Select Your Language

Notifications

webdunia
webdunia
webdunia
webdunia

ಕತಾರ್‌: ಅಮೆರಿಕ-ತಾಲಿಬಾನ್‌ ಮಾತುಕತೆ ವಿಫಲ

ಕತಾರ್‌: ಅಮೆರಿಕ-ತಾಲಿಬಾನ್‌ ಮಾತುಕತೆ ವಿಫಲ
ವಾಷಿಂಗ್ಟನ್‌ , ಸೋಮವಾರ, 30 ಜನವರಿ 2012 (15:00 IST)
ಗೌಂಟೆನಾಮೋದಲ್ಲಿ ಅಮೆರಿಕ ಬಂಧಿಸಿಟ್ಟಿರುವ ಐವರು ತಾಲಿಬಾನ್‌ ಉಗ್ರರನ್ನು ಬಿಡುಗಡೆ ಮಾಡುವ ಕುರಿತು ಅಮೆರಿಕ ಹಾಗೂ ತಾಲಿಬಾನ್‌ ಮುಖಂಡರ ನಡುವೆ ಕತಾರ್‍ನಲ್ಲಿ ಆರಂಭವಾಗಿರುವ ಪ್ರಾಥಮಿಕ ಹಂತದ ಮಾತುಕತೆ ವಿಫಲವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಫ್ಘಾನಿಸ್ತಾನದಲ್ಲಿ ಕದನ ವಿರಾಮ ಘೋಷಿಸುವಂತೆ ಅಮೆರಿಕ ಇಟ್ಟಿರುವ ಬೇಡಿಕೆಯನ್ನು ನಿರಾಕರಿಸಿದ ತಾಲಿಬಾನ್‌ ಮುಖಂಡರು ಬಂಧಿತರಾಗಿರುವ ತಮ್ಮ ಸಂಘಟನೆಯ ಐದು ಮಂದಿಯನ್ನು ಬಿಡುಗಡೆ ಮಾಡುವವರೆಗೂ ಕದನ ವಿರಾಮ ಘೋಷಿಸುವುದಿಲ್ಲ ಎಂದು ಹೇಳಿದ್ದಾಗಿ ಎಂಎಸ್ಎನ್‌ಬಿಸಿ ನ್ಯೂಸ್‌ ವರದಿ ಮಾಡಿದೆ.

ತಾಲಿಬಾನ್‌ ಜೊತೆ ನಡೆಯುತ್ತಿರುವ ಮಾತುಕತೆಯ ಬಗ್ಗೆ ಅಮೆರಿಕ ಯಾವುದೇ ಮಾಹಿತಿ ನೀಡಿಲ್ಲ.

ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನಕ್ಕೆ ಅಮೆರಿಕದ ವಿಶೇಷ ಪ್ರತಿನಿಧಿಯಾಗಿರುವ ಮಾರ್ಕ್‌ ಗ್ರಾಸ್‌ಮನ್‌ ಅವರು ಪ್ರಸ್ತುತ ಕತಾರ್‌ನಲ್ಲಿದ್ದು ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆಯಾದರೂ ಅಮೆರಿಕ ವಿದೇಶಾಂಗ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ.

Share this Story:

Follow Webdunia kannada