Select Your Language

Notifications

webdunia
webdunia
webdunia
webdunia

ಚೀನಾದಲ್ಲಿ ಹೆಚ್ಚಿತು ಅಜ್ಜ-ಅಜ್ಜಿಯರ ಸಂಖ್ಯೆ, ಒಂದು ಮಗು ನೀತಿ ಸಡಿಲ

ಚೀನಾದಲ್ಲಿ ಹೆಚ್ಚಿತು ಅಜ್ಜ-ಅಜ್ಜಿಯರ ಸಂಖ್ಯೆ, ಒಂದು ಮಗು ನೀತಿ ಸಡಿಲ
, ಶನಿವಾರ, 16 ನವೆಂಬರ್ 2013 (20:13 IST)
PR
PR
ಬೀಜಿಂಗ್: ಚೀನಾದಲ್ಲಿ ದಂಪತಿಗೆ ಒಂದು ಮಗುವಿನ ನಿರ್ಬಂಧ ವಿಧಿಸುವ ನೀತಿಗೆ ಸಡಿಲ ಮಾಡಲಾಗಿದೆ. ಮುಂದಿನ ಭವಿಷ್ಯದಲ್ಲಿ ಕುಟುಂಬಗಳಿಗೆ ಎರಡು ಮಕ್ಕಳಿಗೆ ಅವಕಾಶವಿದೆ. ಆದರೆ ಕುಟುಂಬದ ತಂದೆ, ತಾಯಿಗಳಲ್ಲಿ ಯಾರಾದರೂ ಒಬ್ಬರು ಒಂದೇ ಮಗುವಾಗಿ ಹುಟ್ಟಿರಬೇಕು. ಅದರ ಅರ್ಥವೇನೆಂದರೆ ತಂದೆ, ತಾಯಿಗಳಲ್ಲಿ ಯಾರಾದರೂ ಒಬ್ಬರು ಒಂದೇ ಮಗುವಿನ ನೀತಿಯಂತೆ ಹುಟ್ಟಿರಬೇಕು .ಕಮ್ಯುನಿಸ್ಟ್ ಪಕ್ಷದ ನಿರ್ಧಾರ ಕೈಗೊಳ್ಳುವ ಸಂಸ್ಥೆಯ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಮಂಡಿಸಲಾಯಿತು.

ಇತರ ಸುಧಾರಣೆಗಳಲ್ಲಿ ಆರ್ಥಿಕತೆಯಲ್ಲಿ ಖಾಸಗಿ ಕ್ಷೇತ್ರದ ಪಾತ್ರಕ್ಕೆ ಚೇತರಿಕೆ ನೀಡುವುದು ಸೇರಿದೆ. ಬೀಜಿಂಗ್‌ನಲ್ಲಿ ಕಮ್ಯುನಿಸ್ಟ್ ನಾಯಕತ್ವದ ಥರ್ಡ್ ಪ್ಲೆನಮ್ ಸಭೆಯ ಮೂರು ದಿನಗಳ ನಂತರ ಬಿಡುಗಡೆ ಮಾಡಿದ ದಾಖಲೆಯಲ್ಲಿ ಇದನ್ನು ಪ್ರಕಟಿಸಲಾಗಿದೆ. 1970ರ ದಶಕದಲ್ಲಿ ಚೀನಾ ವೇಗವಾಗಿ ಬೆಳೆಯುತ್ತಿದ್ದ ಜನಸಂಖ್ಯೆಯ ನಿಯಂತ್ರಣಕ್ಕೆ ಒಂದು ಮಗುವಿನ ನೀತಿಯನ್ನು ಜಾರಿಗೆ ತಂದ ನಂತರ ಭಾರೀ ಸಮಸ್ಯೆಗಳಿಗೆ ಸಿಕ್ಕಿಬಿದ್ದಿದೆ.

webdunia
PR
PR
ಇದು ಅತ್ಯಂತ ಅಪ್ರಿಯವಾದ ನೀತಿಯಾಗಿ ಪರಿವರ್ತನೆಯಾಗಿದ್ದು, ದೇಶದಲ್ಲಿ ವೃದ್ಧರ ಸಂಖ್ಯೆ ಏರುತ್ತಲೇ ಇದೆ. ಇದರಿಂದ ದುಡಿಯುವ ಶಕ್ತಿಯ ಸಂಖ್ಯೆ ಕಡಿಮೆಯಾಗಲಿದ್ದು, ವಯಸ್ಸಾದವರ ಆರೈಕೆ ವಿಷಯಗಳು ಉಲ್ಭಣಿಸಿವೆ.2050ರೊಳಗೆ ಜನಸಂಖ್ಯೆಯ ಶೇ. 65ರಷ್ಟು ಮಂದಿ 65ಕ್ಕಿಂತ ಹೆಚ್ಚಿನ ವಯಸ್ಸಾಗಿರುತ್ತಾರೆ. ಒಂದು ಮಗುವಿನ ನೀತಿಯನ್ನು ಚೀನಾದಲ್ಲಿ ಕೆಲವು ಜನಾಂಗೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿತ್ತು. ಕೆಲವು ನಗರಗಳಲ್ಲಿ, ಕುಟುಂಬವೊಂದು ಎರಡನೇ ಮಗು ಹೊಂದಲು ತಂದೆ, ತಾಯಿಗಳಿಬ್ಬರೂ ಒಂದು ಮಗು ನೀತಿಯಂತೆ ಜನಿಸಿರಬೇಕು.

ಗ್ರಾಮೀಣ ಪ್ರದೇಶಗಳಲ್ಲಿ ಮೊದಲ ಮಗು ಹೆಣ್ಣುಮಗುವಾಗಿದ್ದರೆ ಎರಡನೇ ಮಗು ಹೊಂದಲು ಅವಕಾಶವಿತ್ತು. ಈ ನಿಯಮಗಳನ್ನು ಉಲ್ಲಂಘಿಸುವ ದಂಪತಿಗೆ ಮಾತ್ರ ಭಾರೀ ದಂಡವನ್ನು ವಿಧಿಸಲಾಗುತ್ತಿತ್ತು. ಅವರು ಆಸ್ತಿಪಾಸ್ತಿಯನ್ನು ಕಳೆದುಕೊಳ್ಳಬೇಕಿತ್ತು ಮತ್ತು ಉದ್ಯೋಗದಿಂದಲೇ ತೆಗೆದುಹಾಕುತ್ತಿದ್ದರು.ಚೀನಾದ ಈ ಕಾನೂನಿನಿಂದಾಗಿ ಕೆಲವು ಮಹಿಳೆಯರನ್ನು ಬಲವಂತವಾಗಿ ಗರ್ಭಪಾತಕ್ಕೆ ಒಳಪಡಿಸಲಾಗುತ್ತಿತ್ತು. ಆದರೆ ಚೀನಾ ಮಾತ್ರ ಇದನ್ನು ನಿರಾಕರಿಸುತ್ತಿದೆ.

Share this Story:

Follow Webdunia kannada