Select Your Language

Notifications

webdunia
webdunia
webdunia
webdunia

ಏತಿ ಒಂದು ಮಿಶ್ರತಳಿ : ಹಿಮಮಾನವನ ನಿಗೂಢತೆ ಬಯಲು

ಏತಿ ಒಂದು ಮಿಶ್ರತಳಿ : ಹಿಮಮಾನವನ ನಿಗೂಢತೆ ಬಯಲು
, ಮಂಗಳವಾರ, 22 ಅಕ್ಟೋಬರ್ 2013 (20:20 IST)
PR
PR
ಲಂಡನ್: ಹಿಮಾಲಯದಲ್ಲಿ ಅತ್ಯಂತ ಮಹತ್ತರ ನಿಗೂಢತೆಗಳಲ್ಲಿ ಒಂದಾದ ಹಿಮಮಾನವ ಏತಿಯನ್ನು ಕುರಿತ ಊಹಾಪೋಹಗಳಿಗೆ ಈಗ ತೆರೆಬಿದ್ದಿದೆ. ಹಿಮಮಾನವ ಯೇತಿ ವಾಸ್ತವವಾಗಿ ಅಸ್ತಿತ್ವದಲ್ಲಿದ್ದು, ಪ್ರಾಚೀನ ಕಾಲದ ಧ್ರುವಪ್ರದೇಶದ ಕರಡಿ ಮತ್ತು ಕಂದು ಕರಡಿಯ ನಡುವಿನ ಮಿಶ್ರ ತಳಿ ಎನ್ನುವುದು ವಂಶವಾಹಿ ಪರೀಕ್ಷೆಗಳಿಂದ ವಿಜ್ಞಾನಿಗಳು ಬಯಲು ಮಾಡಿದ್ದಾರೆ. ಯೇತಿಯ ಕೂದಲಿನ ಮಾದರಿಗಳು 120,000 ವರ್ಷಗಳ ಹಿಂದಿನ ಪ್ರಾಚೀನ ಧ್ರುವ ಕರಡಿಯ ವಂಶವಾಹಿಗೆ ಹೋಲಿಕೆಯಾಗುತ್ತವೆ ಎಂದು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಆಕ್ಸ್‌ಫರ್ಡ್ ವಿವಿಯಲ್ಲಿ ಹ್ಯೂಮನ್ ಜೆನೆಟಿಕ್ಸ್ ಪ್ರಾಧ್ಯಾಪಕ ಬ್ರಯಾನ್ ಸೈಕ್ಸ್ ಈ ಸಂಶೋಧನೆಯನ್ನು ಕೈಗೊಂಡಿದ್ದರು. ಬಿಗ್‌ಫೂಟ್ ಏತಿಯ ನಿಗೂಢತೆಗೆ ವೈಜ್ಞಾನಿಕ ಉತ್ತರ ನೀಡಲು ಡಾ. ಸೈಕ್ಸ್ ಅವರು ಅನೇಕ ವರ್ಷಗಳ ಕಾಲ ದೈಹಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಅದನ್ನು ಅತ್ಯಾಧುನಿಕ ಡಿಎನ್‌ಎ ಪರೀಕ್ಷೆಗಳಿಗೆ ಒಳಪಡಿಸಿದಾಗ ಈ ಹೋಲಿಕೆ ಪತ್ತೆಯಾಯಿತು. ಆದರೆ ಪ್ರಾಚೀನ ಧ್ರುವ ಕರಡಿಗಳು ಹಿಮಾಲಯಗಳಲ್ಲಿ ಈಗಲೂ ಅಲೆಯುತ್ತಿವೆಯೆಂದು ಅರ್ಥವಲ್ಲ. ಆದರೆ ಧ್ರುವ ಕರಡಿಯ ಪೂರ್ವಜರಿಂದ ಹುಟ್ಟಿದ ಕಂದು ಕರಡಿಗಳ ಉಪಪ್ರಬೇಧಗಳು ಹಿಮಾಲಯದಲ್ಲಿ ಅಲೆಯುತ್ತಿವೆ. ಅವೇ ಹಿಮಮಾನವ ಏತಿ ಎಂದು ಹೆಸರಾಗಿವೆ.
ಏತಿ ಮಿಶ್ರತಳಿ ಎಂದು ಪತ್ತೆ ಮಾಡಿದ್ದು ಹೇಗೆ- ನೋಡಿ ಮುಂದಿನ ಪುಟದಲ್ಲಿ

webdunia
PR
PR
ಶತಮಾನಗಳಿಂದ ಬೃಹತ್ ಗಾತ್ರದ, ಭಯಾನಕ ಯೇತಿಯನ್ನು ಹಿಮಾಲಯದ ಪರ್ವತಗಳಲ್ಲಿ ಕಂಡಿರುವ ಬಗ್ಗೆ ಸ್ಥಳೀಯ ಜನರು ನಾನಾ ಕಥೆಗಳನ್ನು ಹೇಳುತ್ತಿದ್ದರು. ಕೆಲವು ಪರ್ವಾತಾರೋಹಿಗಳು ಕೂಡ ದಟ್ಟ ಕೂದಲಿನ ಮಂಗನ ರೀತಿಯಲ್ಲಿರುವ ಜೀವಿಯನ್ನು ಕಂಡಿದ್ದಾಗಿ ಹೇಳಿದ್ದರು. ಹಿಮಾಲಯದ ಜಾನಪದಗಳಲ್ಲಿ ಕೂಡ ಏತಿಯ ಬಗ್ಗೆ ಕಥೆಗಳನ್ನು ಕಟ್ಟಿ ವರ್ಣಿಸಿದ್ದರು. ಪ್ರೊಫೆಸರ್ ಸೈಕ್ಸ್ ಲಡಕ್‌ನಲ್ಲಿ ಕಂಡುಬಂದ ಏತಿಯ ಕೂದಲಿನ ಮಾದರಿ ಮತ್ತು ಭೂತಾನ್‌ನಲ್ಲಿ ಪತ್ತೆಯಾದ ಏತಿಯ ಕೂದಲಿನ ಮಾದರಿಯನ್ನು ಸಂಗ್ರಹಿಸಿದ್ದರು. ಜೀನ್‌ಬ್ಯಾಂಕ್ ದತ್ತಾಂಶದಲ್ಲಿ ಸಂಗ್ರಹಿಸಿದ್ದ ಇತರ ಪ್ರಾಣಿಗಳ ಜಿನೋಮ್‌ಗಳನ್ನು ಈ ಏತಿಗಳ ಕೂದಲುಗಳ ಡಿಎನ್‌ಎ ಜತೆ ಹೋಲಿಕೆ ಮಾಡಿದರು. ಆಗ ಒಂದು ಅಚ್ಚರಿಯ ಸಂಗತಿ ಬಯಲಾಯಿತು. ನಾರ್ವೆಯಲ್ಲಿ ಪತ್ತೆಯಾದ ಪ್ರಾಚೀನ ಧ್ರುವ ಕರಡಿಯ ದವಡೆಯ ಮಾದರಿ ಏತಿಗಳ ಕೂದಲಿನ ಡಿಎನ್‌ಎ ಜತೆ ಶೇ. 100ರಷ್ಟು ಹೊಂದಾಣಿಕೆಯಾಯಿತು.

ಪ್ರಾಚೀನ ಧ್ರುವ ಕರಡಿಯ ದವಡೆ ಸುಮಾರು 40,000 ವರ್ಷಗಳಷ್ಟು ಹಿಂದಿನ ಕಾಲದ್ದು-ಬಹುಶಃ 120,000 ವರ್ಷಗಳಷ್ಟು ಹಿಂದಿನದ್ದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಫಲಿತಾಂಶದಿಂದ ವಾಸ್ತವವಾಗಿ ಯೇತಿ ಧ್ರುವ ಕರಡಿಗಳು ಮತ್ತು ಕಂದುಕರಡಿಗಳ ನಡುವಿನ ಮಿಶ್ರತಳಿ ಎಂದು ಪ್ರಾಧ್ಯಾಪಕ ಸೈಕ್ಸ್ ನಂಬಿದ್ದಾರೆ.

Share this Story:

Follow Webdunia kannada