Select Your Language

Notifications

webdunia
webdunia
webdunia
webdunia

ಅಮೆರಿಕದಲ್ಲಿ ಅನಿಲ ಘಟಕ ಸ್ಫೋಟ: ಮುಗಿಲೆತ್ತರಕ್ಕೆ ಜ್ವಾಲೆ

ಅಮೆರಿಕದಲ್ಲಿ ಅನಿಲ ಘಟಕ ಸ್ಫೋಟ: ಮುಗಿಲೆತ್ತರಕ್ಕೆ ಜ್ವಾಲೆ
, ಮಂಗಳವಾರ, 30 ಜುಲೈ 2013 (11:32 IST)
PR
PR
ವಾಷಿಂಗ್ಟನ್: ಅಮೆರಿಕಾದ ಪ್ಲೋರಿಡಾದ ಅನಿಲ ಘಟಕದಲ್ಲಿ ಅನಿಲ ಸ್ಫೋಟದಿಂದ ಭಾರಿ ಅವಗಢ ಸೋಮವಾರ ರಾತ್ರಿ ಸಂಭವಿಸಿದೆ. 30 ಅಡಿ ಎತ್ತರದ ಪ್ರೊಪೇನ್ ಗ್ಯಾಸ್ ಪ್ಲಾಂಟ್ ಸ್ಫೋಟಗೊಂಡು ಈ ಅನಾಹುತ ಸಂಭವಿಸಿದೆ. ಇಡೀ ಘಟಕವೇ ಹೊತ್ತಿಉರಿಯುತ್ತಿದ್ದು ಮುಗಿಲೆತ್ತರಕ್ಕೆ ಬೆಂಕಿ ಜ್ವಾಲೆ ಆವರಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಮಾಡುತ್ತಿದೆ. ಬೆಂಕಿ ಅನಾಹುತ ಸಂಭವಿಸಿದ್ದು ಹೇಗೆಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಅಮೆರಿಕಾದ ಟವಾರೆಸ್ ಪಟ್ಟಣದಲ್ಲಿ ಬ್ಲೂ ರೈನೊ ಕಂಪೆನಿಯಲ್ಲಿ ಸ್ಫೋಟಗಳ ಸರಣಿ ಸಂಭವಿಸಿದವು. ಘಟಕದಲ್ಲಿ 24 ಜನರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಗಾಯಗೊಂಡವರ ಸಂಖ್ಯೆ ತಕ್ಷಣವೇ ತಿಳಿದುಬಂದಿಲ್ಲ. ದೃಶ್ಯದ ವಿಡಿಯೋ ಚಿತ್ರಗಳಲ್ಲಿ ದೊಡ್ಡ ಬೆಂಕಿ ಜ್ವಾಲೆಗಳು ಮತ್ತು ಹೊಗೆ ರಾತ್ರಿ ಆಗಸದಲ್ಲಿ ಮುಗಿಲೆತ್ತರಕ್ಕೆ ಚಾಚಿರುವುದು ಕಂಡುಬಂತು. ಘಟಕಕ್ಕೆ ಒಂದು ಕಿ.ಮೀ ವ್ಯಾಪ್ತಿಯಲ್ಲಿರುವ ನಿವಾಸಿಗಳನ್ನು ತೆರವು ಮಾಡಲಾಗಿದೆ.

Share this Story:

Follow Webdunia kannada