Select Your Language

Notifications

webdunia
webdunia
webdunia
webdunia

ತಾಲಿಬಾನ್ ಉಗ್ರರ ದಾಳಿ: ನೂರಾರು ಕೈದಿಗಳ ಜೈಲ್‌ಬ್ರೇಕ್

ತಾಲಿಬಾನ್ ಉಗ್ರರ ದಾಳಿ: ನೂರಾರು ಕೈದಿಗಳ ಜೈಲ್‌ಬ್ರೇಕ್
, ಮಂಗಳವಾರ, 30 ಜುಲೈ 2013 (18:38 IST)
PR
PR
ದೇರಾ ಇಸ್ಮೇಲ್ ಖಾನ್: ಗ್ರೆನೇಡ್‌ಗಳು ಮತ್ತು ರಾಕೆಟ್‌ಗಳಿಂದ ಸಜ್ಜಿತರಾದ ತಾಲಿಬಾನ್ ಉಗ್ರಗಾಮಿಗಳು ವಾಯವ್ಯ ಪಾಕಿಸ್ತಾನದ ದೇರಾ ಇಸ್ಮೇಲ್ ಖಾನ್ ನಗರದ ಪ್ರಮುಖ ಜೈಲೊಂದರ ಮೇಲೆ ದಾಳಿ ಮಾಡಿದ್ದು, ಉಗ್ರಗಾಮಿ ಸಂಘಟನೆಗಳಿಗೆ ಸೇರಿದ ನೂರಾರು ಕೈದಿಗಳನ್ನು ಬಂಧಮುಕ್ತಿಗೊಳಿಸಿದ್ದಾರೆ.

ಪೊಲೀಸರ ಸಮವಸ್ತ್ರ ಧರಿಸಿದ ಉಗ್ರಗಾಮಿಗಳು ಸರಣಿ ಸ್ಫೋಟಗಳನ್ನು ನಡೆಸುವ ಮೂಲಕ ಸೆಂಟ್ರಲ್ ಜೈಲ್ ಮೇಲೆ ದಾಳಿ ಮಾಡಿದರು. ಇದರಿಂದ ಜೈಲಿನ ಹೊರಗೋಡೆ ಕುಸಿಯಿತು. ನಂತರ ಉಗ್ರಗಾಮಿಗಳು ಜೈಲಿನ ಒಳಗೆ ಮೆಷಿನ್ ಗನ್ ಮತ್ತು ರಾಕೆಟ್‌ಗಳ ದಾಳಿ ನಡೆಸುತ್ತಾ ನುಗ್ಗಿದರು. ಪಾಕಿಸ್ತಾನದ ಸೇನೆ ದಾಳಿಯನ್ನು ಎದುರಿಸಿದಾಗ, ಉಗ್ರರು ಮತ್ತು ಪಾಕ್ ಪಡೆಗಳ ನಡುವೆ ತೀವ್ರ ಹೋರಾಟ ನಡೆಯಿತು.

ತಾವು ಸುಮಾರು 300 ಕೈದಿಗಳನ್ನು ಬಂಧಮುಕ್ತಿಗೊಳಿಸಿರುವುದಾಗಿ ತಾಲಿಬಾನ್ ವಕ್ತಾರ ಶಾಹಿದುಲ್ಲಾ ಶಾಹಿದ್ ತಿಳಿಸಿದ್ದಾನೆ. ಕೆಲವು ಆತ್ಮಾಹುತಿ ಬಾಂಬರ್‌ಗಳು ಜೈಲಿನ ಗೋಡೆಗಳನ್ನುಸ್ಫೋಟಿಸಿರುವುದಾಗಿ ಅವನು ತಿಳಿಸಿದ್ದಾನೆ.

Share this Story:

Follow Webdunia kannada