Select Your Language

Notifications

webdunia
webdunia
webdunia
webdunia

ಅನೈತಿಕ ಸಂಬಂಧ; ಅಫ್ಘಾನ್‌ನಲ್ಲಿ ನೂರಾರು ಯುವತಿಯರು ಜೈಲಿನಲ್ಲಿ

ಅನೈತಿಕ ಸಂಬಂಧ; ಅಫ್ಘಾನ್‌ನಲ್ಲಿ ನೂರಾರು ಯುವತಿಯರು ಜೈಲಿನಲ್ಲಿ
ಲಂಡನ್ , ಬುಧವಾರ, 28 ಮಾರ್ಚ್ 2012 (15:54 IST)
PR
'ನೈತಿಕ ಅಪರಾಧ'ದಡಿಯಲ್ಲಿ ಅಫ್ಘಾನಿಸ್ತಾನದಾದ್ಯಂತ ಸುಮಾರು 400ಕ್ಕೂ ಅಧಿಕ ಮಹಿಳೆಯರು ಹಾಗೂ ಯುವತಿಯರನ್ನು ಜೈಲಿನಲ್ಲಿ ಕೂಡಿಹಾಕಲಾಗಿದೆ ಎಂದು ನೂತನ ತನಿಖಾ ವರದಿಯೊಂದು ತಿಳಿಸಿದೆ.

ಮನೆಯಿಂದ ಓಡಿಹೋಗಲು ಯತ್ನಿಸಿದವರು, ಬಲವಂತದ ಮದುವೆ, ಗಂಡನಿಂದ ಹಿಂಸೆಗೊಳಗಾದವರು ಹೀಗೆ ವಿವಿಧ ರೀತಿಯ ನೈತಿಕ ಅಪರಾಧಡಿಯಲ್ಲಿ ನೂರಾರು ಮಂದಿ ಮಹಿಳೆಯರನ್ನು ಆರೋಪಿಗಳನ್ನು ಪತ್ತೆ ಹಚ್ಚಿರುವುದಾಗಿ ಮಾನವಹಕ್ಕು ಕಾವಲು ಪಡೆ ರಿಸರ್ಚ್ ವಿವರಿಸಿರುವುದಾಗಿ ದಿ ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ.

ಅನೈತಿಕ ಸಂಬಂಧದ ಆರೋಪದಡಿಯಲ್ಲಿ ಯುವತಿಯರನ್ನು ಸೆರೆಹಿಡಿಯಲಾಗಿದೆ. ಅದೇ ರೀತಿ ಅನೈತಿಕ ಸಂಬಂಧದ ನಂತರ ಬಲವಂತದಿಂದ ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿಕೊಂಡಿದ್ದ ಆರೋಪದ ಮೇಲೆ ಮಹಿಳೆಯರನ್ನು ಬಂಧಿಸಿರುವುದಾಗಿ ರಿಸರ್ಚ್ ತಿಳಿಸಿದೆ.

Share this Story:

Follow Webdunia kannada