Webdunia - Bharat's app for daily news and videos

Install App

ಆ ಪುಸ್ತಕದ ಬೆಲೆ 87 ಕೋಟಿ ರೂಪಾಯಿ..! ಅಂಥದ್ದೇನಿದೆ ಆ ಪುಸ್ತಕದಲ್ಲಿ?

Webdunia
ಗುರುವಾರ, 28 ನವೆಂಬರ್ 2013 (18:09 IST)
PR
PR
ವಿಶೇಷ ವರದಿ : ಶೇಖರ್‌ ಪೂಜಾರಿ

ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ಪುಸ್ತಕ ನೆನ್ನೆ ಹರಾಜಾಗಿದೆ. ನೆನ್ನೆ ಮಾರಾಟವಾದ ಪುಸ್ತಕದ ಬೆಲೆ ಬರೋಬ್ಬರಿ 87 ಕೋಟಿ ರೂಪಾಯಿಗಳು ಅಂದ್ರೆ ನೀವು ನಂಬಲೇ ಬೇಕು. ಅಬ್ಬಬ್ಬಾ.. ಅದೇನ್ರಿ ಇಷ್ಟೋಂದು ದುಬಾರಿ ಪುಸ್ತಕಾನಾ ಇದು? ಅಂತ ನೀವು ಅಚ್ಚರಿ ಪಡಬಹುದು.. ಆದ್ರೆ ಇದು ಅಚ್ಚರಿಯಾದ್ರೂ ಸತ್ಯ.. ಈ ಪುಸ್ತಕದ ಬೆಲೆ ಬರೋಬ್ಬರಿ 87 ಕೋಟಿ ರೂಪಾಯಿ..

ಕ್ರಿ. ಶ 1640 ರಲ್ಲಿ ಮೆಸೆಚುಸೆಟ್ಸ್ ರಾಜ್ಯದ ಕೆಂಬ್ರಿಡ್ಜ್‌ ನಲ್ಲಿ ಪುರಿಟನ್‌ ಸೆಟ್ಲರ್‌ ಮುದ್ರಿಸಿದ ಬಿಬ್ಲಿಕಲ್‌ ಕೀರ್ತನೆಗಳನ್ನು ಹೊಂದಿರುವ "ದಿ ಬೇ ಪ್ಸಾಲ್ಮ್‌ ಬುಕ್‌" ಇಷ್ಟೋಂದು ದುಬಾರಿ ಬೆಲೆಗೆ ಮಾರಾಟವಾಗುವುದರ ಮೂಲಕ ಜಗತ್ತಿನ ಅತ್ಯಂತ ದುಬಾರಿ ಪುಸ್ತಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜಗತ್ತಿನ ಮೊದಲ ಮುದ್ರಣ ಪುಸ್ತಕ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಪುಸ್ತಕ ನೆನ್ನೆ ಅಮೇರಿಕಾದಲ್ಲಿ ಹರಾಜಿಗೆ ಇಡಲಾಯಿತು. ಆರಂಭದಲ್ಲಿ 6 ಮಿಲಿಯನ್‌ ಡಾಲರ್‌ ಅಂದ್ರೆ 37 ಕೋಟಿ ರೂಪಾಯಿಗಳಿಗೆ ಹರಾಜು ಪ್ರಕ್ರಿಯೆ ಆರಂಭವಾಯ್ತು. ಕೆಲವೇ ನಿಮಿಷಗಳಲ್ಲಿ ಅದು ಹೆಚ್ಚುತ್ತಲೇ ಹೋಯ್ತು.

ಅಂತಿಮವಾಗಿ 87 ಕೋಟಿ ರೂಪಾಯಿಗಳಿಗೆ ಈ ಪುಸ್ತಕ ಹರಾಜಾಯ್ತು.. ಆದ್ರೆ ಹರಾಜು ಪ್ರಕ್ರಿಯೆ ಅಂತಿಮವಾದ ನಂತರ ಇನ್ನೊಂದು ವಿಷಯ ಗೊತ್ತಾಯ್ತು. ಅದೇನಪ್ಪಾ ಅಂದ್ರೆ ಅದೇ ಪುಸ್ತಕವನ್ನು ಮತ್ತೊಬ್ಬ ವ್ಯಕ್ತಿ 93 ಕೋಟಿಯಿಂದ 186 ಕೋಟಿ ರೂಪಾಯಿಗಳವರೆಗೆ ಖರೀದಿಸುವ ಮನಸ್ಸನ್ನು ಹೊಂದಿದ್ದನಂತೆ..! ಆದ್ರೆ ಹರಾಜು ಕೂಗುವ ಸಮಯದಲ್ಲಿ ಸ್ವಲ್ಪ ತಡವಾದ ನಂತರ, 87 ಕೋಟಿ ರೂಪಾಯಿ ಕೂಗಿದ ವ್ಯಕ್ತಿಗೆ ಅಂತಿಮವಾಗಿ ಈ ಅಮೂಲ್ಯ ಪುಸ್ತಕ ದಕ್ಕಿದೆ..!

ಈ ಹಿಂದೆ 71 ಕೋಟಿ ರೂಪಾಯಿಗಳಿಗೆ ಪುಸ್ತಕವೊಂದು ಮಾರಾಟವಾಗಿತ್ತು..! ಇನ್ನಷ್ಟು ಅಚ್ಚರಿಯ ಸುದ್ದಿ ಮುಂದಿನ ಪುಟದಲ್ಲಿ....

PTI
PTI
ಈ ಹಿಂದೆ 71 ಕೋಟಿ ರೂಪಾಯಿಗಳಿಗೆ ಪುಸ್ತಕವೊಂದು ಮಾರಾಟವಾಗಿತ್ತು..!

2010 ರ ಡಿಸೆಂಬರ‍್ ತಿಂಗಳಲ್ಲಿ ಜಾನ್ ಜೇಮ್ಸ್‌ ಎಂಬ ವ್ಯಕ್ತಿಯ "ಬರ್ಡ್ಸ್ ಆಫ್‌ ಅಮೇರಿಕಾ" ಎಂಬ ಪುಸ್ತಕವು ದಾಖಲೆಯ ಮೊತ್ತಕ್ಕೆ ಹರಾಜಾಗಿತ್ತು. ಬರೋಬ್ಬರಿ 71 ಕೋಟಿ ರೂಪಾಯಿಗೆ ಮಾರಾಟವಾಗುವುದರ ಮೂಲಕ ಜಗತ್ತಿನ ಅತಿ ದುಬಾರಿ ಮೊತ್ತಕ್ಕೆ ಮಾರಾಟವಾದ ಪುಸ್ತಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದ್ರೆ ಈ ದಾಖಲೆಯನ್ನು ಮುರಿದು ಹಾಕಿದೆ ಈ "ದಿ ಬೇ ಪ್ಸಾಲ್ಮ್‌ ಬುಕ್‌" ಪುಸ್ತಕ.

" ದಿ ಬೇ ಪ್ಸಾಲ್ಮ್‌ ಬುಕ್" ಕೃತಿಯು ಅತ್ಯಂತ ಅಪರೂಪದ ಪೌರಾಣಿಕ ಪುಸ್ತಕವಾಗಿದ್ದು, ಅತ್ಯಂತ ಹಳೆಯ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇಂತಹ ಪುಸ್ತಕ ಇಡೀ ಜಗತ್ತಿನಲ್ಲಿ ಎಲ್ಲಿ ಹುಡುಕಿದರೂ ಸಿಗುವುದಿಲ್ಲ. ಇಷ್ಟೋಂದು ಅಪರೂಪದ ಪುಸ್ತಕಕ್ಕೆ ಎಷ್ಟು ಬೆಲೆ ಕೊಟ್ಟರೂ ಕಡಿಮೆಯೇ ಎಂದು ಈ ಹರಾಜು ಪ್ರಕ್ರಿಯೆಯನ್ನು ಏರ್ಪಡಿಸಿದ್ದ ಅಧಿಕಾರಿಗಳು ಹೇಳುತ್ತಾರೆ.

ಈ ಕಿರಿದಾದ ಪುಸ್ತಕವು 1640 ರಲ್ಲಿ ಮುದ್ರಣಗೊಂಡ ಪುಸ್ತಕವಾಗಿದೆ. ಅಮೇರಿಕಾ ಸ್ವಾತಂತ್ರ‍್ಯದ ಹೋರಾಟದ ಪ್ರಮುಖ ರಾಜಕೀಯ ಅಂಶಗಳನ್ನು ಈ ಪುಸ್ತಕ ಒಳಗೊಂಡಿದೆ. ಅಷ್ಟೇ ಅಲ್ಲ, ಇಂಗ್ಲೆಂಡಿನ ಚರ್ಚ್‌ನಲ್ಲಿ ಇಂಗ್ಲೆಂಡಿನ ಸ್ವಾತಂತ್ರ‍್ಯವನ್ನು ಅಧಿಕೃತವಾಗಿ ಘೋಷಿಸಲಾಯಿತು ಅಂತ ಈ ಪುಸ್ತಕ ಹೇಳುತ್ತೆ. ಇಂತಹ ಹಲವಾರು ಅಚ್ಚರಿಯ ಅಂಶಗಳು ದಿ ಬೇ ಪ್ಸಾಲ್ಮ್ ಬುಕ್" ಪುಸ್ತಕ ಒಳಗೊಂಡಿದೆ.

ಶೇಕ್ಸ್‌ಪಿಯರ್‌ ಪುಸ್ತಕ ಕೂಡ ಇಷ್ಟೋಂದು ಮೊತ್ತಕ್ಕೆ ಮಾರಾಟವಾಗಿಲ್ಲ...! ಇನ್ನಷ್ಟು ಮಾಹಿತಿ ಮುಂದಿನ ಪುಟದಲ್ಲಿ...

PR
PR
1640 ರಲ್ಲಿ ಮುದ್ರಿತಗೊಂಡಿರುವ ಈ ಪುಸ್ತಕದ ಸುಮಾರು 1,700 ಪ್ರತಿಗಳು ಮುದ್ರಣಗೊಂಡಿವೆ. ಆದ್ರೆ ಈ ಮೂಲ ಪುಸ್ತಕಕ್ಕೆ ಇರುವ ಬೆಡಿಕೆ ಮಾತ್ರ ಅತ್ಯಮೂಲ್ಯವಾಗಿದೆ. ನೀವು ನಂಬ್ತೀರೋ ಬಿಡ್ತೀರೋ ಇಲ್ವೋ ಗೊತ್ತಿಲ್ಲ. 1947 ರ ಹಿಂದಿನ ಇತಿಹಾಸವನ್ನು ಕೆದಕಿದರೆ, ಒಂದು ಪುಸ್ತಕದ ಗರಿಷ್ಟ ಮಾರಾಟದ ಬೆಲೆ 93 ಲಕ್ಷ ರೂಪಾಯಿಗಳಾಗಿತ್ತು. ಇದಾದ ನಂತರ ಯಾವುದೇ ಪುಸ್ತಕ ಇದಕ್ಕಿಂತ ಹೆಚ್ಚು ಮೊತ್ತಕ್ಕೆ ಮಾರಾಟವಾಗಲೇ ಇಲ್ಲ. ಗುಟನ್‌ ಬರ್ಗ್ ಬೈಬಲ್‌ ಆಗಲೀ ಅಥವ ಶೇಕ್ಸ್‌ಪಿಯರ್‌ ಪುಸ್ತಕವಾಗಲೀ ಇಷ್ಟೋಂದು ದಾಖಲೆಯ ಮೊತ್ತಕ್ಕೆ ಮಾರಾಟವಾದ ನಿರ್ದಶನವೇ ಇಲ್ಲ.

ಆದ್ರೆ "ದಿ ಬೇ ಪ್ಸಾಲ್ಮ್‌ ಬುಕ್" ಈ ಎಲ್ಲಾ ದಾಖಲೆಯನ್ನು ಮುರಿದಿದೆ. ಸದ್ಯಕ್ಕೆ ಈ ಮೂಲ್ಯ ಪುಸ್ತಕವನ್ನು ಬೋಸ್ಟನ್‌ ಪ್ರದೇಶದ ದಕ್ಷಿಣ ವಿಭಾಗದ ಪ್ರಾಚೀನ ಚರ್ಚ್ ಖರೀದಿ ಮಾಡಿದೆ. ಅತ್ಯಮೂಲ್ಯ ಪ್ರಾಚೀನ ಮತ್ತು ಐತಿಹಾಸಿಕ ಮಹತ್ವವುಳ್ಳ ಪೌರಾಣಿಕ ಪುಸ್ತಕವನ್ನು ಕಾಪಾಡುತ್ತ ಬಂದಿರುವ ಈ ಚರ್ಚ್‌ ಇನ್ನಷ್ಟು ಐತಿಹಾಸಿಕ ಸಂಶೋಧನೆ ಮಾಡಲು ಈ " ದಿ ಬೇ ಪ್ಸಾಲ್ಮ್‌ ಬುಕ್‌" ಪುಸ್ತಕವನ್ನು ಖರೀದಿಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments