗೈಯುವ ಸಂಚು ನಡೆಯಲಿದೆ ಎಂದು ಈ ದಾಖಲೆಯಲ್ಲಿ ಉಲ್ಲೇಖಿಸಿರುವುದಾಗಿ ಪಾಲೆರ್‌ಮೋದ ಅರ್ಚ್ ಬಿಷಪ್ ಪೌಲೋ ರೋಮೆಯೋ ಈ ವಿಷಯ ತಿಳಿಸಿದ್ದಾರೆ.

ಏತನ್ಮಧ್ಯೆ ಮುಂದಿನ 12 ತಿಂಗಳೊಳಗೆ ಪೋಪ್ ಅವರನ್ನು ಹತ್ಯೆಗೈಯುವ ಸಂಚಿನ ಕುರಿತು ರೋಮೆಯೋ ಹೆಚ್ಚಿನ ಮಾಹಿತಿ ನೀಡಿಲ್ಲ ಎಂದು ವರದಿ ಹೇಳಿದೆ.

Share this Story:

Follow Webdunia kannada