Select Your Language

Notifications

webdunia
webdunia
webdunia
webdunia

ಅಮೆರಿಕ: ಹೆಡ್ಲಿ ವಿಚಾರಣಾ ವೀಡಿಯೋ ಬಳಕೆಗೆ ಕೋರ್ಟ್ ಅನುಮತಿ

ಅಮೆರಿಕ: ಹೆಡ್ಲಿ ವಿಚಾರಣಾ ವೀಡಿಯೋ ಬಳಕೆಗೆ ಕೋರ್ಟ್ ಅನುಮತಿ
ಶಿಕಾಗೋ , ಶುಕ್ರವಾರ, 21 ಅಕ್ಟೋಬರ್ 2011 (08:58 IST)
ಮುಂಬೈ ಮೇಲೆ ನಡೆದ 26/11ಭಯೋತ್ಪಾದಕ ದಾಳಿಯ ಸಂಚು ರೂಪಿಸಿದ್ದ ಹಿನ್ನೆಲೆಯಲ್ಲಿ ಬಂಧಿತನಾಗಿ ಶಿಕಾಗೋ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿದ್ದ ಪಾಕ್‌ ಮೂಲದ ಅಮೆರಿಕನ್‌ ಉಗ್ರ ಡೇವಿಡ್‌ ಕೋಲ್ಮನ್‌ ಹೆಡ್ಲಿಯ ವಿಚಾರಣಾ ವೀಡಿಯೋವನ್ನು ಮಾಧ್ಯಮಗಳು ಬಳಸಲು ಶಿಕಾಗೋ ನ್ಯಾಯಾಲಯವು ಅನುಮತಿ ನೀಡಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಡೇವಿಡ್‌ ಕೋಲ್ಮನ್‌ ಹೆಡ್ಲಿಯೊಂದಿಗೆ ವಿಚಾರಣೆ ಎದುರಿಸಿದ್ದ ಸಹ ಆರೋಪಿ ಹಾಗೂ ಆತನ ಬಾಲ್ಯದ ಸ್ನೇಹಿತ ತಹಾವುರ್‌ ಹುಸೇನ್‌ ರಾಣಾ ಅವರ ವಿಚಾರಣೆಯ ಕೆಲವು ಭಾಗಗಳನ್ನು ಮಾತ್ರ ಬಳಸಲು ಅನುಮತಿ ನೀಡಿರುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.

ಡೇವಿಡ್‌ ಕೋಲ್ಮನ್‌ ಹೆಡ್ಲಿಯ ವಿಚಾರಣೆ ಟೇಪುಗಳನ್ನು ಎಫ್‌ಬಿಐ ಒದಗಿಸಬೇಕು ಎಂದು ಅಮೆರಿಕದ ಮಾಧ್ಯಮಗಳು ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಆದೇಶ ನೀಡಿದೆ.

ಅಮೆರಿಕ ಮಾಧ್ಯಮಗಳು ಸಲ್ಲಿಸಿರುವ ಅರ್ಜಿಗೆ ರಾಣಾ ಪರ ವಕೀಲರು ಯಾವುದೇ ರೀತಿಯ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಈ ಪ್ರಕರಣದಲ್ಲಿ ಹೆಡ್ಲಿ ಮುಖ್ಯ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ.

ಕುಖ್ಯಾತ ಉಗ್ರಗಾಮಿ ಸಂಘಟನೆ ಲಷ್ಕರ್‌ ಎ ತೊಯ್ಬಾ ಉಗ್ರ ಮುಂಬೈನಲ್ಲಿ 2008ರಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಸಂಚು ರೂಪಿಸಿದ್ದ ಆರೋಪ ಎದುರಿಸುತ್ತಿದ್ದ. ಮುಂಬೈ ಮೇಲೆ ಉಗ್ರರು ನಡೆಸಿದ 26/11ರ ದಾಳಿಯಲ್ಲಿ 166 ಜನರು ಮೃತಪಟ್ಟಿದ್ದರು.

ತನಗೆ ಮರಣ ದಂಡನೆ ನೀಡಬಾರದು ಹಾಗೂ ತನ್ನನ್ನು ಭಾರತದ ವಶಕ್ಕೆ ನೀಡಬಾರದು ಎಂಬ ಶರತ್ತಿನ ಮೇರೆಗೆ ಹೆಡ್ಲಿ ತಪ್ಪೊಪ್ಪಿಕೊಂಡಿದ್ದ.

Share this Story:

Follow Webdunia kannada