Select Your Language

Notifications

webdunia
webdunia
webdunia
webdunia

ಅನಿಲ ಕೊಳವೆಗೆ ಬೆಂಕಿ: 28 ಜನರ ಸಾವು

ಅನಿಲ ಕೊಳವೆಗೆ ಬೆಂಕಿ: 28 ಜನರ ಸಾವು
ದುಬೈ , ಸೋಮವಾರ, 19 ನವೆಂಬರ್ 2007 (12:54 IST)
ತೈಲ ಸಮೃದ್ಧ ಪೂರ್ವ ಸೌದಿ ಅರೇಬಿಯದ ಮರಳುಗಾಡು ಪ್ರದೇಶದಲ್ಲಿ ಅನಿಲ ಕೊಳವೆ ಮಾರ್ಗದಲ್ಲಿ ಸಂಭವಿಸಿದ ಅಗ್ನಿಅನಾಹುತದಲ್ಲಿ 6 ಮಂದಿ ಭಾರತೀಯರು ಸೇರಿದಂತೆ 28 ಜನರು ಭಾನುವಾರ ಸತ್ತಿದ್ದಾರೆ. ಆರ್ಮಾಕೊನ ಐವರು ಉದ್ಯೋಗಿಗಳು ಸೇರಿದಂತೆ 28 ಜನರು ಸತ್ತಿದ್ದಾರೆ ಎಂದು ಆರ್ಮಾಕೊ ಹೇಳಿಕೆಯಲ್ಲಿ ತಿಳಿಸಿದೆ.

ಹರದ್-ಉತ್ಮಾನಿಯ ಅನಿಲ ಕೊಳವೆ ಮಾರ್ಗದಲ್ಲಿ ಭುಗಿಲೆದ್ದ ಬೆಂಕಿಯ ಜ್ವಾಲೆಯಲ್ಲಿ 6 ಮಂದಿ ಭಾರತೀಯರು ಸತ್ತಿದ್ದಾರೆಂದು ರಿಯಾದ್‌ನ ಭಾರತೀಯ ಅಧಿಕಾರಿಗಳು ದೂರವಾಣಿಯಲ್ಲಿ ತಿಳಿಸಿದರು.

ಸತ್ತವರ ಗುರುತು ತಕ್ಷಣಕ್ಕೆ ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಸೌದಿ ಅರೇಬಿಯದ ತೈಲ ಸಚಿವ ಆಲಿ ಅಲ್-ನೌಮಿ ರಿಯಾದ್‌ನಲ್ಲಿ ವರದಿಗಾರರ ಜತೆ ಮಾತನಾಡುತ್ತಾ, 12 ಜನರು ನಾಪತ್ತೆಯಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಬೆಂಕಿಯಿಂದ ಅನಿಲ ಪೂರೈಕೆಗೆ ತೊಂದರೆಯಾಗಿಲ್ಲ ಎಂದು ಅವರು ನುಡಿದರು.

ಆರ್ಮಾಕೊನ 50 ನೌಕರರು ನಿರ್ವಹಣೆ ಕೆಲಸದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಬೆಂಕಿ ಜ್ವಾಲೆಗಳು ಭುಗಿಲೆದ್ದಿವೆ ಎಂದು ಆರ್ಮೆಕೊ ತಿಳಿಸಿದ್ದು, ಬೆಂಕಿಯನ್ನು ಬಳಿಕ ನಿಯಂತ್ರಣಕ್ಕೆ ತರಲಾಯಿತೆಂದು ಹೇಳಲಾಗಿದೆ.

ತೈಲದ ನಿರಂತರ ಸರಬರಾಜಿಗಾಗಿ ಕೆಲವು ಅಗತ್ಯ ಕಾರ್ಯಾಚರಣೆ ಹೊಂದಾಣಿಕೆಗಳನ್ನು ಮಾಡಲಾಗಿದೆಯೆಂದು ಆರ್ಮಾಕೊ ತಿಳಿಸಿದೆ.ಹಾವಿಯಾ ಸ್ಥಾವರ ಪ್ರಮುಖ ಅನಿಲ ಸಂಸ್ಕರಣೆ ಸ್ಥಾವರವಾಗಿದ್ದು, ಅಲ್ ಘವಾರ್ ತೈಲಪ್ರದೇಶದ ಸಮೀಪದ ಮರಳುಗಾಡಿನಲ್ಲಿ ನಿರ್ಮಿಸಲಾಗಿದೆ.

Share this Story:

Follow Webdunia kannada