Select Your Language

Notifications

webdunia
webdunia
webdunia
webdunia

ಮಲೇಶಿಯ ಗೋಪುರ ಏರಿದ ಫ್ರೆಂಚ್ 'ಸ್ಪೈಡರ್‌ಮ್ಯಾನ್'

ಮಲೇಶಿಯ ಗೋಪುರ ಏರಿದ ಫ್ರೆಂಚ್ 'ಸ್ಪೈಡರ್‌ಮ್ಯಾನ್'
ಕೌಲಾಲಂಪುರ , ಮಂಗಳವಾರ, 1 ಸೆಪ್ಟಂಬರ್ 2009 (19:26 IST)
ವಿಶ್ವದ ಅತ್ಯಂತ ಎತ್ತರದ ಗಗನಚುಂಬಿ ಕಟ್ಟಡಗಳನ್ನು ಹಗ್ಗದನೆರವಿಲ್ಲದೇ ಏರುವ ಮ‌ೂಲಕ ಸ್ಪೈಡರ್‌ಮ್ಯಾನ್ ಎಂದೇ ಹೆಸರಾಗಿದ್ದ ಫ್ರೆಂಚ್ ಆರೋಹಿ ಮಲೇಶಿಯದ ಗೋಪುರದ ಮೇಲೆ ಏರಿದ ಬಳಿಕ ಬಂಧಿತನಾಗಿದ್ದಾನೆ.

ಭದ್ರತಾ ಗಾರ್ಡ್‌ಗಳ ಹದ್ದಿನ ಕಣ್ಣುಗಳಿಂದ ತಪ್ಪಿಸಿಕೊಂಡು ಕವಿದಿದ್ದ ಕತ್ತಲಿನಲ್ಲಿ 88 ಮಹಡಿಗಳ ಗಗನಚುಂಬಿ ಪೆಟ್ರೋನಾಸ್ ಅವಳಿ ಗೋಪುರಗಳ ಅತ್ಯುನ್ನತ ಮಹಡಿಯನ್ನು 47 ವರ್ಷ ವಯಸ್ಸಿನ ಅಲೈನ್ ರಾಬರ್ಟ್ ಒಂದು ಗಂಟೆ 45 ನಿಮಿಷಗಳಲ್ಲಿ ಏರಿದ. ತಾನು ಗೋಪುರದ ತುತ್ತತುದಿಗೆ ಏರಲು ಎರಡು ಬಾರಿ ಪ್ರಯತ್ನಿಸಿದ್ದೆ ಮತ್ತು ಅದು ನನ್ನ ಕನಸಾಗಿತ್ತು ಎಂದು ರಾಬರ್ಟ್ ರಾಯ್ಟರ್ಸ್‌ಗೆ ತಿಳಿಸಿದ್ದಾನೆ.

ಸ್ಟೇಟ್ ತೈಲ ಸಂಸ್ಥೆ ಪೆಟ್ರೋನಾಸ್ ಇರುವ ಅವಳಿ ಕಟ್ಟಡಗಳ ತುತ್ತತುದಿಗೆ ರಾಬರ್ಟ್ ತಲುಪಿ ಬಳಿಕ ವೀಕ್ಷಣಾ ವೇದಿಕೆಗೆ ಇಳಿದು ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದ. ರಾಬರ್ಟ್ ವಿಶ್ವಾದ್ಯಂತ 80 ಕಟ್ಟಡಗಳನ್ನು ಏರಿದ್ದು, ಈಫಲ್ ಟವರ್, ಲಂಡನ್ ಕ್ಯಾನರಿ ವಾರ್ಫ್ ಕಟ್ಟಡ, ನ್ಯೂಯಾರ್ಕ್ ಎಂಪೈರ್ ಸ್ಟೇಟ್ ಕಟ್ಟಡ ಮತ್ತು ಚಿಕಾಗೊ ಸಿಯರ್ ಗೋಪುರ ರಾಬರ್ಟ್ ಏರಿದ ಕಟ್ಟಡಗಳಲ್ಲಿ ಸೇರಿವೆ. ಟೈವಾನ್ ರಾಜಧಾನಿ ಟೈಪೆಯಲ್ಲಿ ವಿಶ್ವದ ಅತ್ಯುನ್ನತ ಕಟ್ಟಡ ತೈಪೆ 101ನ್ನು ಬಿರುಗಾಳಿಯ ಹವಾಮಾನದ ನಡುವೆಯ‌ೂ ರಾಬರ್ಟ್ ಏರಿದ್ದ.

Share this Story:

Follow Webdunia kannada