Webdunia - Bharat's app for daily news and videos

Install App

ಇಟಲಿಯಲ್ಲಿ ಪ್ರವಾಸಿ ಬಸ್ ಕಮರಿಗೆ ಉರುಳಿ 37 ಜನರ ಸಾವು

Webdunia
ಸೋಮವಾರ, 29 ಜುಲೈ 2013 (14:37 IST)
PTI
PTI
ರೋಮ್: ಪ್ರವಾಸದಿಂದ ಹಿಂತಿರುಗುತ್ತಿದ್ದ ಇಟಲಿ ಪ್ರಜೆಗಳನ್ನು ತುಂಬಿದ್ದ ಪ್ರವಾಸಿ ಬಸ್ ಹೆದ್ದಾರಿಯಿಂದ ಕಮರಿಗೆ ಉರುಳಿ 37 ಜನರು ಮೃತಪಟ್ಟ ಘಟನೆ ಇಟಲಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ಭಾರೀ ವಾಹನದಟ್ಟಣೆಯಿಂದ ವೇಗ ತಗ್ಗಿಸಿದ್ದರಿಂದ ಅನೇಕ ಕಾರುಗಳಿಗೆ ಡಿಕ್ಕಿ ಹೊಡೆದ ಬಸ್ ಕಮರಿಗೆ ಬಿದ್ದಿತು. ನೇಪಲ್ಸ್ ಹೊರಗೆ ಅವೆಲಿನೋ ಬಳಿ ಸಂಕೇತಗಳನ್ನು ತೋರಿಸಿ, ವಾಹನಗಳು ನಿಧಾನಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು ಎಂದು ಹೆದ್ದಾರಿ ಪೊಲೀಸರು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ. ಬಸ್ ಚಾಲಕ ತನ್ನ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಕಮರಿಗೆ ಬಿದ್ದಿರಬಹುದು ಎಂದು ಅವರು ಶಂಕಿಸಿದ್ದಾರೆ.

ಅಪಘಾತವಾಗಿ ಗಂಟೆಗಳ ನಂತರ, 37 ದೇಹಗಳನ್ನು ಹೊರತೆಗೆದಿರುವುದಾಗಿ ಅಗ್ನಿಶಾಮಕ ಸಿಬ್ಬಂದಿ ಹೇಳಿದ್ದಾರೆ. ಮೃತರಲ್ಲಿ ಬಹುತೇಕ ಜನರು ನಜ್ಜುಗುಜ್ಜಾದ ಬಸ್ಸಿನ ಪಕ್ಕದಲ್ಲಿ ಬಿದ್ದಿದ್ದರು. ಕೆಲವು ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿತ್ತು ಎಂದು ಇಟಲಿ ಸುದ್ದಿಸಂಸ್ಥೆ ಆನ್ಸಾ ವರದಿ ಮಾಡಿದೆ. 11 ಜನ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments