Select Your Language

Notifications

webdunia
webdunia
webdunia
webdunia

ಎಚ್‌1ಎನ್‌1 ರೋಗಕ್ಕೆ ವಿಶ್ವಾದ್ಯಂತ 5712 ಬಲಿ

ಎಚ್‌1ಎನ್‌1 ರೋಗಕ್ಕೆ ವಿಶ್ವಾದ್ಯಂತ 5712 ಬಲಿ
ಜಿನೀವಾ , ಶನಿವಾರ, 31 ಅಕ್ಟೋಬರ್ 2009 (11:47 IST)
ಈ ವಾರ ಎಚ್‌1ಎನ್‌1‌ ರೋಗಕ್ಕೆ 700ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರ ಸಂಖ್ಯೆ ವಿಶ್ವಾದ್ಯಂತ 5712ಕ್ಕೆ ಮುಟ್ಟಿದೆಯೆಂದು ವಿಶ್ವಸಂಸ್ಥೆ ಆರೋಗ್ಯ ಏಜೆನ್ಸಿಯನ್ನು ಉಲ್ಲೇಖಿಸಿ ಕ್ಸಿನುವಾ ವರದಿ ಮಾಡಿದೆ.

ಇವೆಲ್ಲ ಸಾವುಗಳಲ್ಲಿ 4175 ಅಮೆರಿಕದಲ್ಲಿ ಸಂಭವಿಸಿದೆ. ಆಗ್ನೇಯ ಏಷ್ಯಾದಲ್ಲಿ 605 ಸಾವುಗಳು, ಪಶ್ಚಿಮ ಪೆಸಿಫಿಕ್‌ನಲ್ಲಿ 455 ಸಾವುಗಳು ಸಂಭವಿಸಿವೆ. ಯುರೋಪ್, ಪೂರ್ವ ಮೆಡಿಟರೇನಿಯನ್ ಮತ್ತು ಆಫ್ರಿಕಾದಲ್ಲಿ ಕ್ರಮವಾಗಿ 281, 111 ಮತ್ತು 75 ಸಾವುಗಳು ಸಂಭವಿಸಿದೆಯೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಹಂದಿ ಜ್ವರವನ್ನು ಮಹಾಮಾರಿ ಎಂದು ಡಬ್ಲ್ಯುಎಚ್‌ಒ ಘೋಷಿಸಿದ್ದು, ಪ್ರಯೋಗಾಲಯದಲ್ಲಿ ದೃಢಪಟ್ಟ ಹಂದಿಜ್ವರದ ಪ್ರಕರಣಗಳು ಒಟ್ಟು 441,661ಕ್ಕೂ ಹೆಚ್ಚು. ಆದರೆ ವಾಸ್ತವಿಕ ಸಂಖ್ಯೆಗಿಂತ ಗಮನಾರ್ಹವಾಗಿ ಕಡಿಮೆಯಾಗಿದ್ದು, ಅನೇಕ ರಾಷ್ಟ್ರಗಳು ಹಂದಿ ಜ್ವರ ಪರೀಕ್ಷೆ ಮತ್ತು ವೈಯಕ್ತಿಕ ಪ್ರಕರಣಗಳ ವರದಿಯನ್ನು ನಿಲ್ಲಿಸಿವೆ.

Share this Story:

Follow Webdunia kannada