Select Your Language

Notifications

webdunia
webdunia
webdunia
webdunia

ಕೋಮಾ ಸ್ಥಿತಿಯ ಯುವತಿಗೆ ವಿವಾಹದ ನಂತರ ಹೃದಯವಿದ್ರಾವಕ ವಿದಾಯ

ಕೋಮಾ ಸ್ಥಿತಿಯ ಯುವತಿಗೆ ವಿವಾಹದ ನಂತರ ಹೃದಯವಿದ್ರಾವಕ ವಿದಾಯ
, ಗುರುವಾರ, 26 ಸೆಪ್ಟಂಬರ್ 2013 (21:40 IST)
PR
PR
ಬೀಜಿಂಗ್: ಕೋಮಾ ಸ್ಥಿತಿಯಲ್ಲಿ ಎರಡು ವರ್ಷಗಳನ್ನು ಕಳೆದ ಚೀನಾದಲ್ಲಿ ಯುವತಿಯೊಬ್ಬಳಿಗೆ ಪ್ರೀತಿಸಿದ ಗೆಳೆಯನೊಂದಿಗೆ ವಿವಾಹಮಾಡಿದ ಕೆಲವೇ ಗಂಟೆಗಳಲ್ಲಿ ಅವಳ ಉಸಿರಾಟದ ಯಂತ್ರವನ್ನು ಸ್ವಿಚ್‌ಆಫ್ ಮಾಡುವ ಮೂಲಕ ವಿದಾಯ ಹೇಳಿದ ಹೃದಯವಿದ್ರಾವಕ ಘಟನೆ ನಡೆದಿದೆ. ಹೆ ಜಿಂಗ್‌ಜಿಂಗ್ ಮತ್ತು ಅವಳ ಪ್ರೇಮಿ ಲು ಲಾಯಿ 2011ರಲ್ಲಿ ಸ್ವರ್ಗವೇ ಮನೆಯ ಬಾಗಿಲಿಗೆ ಬಂದಷ್ಟು ಸಂತೋಷದ ಅಲೆಯಲ್ಲಿ ವಿಹರಿಸುತ್ತಿದ್ದರು. ಗಾಂಗ್ಜೋ ಸ್ಥಳೀಯ ಸರ್ಕಾರದಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಅವರು ಮನೆಯೊಂದನ್ನು ಕೂಡ ಖರೀದಿಸಿದ್ದರು ಮತ್ತು ವಿವಾಹವಾಗುವುದಕ್ಕೆ ಯೋಜಿಸಿದ್ದರು.

ಆದರೆ ದಾಂಪತ್ಯ ಜೀವನದ ಕನಸು ಕಂಡಿದ್ದ ಅವರ ಯೋಜನೆ ದುರಂತ ಅಂತ್ಯ ಕಂಡಿತು. ಜಿಂಗ್‌ಜಿಂಗ್ ಅವರಿಗೆ ಒಂದು ದಿನ ಯಾವುದೋ ಕಾಯಿಲೆ ಅಂಟಿಕೊಂಡು, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಕೋಮಾ ಸ್ಥಿತಿಗೆ ತಲುಪಿದರು ಮತ್ತು ನಂತರ ಮೇಲೇಳಲೇ ಇಲ್ಲ. ಎರಡು ವರ್ಷಗಳ ಹಿಂದೆ ಮೈಮೇಲೆ ಪ್ರಜ್ಞೆಯಿಲ್ಲದೇ ಕೋಮಾ ಸ್ಥಿತಿಯಲ್ಲೇ ಕಳೆದ ಯುವತಿಯ ಹಾಸಿಗೆಯ ಬಳಿ ಅವಳ ಕುಟುಂಬ ನೆರೆದು ಯುವತಿಯ 28ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದರು. ನಂತರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ದಂಪತಿಯ ವಿವಾಹವಾಗುವ ಕನಸನ್ನು ನನಸುಮಾಡಿದರು. ಸಾವಿನ ದವಡೆಯಲ್ಲಿದ್ದ ಯುವತಿಯ ಕೊನೆಯ ಆಸೆಯನ್ನು ಈಡೇರಿಸಿ ಉಸಿರಾಡುವ ಯಂತ್ರವನ್ನು ತೆಗೆದುಹಾಕುವ ಮೂಲಕ ಕಟ್ಟಕಡೆಯ ವಿದಾಯವನ್ನು ಹೇಳಿದರು. ಅವಳ ಅಂಗಾಂಗಳನ್ನು ಅಗತ್ಯವಿರುವ ಇತರ ಜನರಿಗೆ ದಾನ ಮಾಡುವುದಾಗಿ ಲು ಲಿ ಹೇಳಿದ್ದಾರೆ.

Share this Story:

Follow Webdunia kannada