Select Your Language

Notifications

webdunia
webdunia
webdunia
webdunia

ರಾವಲ್ಪಿಂಡಿಯಲ್ಲಿ ಬಾಂಬ್ ಸ್ಫೋಟಕ್ಕೆ 23 ಜನರ ದಾರುಣ ಸಾವು

ರಾವಲ್ಪಿಂಡಿಯಲ್ಲಿ ಬಾಂಬ್ ಸ್ಫೋಟಕ್ಕೆ 23 ಜನರ ದಾರುಣ ಸಾವು
, ಬುಧವಾರ, 9 ಏಪ್ರಿಲ್ 2014 (16:00 IST)
PR
PR
ಇಸ್ಲಾಮಾಬಾದ್: ಪಾಕಿಸ್ತಾನದ ನಗರ ರಾವಲ್ಪಿಂಡಿಯ ತರಕಾರಿ ಮಾರುಕಟ್ಟೆಯಲ್ಲಿ ಬುಧವಾರ ಬಾಂಬ್ ಸ್ಫೋಟಿಸಿ 23 ಜನರು ದಾರುಣವಾಗಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 39 ಜನರಿಗೆ ಗಾಯಗಳಾಗಿವೆ.ಗೋವಾ ಹಣ್ಣಿನ ಪೆಟ್ಟಿಗೆಯಲ್ಲಿ ಈ ಬಾಂಬ್ ಹುದುಗಿಸಿಡಲಾಗಿದ್ದು, ಬೆಳಗಿನ ವಾಹನ ದಟ್ಟಣೆಯ ನಡುವೆ ಇದನ್ನು ಸ್ಫೋಟಿಸಲಾಯಿತು. ಇಸ್ಲಾಮಾಬಾದ್ ರಾಜಧಾನಿಗೆ ರಾವಲ್ಪಿಂಡಿ ಉಪನಗರಗಳು ಸೇರಿಕೊಂಡಿದ್ದು, ರಾವಲ್ಪಿಂಡಿ ಪಾಕಿಸ್ತಾನ ಮಿಲಿಟರಿ ಮುಖ್ಯಕಚೇರಿಯ ಸ್ಥಳವಾಗಿದೆ. ಆದರೆ ಸ್ಫೋಟವು ಸೇನಾ ಕಟ್ಟಡಗಳಿಗೆ ದೂರದಲ್ಲಿ ಸಂಭವಿಸಿದ್ದು, ದಾಳಿಯ ಉದ್ದೇಶ ಅಸ್ಪಷ್ಟವಾಗಿದೆ.

ಪಾಕಿಸ್ತಾನವು ಪಾಕಿಸ್ತಾನದ ತಾಲಿಬಾನ್ ಜತೆ ಶಾಂತಿಮಾತುಕತೆ ನಡೆಸುತ್ತಿದ್ದು, ಏಪ್ರಿಲ್ 10ರವರೆಗೆ ತಾಲಿಬಾನ್ ಕದನವಿರಾಮ ಆಚರಿಸುತ್ತಿದೆ. ಆದರೆ ಇನ್ನೂ ಹತ್ತಾರು ಉಗ್ರಗಾಮಿ ಸಂಘಟನೆಗಳು ಇದ್ದು, ಬಾಂಬ್ ಸ್ಫೋಟಕ್ಕೆ ಯಾರೂ ಹೊಣೆ ಹೊತ್ತಿಲ್ಲ. ತಾಲಿಬಾನಿಗಳು ನೂರಾರು ಕೈದಿಗಳ ಬಿಡುಗಡೆಗೆ ಆಗ್ರಹಿಸುತ್ತಿದ್ದು, ಆಫ್ಘನ್ ಗಡಿಯಲ್ಲಿರುವ ಕೆಲವು ಬುಡಕಟ್ಟು ಪ್ರದೇಶದಿಂದ ಸೇನೆಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸುತ್ತಿದೆ.

Share this Story:

Follow Webdunia kannada