Select Your Language

Notifications

webdunia
webdunia
webdunia
webdunia

ಖಿನ್ನತೆಯ ಪರಮಾವಧಿ; ತನ್ನ ಶಿಶ್ನವನ್ನೇ ಕತ್ತರಿಸಿಕೊಂಡ ಭೂಪ

ಖಿನ್ನತೆಯ ಪರಮಾವಧಿ; ತನ್ನ ಶಿಶ್ನವನ್ನೇ ಕತ್ತರಿಸಿಕೊಂಡ ಭೂಪ
ಬೀಜಿಂಗ್ , ಬುಧವಾರ, 30 ಅಕ್ಟೋಬರ್ 2013 (12:40 IST)
PTI
ಒಂಟಿತನ ಮನುಷ್ಯನನ್ನು ಎಂತಹ ದುಸ್ಥಿತಿಗೆ ತಳ್ಳುತ್ತದೆ ನೋಡಿ. ಚೀನಾದಲ್ಲೊಬ್ಬ ಒಂಟಿತನದಿಂದಾಗಿ ಖಿನ್ನತೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬ ಎಂತಹ ಎಡವಟ್ಟು ಮಾಡಿಕೊಂಡಿದ್ದಾನೆ ಗೊತ್ತಾ? ತನ್ನ ಗುಪ್ತಾಂಗಕ್ಕೆ ಕತ್ತರಿ ಹಾಕಿದ್ದಾನೆ.

ಸ್ವಲ್ಪ ಸಮಯದ ಬಳಿಕ ತನ್ನ ತಪ್ಪು ಅರಿವಾಗುತ್ತಿದ್ದಂತೆ ಸೈಕಲ್ ತುಳಿದುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದಾನೆ. ಹೀಗೆ ಹೋಗುವಾಗಲೂ ಆತ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದ. ಕತ್ತರಿಸಿದ ಅಂಗವನ್ನು ಆತ ಮನೆಯಲ್ಲೇ ಬಿಟ್ಟುಹೋಗಿದ್ದ.

ಈತನ ಸಮಸ್ಯೆಯನ್ನು ಅರಿತ ವೈದ್ಯರು ಗುಪ್ತಾಂಗ ಇಲ್ಲದೆ ಏನೂ ಮಾಡಲು ಸಾಧ್ಯ ಇಲ್ಲ ಎಂದು ಕೈಚೆಲ್ಲಿ ಬಿಟ್ಟರು. ನಂತರ ತಕ್ಷಣ ಮನೆಯ ಕಡೆಗೆ ಸೈಕಲ್ ಹೊಡೆದ ಈ ವ್ಯಕ್ತಿ ಗುಪ್ತಾಂಗವನ್ನು ಹುಡುಕಿ ವೈದ್ಯರ ಕೈಗೆ ತಂದಿಟ್ಟಿದ್ದಾನೆ.

ಆದರೆ, ಅಷ್ಟರಲ್ಲಾಗಲೇ ತೀರಾ ವಿಳಂಬವಾಗಿತ್ತು. ಗುಪ್ತಾಂಗ ಜೋಡಣೆಗೆ ಅಸಮರ್ಥವಾಗಿತ್ತು. ಈಗ ಯಾಂಗ್ ತನ್ನ ದುಡುಕಿನ ನಿರ್ಧಾರದ ಕುರಿತು ಹಣೆ ಚಚ್ಚಿಕೊಳ್ಳುತ್ತಿದ್ದಾನಂತೆ. ಮೊದಲು ಕೇವಲ ಒಂಟಿಯಷ್ಟೇ ಆಗಿದ್ದೆ. ಈಗ ಜೀವನವಿಡೀ ಒಂಟಿಯಾಗಿ ಕಳೆಯಬೇಕಲ್ಲಾ ಎಂದು ತನಗೆ ತಾನೇ ಹಿಡಿಶಾಪ ಹಾಕುತ್ತಿದ್ದಾನಂತೆ!

Share this Story:

Follow Webdunia kannada